ಸಡನ್ ಹಾಕಿದ ಬ್ರೇಕಿಗೆ ಈಗಷ್ಟೇ ಮುಗಿಸಿ ಬಂದ ಪಾರ್ಟಿಯ ಗುಂಗಿನಲ್ಲಿದ್ದ ಚರಣ್ ಮುಗ್ಗರಿಸಿ, 'ಯಾಕೋ... ಏನಾಯ್ತೋ ವಿಶ್ವಾ' ಅಂದ
--
ಕತ್ತಲಿನ ಹಾದಿ , ಕಾರಿನ ಹೆಡ್ ಲೈಟಿನ ಬೆಳಕಿಗೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕೈನೆಟಿಕ್ ಪಕ್ಕದಲ್ಲಿ ನಿಂತ ಯುವತಿ, ಕಾರಿಗೆ ಅಡ್ಡ ಕೈ ಹಿಡಿದು ನಿಲ್ಲಿಸುವಂತೆ ಸನ್ನೆ ಮಾಡುತ್ತಿರುವುದು ಕಾಣಿಸಿತು.
ಚರಣ್ ವಾಚಿನಲ್ಲಿ ಗಂಟೆ ನೋಡಿಕೊಂಡ . ಹನ್ನೊಂದೂವರೆ .. ಇಬ್ಬರೂ ಮುಖ ಮುಖ ನೋಡಿಕೊಂಡು ಕಾರ್ ನಿಲ್ಲಿಸಿದರು.
ಆಕೆ ಕಾರಿನ ಕಿಟಕಿಯತ್ತ ಬಗ್ಗಿ 'ಗಾಡಿ ಹಾಳಾಗಿದೆ. ಪ್ಲೀಸ್ ಸ್ವಲ್ಪ ಸಹಾಯ ಮಾಡಿ' ಅಂದಳು.
ವಿಶ್ವ ಆಗಲೇ ಚರಣ್ ಕಡೆಗೆ ತಿರುಗಿ, ಕಣ್ಣಲ್ಲೇ ಏನೋ ಸನ್ನೆ ಮಾಡಿದ.
ಪಾರ್ಟಿಯಲ್ಲಿ ಏರಿಸಿದ್ದ ಗುಂಡು ಕೆಲಸ ಮಾಡುತ್ತಿತ್ತು. ತಾನಾಗಿ ಬಂದು ಕೈಗೆ ಸಿಕ್ಕಿದ ಹಕ್ಕಿಯನ್ನು ಬಿಡಲುಂಟೇ ..!!
ಕಾರಿನ ಎರಡು ಬಾಗಿಲುಗಳಿಂದ ಇಳಿದವರು ಎರಡೂ ಕಡೆಯಿಂದ ಆಕೆಯನ್ನು ಸುತ್ತುವರಿದರು. ಆಕೆ ಅಯೋಮಯವಾಗಿ 'ಪ್ಲೀಸ್, ಪ್ಲೀಸ್ 'ಎನ್ನುತ್ತಿರುವಾಗ ಚರಣ್ ಆಕೆಯ ಕೈ ಹಿಡಿದು ತನ್ನೆಡೆ ಎಳೆದುಕೊಂಡ.
ಅಷ್ಟೆ..
ಬುಡ ಕಡಿದ ಬಾಳೆ ಗಿಡದಂತೆ ಆತನ ಮೇಲೆ ಬಿದ್ದಳು.
ಏನಾಯಿತಪ್ಪ ಎಂದು ಕಕ್ಕಾಬಿಕ್ಕಿಯಾದ ಅವನಿಗೆ ಕಂಡದ್ದು ಹಲ್ಲುಗಳನ್ನು ಕಟ ಕಟಿಸುತ್ತಾ ಕಣ್ಣುಗಳೆಲ್ಲ ಮೇಲಕ್ಕೆ ಸಿಕ್ಕಿದಂತಾಗಿ ನಡುಗುತ್ತಿರುವ ಅವಳ ದೇಹ.
ವಿಶ್ವ ಕೂಡಲೇ 'ಪಿಟ್ಸ್ ಕಣೋ .. ಬಿಟ್ಬಿದು' ಎಂದ. ಕಾರಿಗೆ ಅಡ್ಡವಾಗಿ ಬಿದ್ದವಳನ್ನು ಇಬ್ಬರೂ ಎತ್ತಿ ರಸ್ತೆಯ ಪಕ್ಕಕ್ಕೆ ಮಲಗಿಸಿದರು. ಇನ್ನೂ ಅವಳ ದೇಹ ನಡುಗುತ್ತಲೇ ಇತ್ತು.
