ಉತ್ತರವೇ ಇರದ ಪ್ರಶ್ನೆ ಇದು .. ಬೀಜ ಮೊದಲೋ ವೃಕ್ಷ ಮೊದಲೋ..
ತಲೆ ಕೆಡಿಸಿಕೊಳ್ಳುವವರು ನಾವೇ ..ಪ್ರಕೃತಿ ತನ್ನ ಪಾಡಿಗೆ ಕರ್ತವ್ಯವನ್ನು ಮಾಡುತ್ತಲೇ ಇರುತ್ತದೆ.
ಹನಿ ನೀರ ಸಿಂಚನಕ್ಕೆ ಬೇರುಗಳನ್ನು ಭೂಮಿಯೊಳಕ್ಕಿಳಿಸಿ ಮಣ್ಣ ಪದರದಿಂದ ಬೇಕಾದ ಜೀವರಸವ ಹೀರಿ, ಚಿಗುರೊಡೆದು, ಮೇಲೆದ್ದು ಹಸಿರಾಗಿ ಬೆಳೆದು ಎತ್ತರೆತ್ತರಕ್ಕೇರುವ
ಈ ಸೋಜಿಗ ನಿಧಾನಕ್ಕೆ ಹೂ ಬಿಟ್ಟು ಕಾಯಿ ಕಚ್ಚಿ ನಿಲ್ಲುವುದು ಮತ್ತೊಂದು ಅದ್ಭುತ.
ವಂಶಾಭಿವೃದ್ಧಿ ಮಾತ್ರ ಅದರ ಗುರಿ .. ನಮಗೋ ಅದರ ಬಣ್ಣ, ರುಚಿ , ಸುವಾಸನೆಗಳತ್ತಲೇ ನೋಟ.
ತಾಯಿ ತನ್ನೊಡಲಲ್ಲಿ ಒಂಬತ್ತು ತಿಂಗಳು ಮಗುವನ್ನು ಹೊತ್ತಂತೆ ಪ್ರತಿ ಸಸ್ಯವೋ ತನಗೆ ಭಾರವಾಗುವಂತಹ ಹಣ್ಣು ಕಾಯಿಗಳನ್ನು ಹೊತ್ತು ನಿಲ್ಲುತ್ತದೆ.
ಯಾರು ನೋಡದಿದ್ದರೆ ತನ್ನಿಂದ ತಾನೆ ಬಿದ್ದು ಭೂಮಿ ಸೇರಿ ಮತ್ತೊಂದು ಜೀವಕ್ಕೆ ನಾಂಧಿಯಾಗುತ್ತದೆ... ಹಾಗಂತ ಎಲ್ಲಾ ಹಣ್ಣಿನೊಳಗೂ ಬೀಜ ಇದ್ದೇ ಇರಬೇಕೆನ್ನುವ ನಿಯಮವೇನಿಲ್ಲ.
ಮತ್ಯಾರಿಗಾಗಿ ಹಣ್ಣನ್ನು ಹೊತ್ತು ನಿಲ್ಲುತ್ತದೆ... ? ಪ್ರಕೃತಿ ಎಂದರೆ ಎಲ್ಲಾ ಜೀವಜಾಲದ ತಾಯಿ ತಾನೆ? ಒಬ್ಬರಿಗೆ ನಿರುಪಯುಕ್ತವೆನಿಸಿದ್ದು ಇನ್ನೊಬ್ಬರ ಆಹಾರ..
ಮರ ಗಿಡಗಳು ಮಣ್ಣಿನಿಂದ ಪಡೆದದ್ದನ್ನೆಲ್ಲ ಮರಳಿ ಅಲ್ಲಿಗೆ ತಲುಪಿಸುತ್ತವೆ.. ತಮ್ಮದಾಗಿ ಏನನ್ನೂ ಉಳಿಸಿಕೊಳ್ಳದೆ .. ಹೆತ್ತೊಡಲಿಗೆ ನೆರಳಾಗಿ ತಂಪು ನೀಡುತ್ತದೆ.
ಮನುಷ್ಯನೂ ಅದರ ಒಂದು ಪುಟ್ಟ ಅಂಗ.. ತಾಯ ದೃಷ್ಟಿಯಲ್ಲಿ ಎಲ್ಲರಿಗೂ ಸಮಪಾಲು. ನಾವೋ ಸ್ವಾರ್ಥಿ ಮಕ್ಕಳು ನಮಗೆ ನಮ್ಮದೇ ಮೇಲು ..
.. ಪಡೆದುಕೊಂಡದ್ದನ್ನು ಮರಳಿ ನೀಡಲು ಸಾಧ್ಯವಿಲ್ಲವೆಂದಾದರೆ
. ನಮ್ಮ ಸುಮಧುರ ನಾಳೆಗಳಿಗಾಗಿ ಈ ಪ್ರಕೃತಿಯ ವೈಭವವನ್ನು
ಹಾಳುಗೆಡವದಿರೋಣ..
