ನಮ್ಮದೂ ಸಮಪಾಲು
ಹೊತ್ತ ಹೊರೆ ಹಸಿವ ಇಂಗಿಸುವುದಾದರೆ
ಭಾರವೆಲ್ಲಿಯದು..?
ಬದುಕ ಹಗುರಗೊಳಿಸುವ
ಬಿಸಿಯುಸಿರ ಚೆಲ್ಲಿ
ಕಷ್ಟಗಳ ಹಂಚಿಕೊಳ್ಳುವೆವು
ಗೆಳೆತನದ ಬೆಳಕಿನಲಿ
ಎಲ್ಲವೂ ನಿಚ್ಚಳ
ಸೋಲುವ ಕಾಲುಗಳಿಗೆ ಮಾತುಗಳ
ಸಾಂತ್ವನದ ನೇವರಿಕೆ
ತಿರುವು ಕಳೆದ ಬಳಿಕ
ಬಂದೇ ಬರುವುದು ಗೂಡು
ಮತ್ತೊಮ್ಮೆ ಹೊರಳಿ ನೋಡಿ
ನಸುನಗುವಿನ ಪುಟ್ಟ ವಿದಾಯ
ಕಣ್ಣಲ್ಲಿ ಮರಳಿ ಸೇರುವ
ನಾಳೆಗಳ ಕನಸು..
tara mara like! Very good Anitha :):):)
ReplyDelete