Pages

Total Visitors

Monday, March 26, 2012

ನೀರು ..


ಮಹೇಶನಿಗೆ ತಾನಿದ್ದ ಮನೆ ಬದಲಾಯಿಸಬೇಕೆಂಬ ಬಯಕೆ ಉತ್ಕಟವಾಗಿತ್ತು. ಈಗಿದ್ದ ಮನೆಯೇನೋ ವಿಶಾಲವಾಗಿ
ಸುಂದರವಾಗಿದ್ದರೂ, ನೀರಿನ ತೊಂದರೆ ಬಹಳ.

ಹುಡುಕ ಹೊರಟರೆ ಮನೆಗಳಿಗೇನು ಕೊರತೆಯೇ..?

ಹಲವು 'ಬಾಡಿಗೆಗಿದೆ' ಎಂಬ ಬೋರ್ಡ್ ಇರುವ ಜಾಗಕ್ಕೆ ಎಡತಾಕಿ ,ಕೊನೆಗೊಂದು ಮನೆ ಎಲ್ಲರಿಗೂ ಹಿಡಿಸಿತು. ಈಗಿರುವ ಮನೆಯ ನೀರಿನ ಸಮಸ್ಯೆಯೇ ತಲೆಯೊಳಗೆ ತುಂಬಿದ್ದರಿಂದ ಈ ಹೊಸ ಮನೆಯ ಮಾಲೀಕನಲ್ಲಿ ಆ ಬಗ್ಗೆ ಮಾತನಾಡಲು ಸಂಜೆ ಆಫೀಸ್ ಮುಗಿದ ನಂತರ ಹೊರಟಿದ್ದ.

 ಮಬ್ಬು ಬೆಳಕಿನಲ್ಲಿ ಕುಳಿತಿದ್ದ ಮನೆ ಮಾಲೀಕ.. ನೇರವಾಗಿ ವಿಷಯಕ್ಕೆ ಬಂದವನೇ, 'ಇಲ್ಲಿ ನೀರಿನ ವ್ಯವಸ್ಥೆ ಹೇಗಿದೆ. ಅದು ಇಪ್ಪನಾಲ್ಕು ಗಂಟೆಯೂ ಇದೆ ಅನ್ನುವುದಾದರೆ ನಮಗೆ ಈ ಮನೆ ಓ. ಕೆ.' ಅಂದ.

 'ಅಯ್ಯೋ .. ನೀರೇ..?? 'ಇಲ್ಲಿ ಬನ್ನಿ ಮನೆ ಹಿಂದೆ ದೊಡ್ಡ ಬಾವಿಯೇ ಇದೆ ನೀವು ನೋಡ್ಲಿಲ್ವಾ.. ಇಡೀ ಊರಲ್ಲಿ ಬರಗಾಲ ಬಂದರೂ ಇಲ್ಲಿನ ನೀರಿನ ಒರತೆ ಬತ್ತದು..' ಎಂದು ಹೆಮ್ಮೆಯಿಂದ ನುಡಿದ ಮಾಲೀಕ.

 ಅವನ ಹಿಂದೆಯೇ ಹೋದ ಮಹೇಶನಿಗೆ ದೊಡ್ಡ ಸಿಮೆಂಟಿನ ಕಟ್ಟೆ ಹೊಂದಿದ್ದ ಪಂಪ್ ಹಾಕಿದ ಬಾವಿ ಕಾಣಿಸಿತು. ವಿದ್ಯುತ್ ಇಲ್ಲದಿದ್ದರೆ ಉಪಯೋಗಿಸುವಂತೆ ದೊಡ್ಡ ಮರದ ರಾಟೆಯೂ ತೂಗಾಡುತ್ತಿತ್ತು. ಬಗ್ಗಿ ನೋಡಿದ. ಆಗಷ್ಟೇ ಆಗಸದಲ್ಲಿ ಮೂಡಿದ್ದ ಚಂದ್ರನ ಬೆಳಕು ಬಾವಿಯೊಳಗೆ ತೂರಿ ನೀರನ್ನು ಹೊಂಬಣ್ಣದಲ್ಲಿ ಹೊಳೆಯುವಂತೆ ಮಾಡಿತ್ತು.

 ಆದರೂ ಸಮಾಧಾನವಾಗದೆ, 'ಈಗೇನೋ ನೀರಿದೆ ಅನ್ಸುತ್ತೆ. ಮಾರ್ಚ್ ತಾನೇ .. ಬೇಸಿಗೆ ಜೋರಾಗೋದು ಎಪ್ರಿಲ್ ಮೇ ಯಲ್ಲಿ ಅಲ್ವಾ.. ಆಗ್ಲೂ ಹೀಗೆ ನೀರಿರುತ್ತಾ..?ನೀವು ಕೇಳಿದ ಬಾಡಿಗೆ ಕೊಟ್ಟು ಆಮೇಲೆ ನೀರಿಲ್ಲದೆ ಒದ್ದಾಟ ಅಂದ್ರೆ ತುಂಬಾ ಕಷ್ಟ ಆಗುತ್ತೆ. ಸರಿಯಾಗಿ ಹೇಳಿ ಬಿಡಿ. ಮತ್ತೆ ಮತ್ತೆ ಮನೆ ಬದಲಾಯಿಸೋ ತೊಂದ್ರೆ ತಪ್ಪುತ್ತೆ.'