ಮುಂದಿನ ಪೀಳಿಗೆಗೆ ಇವೆಲ್ಲ ಕೇವಲ ಚಿತ್ರಪಟ ಗಳಲ್ಲಿ ಮಾತ್ರ ಉಳಿಯದೆ ಕಣ್ಣಿಗೆ ಕಂಡು ಅನುಭವಿಸಲು ಆಗುವಂತಿರಲಿ. ಕಾಡತೊರೆ, ಉಲಿವ ಹಕ್ಕಿ , ಹಸಿರ ಸಿರಿ ಸೊಬಗು ಉಳಿಸೋಣ ಬೆಳೆಸೋಣ ...
ಪರರಿಗಾಗಿ ನಿಸ್ವಾರ್ಥ ಜೀವನ ನಡೆಸುವುದನ್ನು ಪ್ರಕೃತಿಯಿಂದ ಕಲಿಯಬೇಕು. ಸಾಮಾಜಿಕ ಸಾಮರಸ್ಯದ ಬಗೆಗಿನ ಉತ್ತಮ ನಿರೂಪಣೆಯ ಲೇಖನ ಮತ್ತು ಉತ್ಕೃಷ್ಠ ಗುಣಮಟ್ಟದ ಛಾಯಾಚಿತ್ರಗಳು.ಪರರಿಗಾಗಿ ನಿಸ್ವಾರ್ಥ ಜೀವನ ನಡೆಸುವುದನ್ನು ಪ್ರಕೃತಿಯಿಂದ ಕಲಿಯಬೇಕು. ಸಾಮಾಜಿಕ ಸಾಮರಸ್ಯದ ಬಗೆಗಿನ ಉತ್ತಮ ನಿರೂಪಣೆಯ ಲೇಖನ ಮತ್ತು ಉತ್ಕೃಷ್ಠ ಗುಣಮಟ್ಟದ ಛಾಯಾಚಿತ್ರಗಳು.
ReplyDeleteಅಲ್ಲ, ಹಾಗಂತ ಉತ್ತರವೇ ಇಲ್ಲಾಂತ ತಿಳಿದುಕೊಳ್ಳುವುದೇ ಒಂದು ಪ್ರಶ್ನೆ.ಬೀಜ ಹೇಗೆ ಬಂತು ? ಮೊಟ್ಟೆ ಹೇಗೆ ಮೊದಲು? ಕೆಲವೊಮ್ಮೆ ವಿಶಾಲಾವಾದ ಆಲೋಚನೆ ಇಲ್ಲದಿದ್ದರೆ ಉತ್ತರವಿಲ್ಲದ ಪ್ರಶ್ನೆ ಹುಟ್ಟು ಹಾಕುವುದು ಸಹಜ ಮತ್ತು ನಾಟಕ ಕೂಡ. ಈ ಬೀಜ ಮತ್ತು ಹಣ್ಣು- ಮರದ ಮಧ್ಯೆ ಬಾಂದವ್ಯ ಬೆಸದ ಶಕ್ತಿ ಯಾವುದೋ ಅದೇ ಮೊದಲು . ಅದಕ್ಕೆ ಜೀವಶಕ್ತಿ ಅಂತ ಹೆಸರು. ಮೊಟ್ಟೆಯೋ ಮೊದಲಲ್ಲ ಅಥವಾ ಕೋಳಿಯೋ ಮೊದಲಲ್ಲ. ಇವೆರಡರ ನಡುವೆ ಸಂಚರಿಸಿದ ಜೀವ ನದಿ ಮೊದಲು.ತಾಯಿಯು ಮೊದಲಲ್ಲ. ಅವಳ ಮಗುವು ಮೊದಲಲ್ಲ . ಅವರಿಬ್ಬರ ನಡುವಿನ ಜೀವ ಸಂಚಾರವೇ ಮೊದಲು. ಈ ಬ್ರಹ್ಮಾಂಡ ಎಂಬ ಮೊಟ್ಟೆ,ಅಲ್ಲಿರುವ ಸೂರ್ಯ, ಚಂದ್ರ, ಅವರನ್ನು ಕಾಯುವ ನಕ್ಷತ್ರ ಪುಂಜಗಳೂ ಮೊದಲಲ್ಲ .ಇವೆಲ್ಲವನ್ನೂ ಏನೇನು ಮಾಡಬೇಕೆಂದು ನಿರ್ಧರಿಸಿದ ಶಕ್ತಿ ಮೊದಲು. ಈ ಜೀವ ಶಕ್ತಿಗಿಂತ ದೊಡ್ಡ ದೇವರುಂಟ?
