ನೀನು ತಂಟೆ ಮಾಡದೆ ಸುಮ್ಮನೆ ಕೂತ್ಕೊಂಡ್ರೆ ಒಂದು ಚಂದದ ಕತೆ ಹೇಳ್ತೀನಿ ನಿಂಗೆ..
ನಾನು ಕತೆ ಕೇಳಿದ್ರೆ ನೀವು ನಂಗೆ ಡೈರಿ ಮಿಲ್ಕ್ ಚಾಕೋಲೇಟ್ ಕೊಡ್ತೀರಾ..
ಹೂಂ.. ಆದ್ರೆ ಕತೆ ಮುಗಿದ ಮೇಲೆ.. ಈಗ ಸುಮ್ಮನೆ ಕೇಳು..
ಒಂದೂರು..
ಆಂಟೀ.. ಎಲ್ಲಾ ಕತೆ ಒಂದೂರಲ್ಲೇ ಯಾಕೆ ಇರೋದು.. ಬೇರೆ ಊರಲ್ಲಿ ಕತೆ ಇಲ್ವಾ..
ಒಂದೂರು ಅಂದ್ರೆ ಯಾವ ಊರು ಬೇಕಿದ್ರೂ ಆಗ್ಬಹುದು ಪುಟ್ಟಿ..
ಹುಂ..
ಅಲ್ಲೊಂದು ಸಣ್ಣ ಮನೆ.. ಅದ್ರಲ್ಲಿ ಒಂದಜ್ಜ ಒಂದಜ್ಜಿ ಇದ್ರು..
ಆಂಟೀ ಅದ್ಯಾಕೆ ಅಜ್ಜ ಅಜ್ಜಿ ಮಾತ್ರ.. ಅಲ್ಲಿ ಮಕ್ಳು ಎಲ್ಲಾ ಅಮೇರಿಕಾಗೆ ಹೋಗಿದಾರಾ...
ಹುಂ .. ಹಾಗೆ ಅಂದ್ಕೋ.. ಅಜ್ಜ ತುಂಬಾ ಸೋಮಾರಿ. ಅಜ್ಜಿ ಪಾಪ ಎಲ್ಲಾ ಕೆಲ್ಸ ಮಾಡ್ತಾ ಇದ್ದಳು.
ಆಂಟೀ ನಮ್ಮಲ್ಲೂ ಅಜ್ಜ ಏನೂ ಕೆಲ್ಸ ಮಾಡೋದೇ ಇಲ್ಲ. ಅಜ್ಜಿ ತಿಂಡಿ ಕಾಫೀ, ಊಟ ಎಲ್ಲಾ ಮಾಡ್ತಾರೆ.
ಹೌದಾ ಪುಟ್ಟಿ.. ಕತೆ ಕೇಳೀಗ.. ಒಮ್ಮೆ ಅವ್ರ ಮನೇಲಿ ಒಂದು ಶ್ರಾದ್ಧ ಮಾಡಿದ್ರು.
ಆಂಟೀ.. ಶ್ರಾದ್ಧ ಅಂದ್ರೇನು.. ??
ಹಾಗಂದ್ರೆ ನಮ್ಮಲ್ಲಿ ಯಾರಾದ್ರು ದೇವ್ರತ್ರ ಹೋಗಿದ್ರೆ ಅವ್ರನ್ನು ನೆನಪು ಮಾಡ್ಕೊಳ್ಳೋ ದಿನ ಪುಟ್ಟಿ.
ಆಂಟೀ ನಮ್ಮ ಸ್ಕೂಲಲ್ಲೂ ಶ್ರಾದ್ಧ ಮಾಡಿದ್ರು.ಆಗ ಮಕ್ಳಿಗೆಲ್ಲ ಲಾಡು ಕೊಟ್ಟಿದ್ರು.
ಶ್ರಾದ್ಧನಾ.. ಪುಟ್ಟಿ.. ಸ್ಕೂಲಲ್ಲಾ..??? ಯಾರದೇ ..??
ಆಂಟೀ.. ಗಾಂಧೀ ತಾತಾ ಅಂತ ಇದ್ರಂತೆ ಅವ್ರದ್ದು..
ಹ್ಹೋ.. ಸರಿ ಸರಿ.. ಆ ದಿನ ಅಜ್ಜಿ ತುಂಬಾ ಕಜ್ಜಾಯ ಮಾಡಿದ್ರು ..
ಕಜ್ಜಾಯ ಅಂದ್ರೇನು ಆಂಟೀ..