 'ಅಯ್ಯೋ ಹೇಗೆ ಹೇಳ್ಳಿ ನಿಮ್ಗೆ.. ಈ ಬಾವೀಲಿ ಯಾವಾಗ್ಲೂ ನೀರು ಇರುತ್ತೆ.ನಿಮ್ಗೆ ಇನ್ನೂ ಅನುಮಾನ ಯಾಕೇ..ಕಳೆದ ಇನ್ನೂರು ವರ್ಷದಿಂದ ಈ ಬಾವಿ ನೀರು ಒಂದಿಷ್ಟೂ ಕಡಿಮೆ ಆಗಿಲ್ಲ ಅಂತ ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳಬಲ್ಲೆ. ಯಾಕೇಂದ್ರೆ ನಾನಿರೋದೆ ಇಲ್ಲಿ..'ಎಂದು ಕಟ್ಟೆ ಹತ್ತಿ 'ದುಡುಂ' ಎಂದು ಬಾವಿಗೆ ಹಾರಿದರು.


 ಅಷ್ಟರಲ್ಲಿ ಹಿಂದಿನಿಂದ ಗೇಟ್ ತೆಗೆದುಕೊಂಡು ಒಳ ಬಂದವನೊಬ್ಬ ..ಹ್ಹೋ ಸಾರೀ.. ಆಗ್ಲೇ ಬಂದ್ರಾ.. ಸ್ವಲ್ಪ ಲೇಟ್ ಆಯ್ತು ಬರೋದು ..ಬಾವಿ ನೋಡಿದ್ರಾ.. ಒಳ್ಳೆ ಎಳೆನೀರಿನಂತಾ ನೀರು .. ಹೇಗನಿಸ್ತು ನಿಮ್ಗೆ ಈ ಮನೆ .. ಅಂತೆಲ್ಲಾ ಕೇಳುತ್ತಾ ಇದ್ದರೂ ಮಹೇಶ್, ಕೊಂಚವೂ ನೀರಿನ ಅಲುಗಾಟಗವಿಲ್ಲದೇ ಮೌನವಾಗಿದ್ದ ಬಾವಿಯನ್ನು ನೋಡುತ್ತಾ ದಿಗ್ಭ್ರಾಂತನಂತೆ ನಿಂತಿದ್ದ.

20 comments:

  1. ಏನ್ರೀ ಕ್ಲೈಮ್ಯಾಕ್ಸಿನಲ್ಲಿ ಬೆನ್ನ ಹುರಿಯಲ್ಲಿ ಛಳಕು ತರಿಸಿಬಿಟ್ರೀ!

    ReplyDelete
  2. ಹಾ ಹಾ ! ಮಹೇಶ ನಮ್ಮ ಹೆಬ್ಬಾರರ ಹತ್ರ ಒಂದು ತಾಯತ ಕಟ್ಟಿಸಿಕೊಳ್ಬೇಕಿತ್ತು :)) ಕಥೆ ಚೆನ್ನಾಗಿದೆ ಅನಿತಾ :))

    ReplyDelete
  3. nimma kate odi maarayre nange innu ratri idi nidre barlikkilla

    JP

    ReplyDelete
  4. ಹ್ಹ..ಹ್ಹ...ಅನಿತಕ್ಕ ಕಥೆ ಬಹಳ ಚನ್ನಾಗಿದೆ. ಮಹೇಶ ಸದ್ಯಕ್ಕೆ ಮನೆ ಬದಲಾಯಿಸುವುದು ಬೇಡ ಎ೦ದು ಮನ ಬದಲಾಯಿಸಿರಬಹುದು.

    ReplyDelete
  5. story super ide.. & full comment aamele bareyuve.. eega swalpa busy.. ok bye.... take care.. good evening.. :)

    ReplyDelete
  6. ಒಳ್ಳೆ ಕತೆ ಅನಿತಕ್ಕ.. ಈಗ ಪೋಲಿಸ್ ಬೈಂದವಾ ?

    ReplyDelete
  7. ಒಳ್ಳೆ ಕತೆ ಅನಿತಕ್ಕ .. ಕೊನೆಗೆಂತೂ ಭಯಂಕರ ಕ್ಲೈಮಾಕ್ಸ್ .. ನಿಮ್ಮ ಎಂದಿನ ಶೈಲಿಯಲ್ಲೇ ಸೂಪರ್ :-)

    ReplyDelete
  8. ಇಂಗ್ಲೀಷ್ ಫಿಲ್ಮ್ ನೋಡಿದ ಹಾಗಾಯ್ತು....!

    ಮಸ್ತ್ ಕ್ಲೈಮ್ಯಾಕ್ಸು.... !

    ReplyDelete
  9. ಇದರಿಮ್ದ ತಿಳಿದು ಬರುವ ನೀತಿ ಅಂದರೆ ಏನಿದ್ದರೂ ಮನೆಯ ಹಿತ್ತಲಲ್ಲಿ ಬಾವಿ ಇದ್ದರೆ ಯಾರೂ ಆ ಮನೆ ಬಾಡಿಗೆಗೆ ಹಿಡಿಯಬೇಡಿ! ವಾ ಸೂಪರ್.

    ReplyDelete
  10. ಹಹಹಹ..ಒಳ್ಳೇ ಸಸ್ಪೆನ್ಸ್ ಕ್ರಿಯೇಟರ್ ಕಣ್ರೀ ನೀವು.. :-)
    -RJ

    ReplyDelete
  11. tumba channagide ;)

    mahesha na paadu abbbabbaa,,,,

    avanige olleya mane sigali embudu enne aashaya.. :)

    ReplyDelete
  12. Dudum endu bhaviyalli jigida vyakti yaru ?

    ReplyDelete