ReplyDeleteಒಂಭತ್ತು ತಿಂಗಳ ನವಮಾಸದ ಮಗು ಹೇಗೆ ಬೆಳೆಯುತ್ತದೆ ಅಂತ ಇಂದಿನ ವೈದ್ಯಕೀಯ ಶಾಸ್ತ್ರ ಗ್ರಂಥ ಬರೆದಿದ್ದೆ. ಬೆಳೆಯುವುದು ಅಂದರೇನು? ಅಲ್ಲಿರುವ ಶಕ್ತಿಯ ಅಣುವಿನ ಜೀವ ಸಂಚಾರದ ಬಗ್ಗೆ ಪ್ರಶ್ನೆಯೇ ಇದೆ ಹೊರತು ಉತ್ತರವಿಲ್ಲ. ಈ ಅಗೋಚರ ಶಕ್ತಿಯ ಬಗ್ಗೆ ವಿಶಾಲವಾದ ಮನಸ್ಸಿಲ್ಲದಿದ್ದರೆ , ಮಂದಿರದಲ್ಲೋ, ಮಸೀದಿಯಲ್ಲೋ, ಚರ್ಚಿನಲ್ಲೋ ಅಥವಾ ನಾವು ನಾವಾಗಿಯೇ ಸೃಷ್ತಿಸಿದ ಮಾರಮ್ಮನ ಗುಡಿ, ಭಗವತಿಯ ಗುಡಿಯಲ್ಲಿ ಭಜನೆ ಮಾಡುತ್ತಾ ಕುಳಿತುಕೊಳ್ಳುತ್ತೇವೆ. ಅದು ಈ ಶರವೇಗದಲ್ಲಿ ಬೆಳೆಯುತ್ತಿರುವ ಜಗತ್ತಿನ ಹತ್ತು ಹಲವು ಹುಚ್ಚು ಮನಸ್ಸುಗಳ ಪ್ರತೀಕ.
ತಿಳಿದೆನೆಂದರೂ ತಿಳಿಯದ, ಪಡೆದೆನೆಂದರೂ ಪಡೆಯದ, ಅರಿಯಹೊರಟರೂ ನಿಲುಕದ, ಅಗಾಧತೆ ಪ್ರಕೃತಿಯಲ್ಲಿದೆ. ಆ ಅನಂತ ರಹಸ್ಯಗಳ ಕೀಲಿ ಕೈ ಯಾರ ಬಳಿ ಇರುವುದೋ ಅವನನ್ನು ಶಕ್ತಿ ಎನ್ನಬಹುದು. ಒಂದಿಷ್ಟು ಅಲ್ಲೊಮ್ಮೆ ಇಲ್ಲೊಮ್ಮೆ ನಮ್ಮ ಗೋಚರಕ್ಕೆ ಬಂದರೂ , ನಮ್ಮ ನಮ್ಮ ಬೊಗಸೆ ಎಷ್ಟು ಹಿಡಿಯಲು ಸಾಧ್ಯವೋ ಅಷ್ಟೆ ತುಂಬಿ ಕೊಳ್ಳಬಹುದಷ್ಟೇ.. ಹಾಗಾಗಿ ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳು ಬೇಕೇ ಬೇಕೆನ್ನುವ ಹಪಹಪಿಕೆ ಏಕೆ? ಇರಲಿ ಸ್ವಲ್ಪ ನಮ್ಮದಲ್ಲದ್ದು, ನಮ್ಮದಾಗದ್ದು .. ನಮ್ಮರಿವಿಗೆ ಮೀರಿದ್ದು ..
ReplyDeleteprkrutiya sakshatkara chennagide...photogalantoo nayana manohara...nirropaneya dhati, shaili ellaa mana sooregonditu !
ReplyDelete10Q AS :)
ReplyDeletewow sakkat..
ReplyDeleteಅರ್ಥವತ್ತಾದ ಬರಹ ......ಪ್ರಕೃತಿ ಎಷ್ಟು ನಿಸ್ವಾರ್ಥಿ ಯೋ ಮನುಷ್ಯ ಅಸ್ಟೆ ಸ್ವಾರ್ಥಿ ..ಎಸ್ಟಿದ್ದರು ತನಗೆ ಬೇಕೆಂಬ ದುರಾಸೆ...ಅದೇ ಇಂದಿನ ವಾತಾವರಣದ ಬದಲಾವಣೆಗೆ ಕಾರಣ...ಈಗ ಅದನ್ನು ಅನುಭವಿಸುತ್ತಿರುವವನು ಅವನೇ....ಮಾಡಿದ್ದುಣ್ಣೋ ಮಹರಾಯ....
ReplyDeleteಕೊನೇಚಿತ್ರ ಯಾವ ಹಣ್ಣು ಅದು?
ReplyDeleteಮಾಲಾ
ಗಡಿಯಾರ ಹಣ್ಣು ಅಂತ ಹೇಳ್ತೀವಿ ಮಾಲಾ.. ಕಾಡು ಹಣ್ಣು .. ಹುಳಿ ಸಿಹಿ ರುಚಿ
Delete