ಹಾಗಂದ್ರೆ ಸ್ವೀಟ್ಸ್ ಪುಟ್ಟಿ.. ಅಜ್ಜನಿಗೆ ಕಜ್ಜಾಯ ಅಂದ್ರೆ ತುಂಬಾ ಪ್ರೀತಿ. ಅವ್ನಿಗೆ ಅಜ್ಜಿ ಮಾಡಿಟ್ಟಿದೆಲ್ಲ ತಾನೊಬ್ನೇ ತಿನ್ಬೇಕು ಅನ್ನಿಸ್ತು.
ಆಂಟೀ.. ಅವ್ನು ಮಿಹಿರ್ ತರಾನಾ..? ಮಿಹಿರ್ ಮೊನ್ನೆ ಅಪ್ಪ ತಂದಿದ್ದ 'ಜೆಮ್ಸ್' ಎಲ್ಲಾ ಅವ್ನೊಬ್ನೇ ತಿಂದಿದ್ದ..
ಹುಂ.. ಹೌದು ಪುಟ್ಟಿ.. ಅಜ್ಜ ಏನು ಮಾಡಿದ ಗೊತ್ತಾ.. ಒಂದು ಮಡಿಕೆ ತಂದು ಅದ್ರೊಳಗೆ ಕಜ್ಜಾಯ ಎಲ್ಲಾ ತುಂಬಿಸಿ, ಅಂಗಳದ ಮೂಲೆಯಲ್ಲಿ ಒಂದು ಹೊಂಡ ಮಾಡಿ ಅಡಗಿಸಿಟ್ಟ.. ರಾತ್ರಿಯಾದ ಮೇಲೆ ಯಾರಿಗೂ ಗೊತ್ತಾಗದ ಹಾಗೇ ತಿನ್ಬೇಕು ಅಂದ್ಕೊಂಡ.
ಆಂಟೀ ಯಾರ್ಗೂ ಹೇಳ್ಬೇಡಿ .. ಮೊನ್ನೆ ಅಪ್ಪ ತಂದಿದ್ದ ಚಿಪ್ಸ್ ಪ್ಯಾಕೆಟ್ ದಿಂಬಿನೊಳಗೆ ಅಡಗಿಸಿ ಇಟ್ಟಿದ್ದೀನಿ. ಆಂಟೀ ನಾನೀಗ ಮನೆಗೆ ಹೋಗ್ಬೇಕು.. ಕತೆ ಬೇಡ ..ಚಿಪ್ಸ್ ಬೇಕೀಗ.. ನಂಗೆ ಬೇಗ ಡೈರಿ ಮಿಲ್ಕ್ ಕೊಡಿ..!!
--
ನಾವೂ ಕಥೆ ಕೇಳಿದ್ವಿ.
ReplyDeleteನಮ್ ಡೈರಿ ಮಿಲ್ಕ್ ಎಲ್ಲಿ? :)
ಚೆನ್ನಾಗಿದೆ ಮೇಡಂ.
ಸ್ವರ್ಣಾ
:)
Deleteಕೆಲವೇ ಕೆಲವು ಸಾಲುಗಳಲ್ಲಿ ಒಂದು ಅದ್ಭುತ ಸಾಮಾಜಿಕ ಚಿತ್ರಣವನ್ನೇ ತೆರೆದಿಡುವ ಈ ಕಥೆ ತುಂಬಾ ಇಷ್ಟವಾಯಿತು. ನೀನು ಡೈರಿ ಮಿಲ್ಕ್ ಕೊಡದಿದ್ದರೂ ಸರಿ, ನಾನೇ ಕೊಟ್ಟು ಬಿಡ್ತೇನೆ :)))))
ReplyDeleteಮುಂದಿನ ಬಾರಿಯಾದರು ಪುಟ್ಟಿಗೆ ಕಥೆ ಸುರು ಮಾಡೊ ಮೊದ್ಲು ಒಂದ್ ಡೈರಿ ಮಿಲ್ಕ್ ಮುಗಿದ ಮೇಲೆ ಎರಡು ಕೊಡ್ತೀನಿ ಅಂತ ಆಸೆ ತೋರಿಸಿ, ಮಕ್ಕಳಿಗೆ ಕೊಟ್ಟರೆ ಆಸೆ ಕೊಡ್ತೀನಿ ಅಂದ್ರೆ ನಿರಾಸೆ, ಹೀಗೆ ಕಥೆ ಅರ್ಧಕ್ಕೆ ನಿಂತರೆ ನಮಗೆ ನಿರಾಸೆ.
