* ಸೇರುವ ತವಕ ......
ಸುತ್ತ ಹಸಿರ ಸಿರಿ ಹೊತ್ತು
ಬಳುಕು ನಡೆಯಲಿ
ಕುಲುಕಿ ಸಾಗುವ ಪರಿ ಇದೇನು ..
ಮೈಯೊಳಗೆಲ್ಲಾ ಚಿತ್ತ ಚಿತ್ತಾರದಿ
ಬೆಳಕಿನ ಮಲ್ಲಿಗೆಯ
ಮಾಲೆ ನೇಯ್ದಿರುವರೇನು...
ನೀನೇ ಬರ ನೀಗುವ ಗಂಗೆಯಾದರೂ
ತೀರದ ದಾಹ ಹೊತ್ತಂತೆ ಚಲಿಸುವೆಯೇಕೆ
ಕಂಪಿಸುತಿದೆ ನಿನ್ನ ತನು
ಒಂದೊಂದು ಹನಿ ಯನ್ನೂ ಸಾಗರದೊಳು
ಸಮಾಗಮಿಸುವ ಆಸೆಯಲಿ
ಕುಲುಕುತ್ತಾ ಸಾಗುತಿಹೆಯೇನು ..
ಎಲ್ಲಿಂದ ಬಂತು ಈ ನಾಚಿಕೆ, ವೈಯ್ಯಾರ
ಹರಿವಾಗ ಕೇಳುವ, ಕಾಲ್ಗೆಜ್ಜೆಯ ಮಧುರ ಸ್ವರ
ಹೇಳಿಬಿಡು ನನಗೆ, ಹೆಣ್ಣೇ ನೀನು ....
ಯಾವ ಸ್ಪರ್ಶಕೆ ರೋಮಾಂಚನಗೊಂಡೆ ಹೇಳು
ಒಂದೊಂದು ಕಂಪನಕೂ
ನೂರಾರು ಅರ್ಥವಿಹುದೇನು
ಬಯಲಾದಂತೆ ಕಂಡರೂ
ಹೊತ್ತಿರುವೆ ನೂರಾರು ರಹಸ್ಯಗಳ
ಹುಲು ಮನುಜರು ನಾವು ಬಿಡಿಸಲಾರೆವದನು ..
ಚಂದ ಕವನ ..ಭಾರೀ ಖುಷಿ ಆಯ್ತು ...
ReplyDelete"ನೀರಾಗದವನು ಹಲುಬಿದನ೦ತೆ
ನೀರ೦ತೆ ಆದರೂ ಸಾಕೆಂದು
ಚಲನೆ ಬೇಡ, ಒಲುಮೆ ಬೇಡ..
ಕಟ್ಟಕಡೆಗೆ ನಿತ್ತಲ್ಲೆ ನಿಲ್ಲುವ ಯೋಗ!
ಕೊಟ್ಟಿಲ್ಲ ಜೀವಗಳು , ನನ್ನ ಬಳಸಿದ ಹೂವು !
ನಾನೆಷ್ಟು ಎಂದರಿತ ಸೂರ್ಯ ಒಣಗಿಸಿದ, ನನ್ನ ಹೀರಿಕೊಂಡ !!"