'ಥೂ ಕರ್ಮ ಕಣೋ ನಡೀ ಬೇಗ ..' ಎಂದ ವಿಶ್ವನ ಮಾತಿಗೆ ಗೋಣಾಡಿಸುತ್ತ ಗಾಡಿ ಏರಿದ ಚರಣ್..
ಕಾರ್ ಮುಂದೋಡುತ್ತಲೇ ಬಿದ್ದಿದ್ದ ಯುವತಿ ಸೀರೆಯ ದೂಳು ಕೊಡವಿಕೊಳ್ಳುತ್ತ ಎದ್ದು , ಅವರಿಬ್ಬರ ಜೇಬಿನಿಂದ ತೆಗೆದ ಪರ್ಸುಗಳ ದಪ್ಪವನ್ನು ಕೈಯಿಂದಲೇ ಮುಟ್ಟಿ ಅಂದಾಜಿಸುತ್ತಾ ಕೈನೆಟಿಕ್ ಕಡೆಗೆ ನಡೆದು ಸ್ಟಾರ್ಟ್ ಮಾಡಿ ಹೊರಟಳು.
:D:D:D
ReplyDeletehey twist subbi sooooooooooper :))
ReplyDeleteTwist expert..:) ನನಗೆ ಅಂದಾಜಾಗಿತ್ತು ..ಈ ಹುಡುಗಿದು ಏನೋ ಕರಾಮತ್ತು ಇದೆ ಅಂತ ..ನಿಮ್ಮನ್ನು ನಾನೀಗ ಸ್ವಲ್ಪ ಬಲ್ಲೆ ...!!ತುಂಬಾ ಮಜಾ ಬಂತು .ಅಪರೂಪಕ್ಕೆ ಮನಸ್ಸನ್ನು ತಿಳಿಗೊಳಿಸಿ ಹಗುರವಾಗಿಸುವ ನಿಮ್ಮ ಕಿರು ಕಥೆಗೆ Hats off ....ಅಭಿನಂದನೆಗಳು ..ಅನಿತಾ .
ReplyDeleteಸಣ್ಣ ತಿರುಳುಳ್ಳ ಕಥೆ, ಮನುಷ್ಯನ ಸ್ವಭಾವವನ್ನು ಚಿಕ್ಕದಾಗಿ, ಚೊಕ್ಕದಾಗಿ ಹೇಳಿಬಿಟ್ಟಿದ್ದೀರಾ, ಆ ಕ್ಷಣ ಯೋಚಿಸುವ ಮನಸ್ಸು ಮುಂದಿನ ಸರಿ-ತಪ್ಪುಗಳನ್ನು ಗಣನೆಗೆ ತೆಗೆದುಕೊಳ್ಳದೆ ಸುಖದ ಬೆಂಬತ್ತಿ ಮೋಸಹೋಗುವ ಪರಿಯನ್ನು ಚೆನ್ನಾಗಿ ಹೇಳಿದ್ದೀರಾ? ಹುಡುಗರಿಗೆ ಒಂದು ನೀತಿ ಪಾಠವಿದ್ದಂತೆ, ಜೊತೆಗೆ ಕೊನೆಯಲ್ಲಿ ಅದ್ಬುತವಾಗಿ ಕಥೆಯ ಹಾದಿಯನ್ನು ಬದಲಾಯಿಸುವ ಕಲೆ ನಿಮಗೆ ಅಚ್ಚುಕಟ್ಟಾಗಿ ನಿಭಾಯಿಸಿದ್ದೀರಾ, ಒಟ್ಟಿನಲ್ಲಿ ಸಣ್ಣ ಕಥಾಲೋಕ ಸೂಪರ್...
ReplyDeleteha ha....wat an idea madamjiiiiii
ReplyDeletemasth twist
ReplyDeleteಅಕ್ಕ .....ಸೂಪರ್ ಆಗಿದೆ. ಸಣ್ಣದಾಗಿ ಚೊಕ್ಕ ಕಥೆ . ಇನ್ನ್ಮುಂದೆ ಹುಡುಗಿಗೆ ಲಿಫ್ಟ್ ಕೊಡುದಕ್ಕಿಂತ ಮುಂಚೆ ನೂರು ಸಲ ಯೋಚಿಸ್ಬೇಕ್ಕಪ್ಪ !!