Deleteಪುಟ್ಟಿ ಕಥೆ ಚಂದ ಇದ್ದು :)
ReplyDeleteತುಂಬಾ ಚೆನ್ನಾಗಿದೆ... ಈಗಿನ ಮಕ್ಕಳ ಮನಸ್ಥಿತಿ ಹಾಗೂ ದೊಡ್ಡವರ ಮಾಡುವ ತಪ್ಪುಗಳನ್ನು ಸೂಕ್ಷ್ಮ ಮನಸ್ಸುಳ್ಳ ಮಕ್ಕಳ ಎಷ್ಟು ಬೇಗ ಗ್ರಹಿಸಿ ಅವರು ತೋರಿಸುತ್ತೇವೆ ಅಂದರೆ... ಅದು ನಮ್ಮ ಅರಿವಿಗೂ ಬಂದಿರುವುದಿಲ್ಲ... ನಮ್ಮ ತಪ್ಪುಗಳನ್ನು ಮಕ್ಕಳು ತೊದಲು ನುಡಿಗಳಿಂದ ಬಿಂಬಿಸಿದಾಗ ನಾವು ಮಾಡುತ್ತಿರುವ ತಪ್ಪುಗಳು ಅರಿವಿಗೆ ಬರುತ್ತದೆ...
ReplyDeleteತುಂಬಾ ಚೆನ್ನಾಗಿದೆ.. ಈಗಿನ ಮುದ್ದು ಮಕ್ಕಳ ಮನಸ್ಸು ಬಹಳ ಸೂಕ್ಷ್ಮ, ಗ್ರಹಿಸುವಿಕೆಯು ಪ್ರಮಾಣ ಹೆಚ್ಚು... ಮಕ್ಕಳ ಮುಂದೆ ಮಾಡುವ ತಪ್ಪುಗಳನ್ನು ಅವರು ಮನಸ್ಸಿನಲ್ಲಿ ಎಷ್ಟು ಅಚ್ಚುಕಟ್ಟಾಗಿ ಗ್ರಹಿಸಿ ಅದನ್ನು ನಮ್ಮ ಮುಂದೆ ಅವರು ತೋರಿಸುವ ರೀತಿಯಿಂದ ನಮಗೆ ಮುಜಗರವಾಗುವುದಂತೂ ಖಂಡಿತ... ಹಾಗೆ ಅವರ ಬಗೆಗೆ ಅಭಿಮಾನವು ಹೆಚ್ಚಾಗುತ್ತದೆ... ಬದುಕಿನ ಮಂಜಲುಗಳನ್ನು ನಿಮ್ಮ ಲೇಖನದಲ್ಲಿ ಎಲ್ಲವೂ ತೋರಿಸುತ್ತಾ ಸಾಗುತ್ತಿದ್ದೀರಿ ಹೀಗೆ ಮುಂದುವರಿಯಲಿ ನಿಮ್ಮ ಬರವಣಿಗೆ
ReplyDelete:) :)
ReplyDeleteNice
Deleteಸಹಜ ಸುಂದರ :)
ReplyDeleteಏಕ್ ಕಹಾನಿ ..........ಸುನೋ ...ವಾಸ್ತವವನ್ನು ನಿಮ್ಮ ಹಾಗೆ ಕೆಲವೇ ಸಾಲುಗಳಲಿ ...ಎಷ್ಟು ಚೆಂದವಾಗಿ ತೆರೆದಿಟ್ಟಿದ್ದಿರಿ .
