ಅರಳುವ ಹೂವುಗಳೇ
ಮಾಡದಿರಿ ಸದ್ದು
ನೋಡುವುದ್ಯಾತಕೆ ಹೀಗೆ ಕದ್ದು
ಬೀಸುವ ಗಾಳಿಯೇ
ಒಂದಿಷ್ಟು ಸುಮ್ಮನುಳಿ
ನಾ ತೆರಳಿದ ಬಳಿಕ
ಬೇಕಾದಷ್ಟು ಸುತ್ತಿ ಸುಳಿ
ಬೆಳ್ಳಿ ಕಾಲ್ಗೆಜ್ಜೆಯೇ
ಮೆತ್ತಗಿರಲಿ ನಿನ್ನ ಸ್ವರ
ತಡ ಮಾಡದಿರು ಹೆಜ್ಜೆಯೇ
ಕಾದಿರುವ ನನ್ನ ವರ
ಓ ನನ್ನ ಹೊನ್ನ ಝರಿ
ತಂಪೆರೆಯೇ ನನ್ನೊಳಗೂ
ಬಿರು ತಾಪವೀ ಒಲವು
ಹರಿತ ಕತ್ತಿಯ ಅಲುಗು
ಒಮ್ಮೆ ಸೇರಿದರವನ
ಬೆಚ್ಚನೆಯ ಆಸರೆ
ಮತ್ತು ಏರುವುದು
ಬೇಕಿಲ್ಲ ಬೇರೆ ಸುರೆ
ತುಂಬು ಬದುಕಿನ ದಾರಿ
ಇದ್ದರೆಷ್ಟೇ ದೂರ
ಒಲುಮೆ ಪಡೆದ ಮನಕೆ
ಇನಿತಿಲ್ಲ ಬೇಸರ ..
superb!!
ReplyDeleteತುಂಬಾ ಸುಂದರವಾದ ಸಾಲುಗಳು!!
ReplyDeleteಸಖತ್ ರೀ.... !!!!
ReplyDeleteಮನದಾಳದಿಂದ ಇನಿಯನ ಕುರಿತ ತುಂಬು ಹೃದಯದ ಕವನ... ಅಚ್ಚುಕಟ್ಟಾದ ಸಾಲುಗಳ ಭಾವ... ಬದುಕಿನಲ್ಲಿ ಎಲ್ಲವೂ ಅವನೇ ಎನ್ನುವ ಕಾಳಜಿಯುಕ್ತ ಕವನ ಅದರ ಆಳದ ಅರಿವು ಮಾತ್ರ ನಿಮ್ಮ ಕಲ್ಪನೆ ನಿಮಗೆ ಸಾಟಿ ಎನ್ನುವಂತಿದೆ... ಯೋಚಿಸುವ ಆಳ ಮಾತ್ರ ಅದ್ಬುತ ನಿಮ್ಮಲ್ಲಿ... ಇನಿಯನ ಮುಂದೆ ಎಲ್ಲವೂ ಗೌಣ ಈ ಕವಿತೆಯಲ್ಲಿ...
ReplyDeleteಅರ್ಪಣಾ ಭಾವಪೂರ್ಣತೆಯ ಕವನ.
ReplyDeleteaahaa jingi chika jing jing :))))) Super boss :))
ReplyDeleteidakkondu raaga jodsi haduva vyavasthe aadare chennagittu :))))
ReplyDeleteಚೆನ್ನಾಗಿದೆ .......
ReplyDeleteಒಮ್ಮೆ ಸೇರಿದರವನ
ReplyDeleteಬೆಚ್ಚನೆಯ ಆಸರೆ
ಮತ್ತು ಏರುವುದು
ಬೇಕಿಲ್ಲ ಬೇರೆ ಸುರೆ
... nice lines