ReplyDeleteಈಗಿನ ಮಕ್ಕಳು ಅಜ್ಜ ಅಜ್ಜಿ ಹಳ್ಳೀಲೆ ಯಾಕಿದ್ರು ಸಿಟಿಲೇ ಇರಲ್ವಾ ಅಂತಾ ಕೇಳೋವಷ್ಟು ಪ್ರಬುಧ್ಧವಾಗಿದಾರೆ..... ಚಿಪ್ಸ್ , ಡೇರಿ ಮಿಲ್ಕ್ ಚಾಕೊಲೇಟ್ ಇಂದಿನ ಮಕ್ಕಳ ಅಗತ್ಯತೆ ಎನ್ನೋ ತರಹ ಜಾಹೀರಾತುಗಳು ಬಿಂಬಿಸುತ್ತಿವೆ.... ನೀವು ಮಕ್ಕಳ ಬಗ್ಗೆ ಬರೆದಿರೋದು ಸತ್ಯ
ReplyDeleteಮಕ್ಕಳ ಪ್ರತೀ ಮಾತುಗಳನ್ನು ಸ್ವಲ್ಪ ಹಾಸ್ಯ ಪ್ರಜ್ಞೆಯಿಂದ ಕೇಳಿದಾಗ ಮಜ ಮಜವಾದ ಕಥೆಗಳು ಆ ಮಕ್ಕಳ ಮಾತಿನಲ್ಲೇ ಹುಟ್ಟುತ್ತವೆ .. ನಾವು ಎಷ್ಟು ಸರಳ ಸುಲಭವಾಗಿ ಮಕ್ಕಳೊಡನೆ ಮಾತನಾಡುತ್ತೆವೋ ಅಷ್ಟು ಬೇಗನೆ ನಮ್ಮೊಡನೆ ಹೊಂದಿಕೊಳ್ಳುತ್ತವೆ... ಹಾಗು ಆಗ ಮಕ್ಕಳಲ್ಲಿ ನಮ್ಮನ್ನು ಕಂಡಾಗ ಭಯದ ಭಾವನೆ ಮೂಡುವುದಿಲ್ಲ.. ಭಯವಿಲ್ಲ ಎಂಬುದು ಖಚಿತವಾದಾಗ ಎಲ್ಲಾ ಮಕ್ಕಳು ನಮ್ಮೊಂದಿಗೆ ಮಾತನಾಡಲು ಭಯ ಪಡುವುದಿಲ್ಲ.. ಮತ್ತು ನಮ್ಮ ಮಾತುಗಳಿಗೆ ಮಕ್ಕಳು ಯೋಚನೆ ಮಾಡಿ ಉತ್ತರ ಕೊಡುವಾಗ ಅವರ ಮುಖದಲ್ಲಿ ಬದಲಾಗುವ ಭಾವನೆಗಳನ್ನು ನೋಡುವುದೇ ತುಂಬಾ ಚೆಂದ.. :)
ReplyDeleteಸಣ್ಣ ಸಣ್ಣ ಮಾತುಗಳ ಕಥೆ ಈ ಮಾತುಕತೆ ಬಲು ಖುಷಿಯಾಯಿತು ಅಕ್ಕ ಓದಿದಾಗ .. ಹಾಗು ದಿಂಬಿನ ಕೆಳಗೆ ಇಟ್ಟ ಚೀಪ್ಸ್ ಪ್ಯಾಕೆಟ್ ಅಲ್ಲಿ ಇರುವೆಗಳು ಸೇರಿಕೊಂಡರೆ , ಆ ದಿಂಬಿನ ಮೇಲೆ ತಲೆ ಇಟ್ಟವರ ಪರಿಸ್ಥಿತಿ ಏನು ಅನ್ನುವುದೇ ಮತ್ತೊಂದು ಚಿಂತೆಯಲ್ಲಿ ಮಕ್ಕಳಿಗೆ ಇದು ಮನೆ ಪಾಠ ಇದ್ದಂತೆ .. ಯಾವ ಯಾವ ವಸ್ತುಗಳನ್ನು ಎಲ್ಲಿ ಜೋಪಾನವಾಗಿ ಇಡಬೇಕು ಎನ್ನುವುದನ್ನು ಚಿಕ್ಕಂದಿನಿಂದಲೇ ಕಲಿಸುತ್ತಾ ಬರುವುದು .. :) & ಅಕ್ಕ ಒಟ್ಟಾರೆ ಮಾತುಗಳು ಸ್ವಲ್ಪ ಇದ್ದರೂ ಆಲೋಚನೆಯಲ್ಲಿ ವಿಶಾಲವಾದ ರೂಪವನ್ನು ಪಡೆಯುವಂತಹಾ ಕಥೆ ಇದಾಗಿದೆ.. :) :) ತುಂಬಾ ಸ್ವೀಟ್ & ಇಂಟರೆಸ್ಟಿಂಗ್ ಸ್ಟೋರಿ .. :) & (ನಮಗೂ ಸಹ ಒಂದ್ ಡೈರಿ ಮಿಲ್ಕ್ ) ಅಹ್ಹಹಃ .. :))))))
ತುಂಬಾ ಸುಂದರ :)ಹಾಸ್ಯ ಸ್ಟೋರಿ ..
ReplyDeleteಹೀಗೆ ಮುಂದುವರಿಯಲಿ ನಿಮ್ಮ ಬರವಣಿಗೆ..
:-) :-) ಏನೋ ಅಂದ್ಕಂಡ್ರೆ ಏನೋ ಮಾಡ್ಬಿಡ್ತೀರಿ ನೀವು :-) ನಂಗೂ ಒಂದು ಚಾಕ್ಲೇಟ್ ಕೊಡಿ ಈಗ :-)
ReplyDeleteಸಹಜ ಸುಂದರ ಸಂಭಾಷಣೆ ...:)
ReplyDelete