ReplyDeleteಕಥೆಯ ಕೊನೆ ಸೊಗಸಾಗಿದೆ
ReplyDeleteಹಾ ಹಾ ಚೆನ್ನಾಗಿದೆ ...ಇಂತವರಿಂದ ಹುಷಾರಾಗಿರಬೇಕು .. ನೀವೂ ಶ್ರಮಪಟ್ಟಿದ್ದಕ್ಕೆ ಕತೆ ಸೊಗಸಾಗಿ ಮೂಡಿಬಂದಿದೆ .. ಇಳಿಗತ್ತಳಲ್ಲಿ ಕಾರ್ ಫೋಟೋ ತೆಗೆದು ಬೈಕ್ ಮೇಲೆ ಕುಳಿತು .... ಆ ಕ್ಷಣಕ್ಕೆ ಸ್ವಾಭಾವಿಕವಾಗಿ ಹೊಳೆವ ಆಲೋಚನೆಗಳಿಗೆ ಮೆಚ್ಚಬೇಕಾದ್ದೆ ..
ReplyDeleteಹ್ಮ್ ಚಿಕ್ಕ ಚೊಕ್ಕ ಕಥೆ ಕುತೂಹಲ ಉಳಿಸಿಕೊ೦ಡು ಹೋಯ್ತು ಚೆನ್ನಾಗಿದೆ
ReplyDeleteಹರಿ
ha ha.... I actually went into lot of other imaginations.....
ReplyDeletegud1 Ani.. :)
:-) climax soooopper
ReplyDeletemalathi S
Hahahhaha... :-)
ReplyDeleteSakkath BISCUIT haakteera neevu :)
ಹೀಗೂ ಆಗಬಹುದು. ಎಲ್ಲಾ ಕಡೆ ಒನ್ ವೇ ಟ್ರಾಫಿಕ್ ಇರೋದಿಲ್ಲ. ಒನ್ ವೇ ಇದ್ದರೂ ಅದು ವಿರುದ್ಧ ದಿಕ್ಕಿನಲ್ಲೂ ಇರಬಹುದು.
ReplyDeleteಚೆನ್ನಾಗಿದೆ ರೀ..... :)
ReplyDeletesakath twist :)
ReplyDeleteಉತ್ತಮವಾದ ಒಂದು ಸಣ್ಣ ಕಥೆ ,ಖುಷಿ ಕೊಟ್ಟಿತು ಧನ್ಯವಾದಗಳು ಮೇಡಂ.
ReplyDeletehmm, not bad..
ReplyDeleteತುಂಬಾ ತಮಾಷೆಯಾಗಿದೆ. ನೈಸ್
ReplyDeleteabba enu anitha avre etara bardre odovra kathe aste .. :) :) tumba channagi ede .... ! :)
ReplyDeleteಓಹ್... ಹೀಗೊಂದು ಘಟನೆಯ ಕೊನೆ ಓದಿ ಫಿಟ್ಸ್ ಬಂದಂತೆ ಆಯಿತು.... ಚೆನ್ನಾಗಿದೆ ಟ್ವಿಸ್ಟ್.... :)
ReplyDeleteಚೊಕ್ಕವಾದ ಕಥೆ ಮತ್ತು ಎಂದಿನಂತೆ ಕ್ಲೈಮ್ಯಾಕ್ಸಿನಲ್ಲಿ ತಿರುವುಕೊಡುವ ನಿಮ್ಮ ಶೈಲಿ ಚೆನ್ನಾಗಿದೆ.
ReplyDeleteಹ್ಹಾ..ಹ್ಹಾ.. ತು೦ಬಾ ಚನ್ನಾಗಿದೆ ಅನಿತಕ್ಕ..
ReplyDeleteದೆವ್ವದ ಕಥೆ ಅಂದ್ಕೊಂಡೆ... ಹಾಗಾಗಲಿಲ್ಲ
ReplyDeleteನಾನು ಈ ನಿಮ್ಮ ಶೈಲಿಯನ್ನು ಅನುಸರಿಸಲು ಪ್ರಯತ್ನ ಮಾಡಿ ಸೋತಿದ್ದೇನೆ..! ಕಡೆಯವರೆಗೂ ಆ ಟ್ವಿಸ್ಟ್ ನ ಗಮ್ಮತ್ತನ್ನು ಉಳಿಸಿಕೊಂಡು ಓದಿಸಿಕೊಳ್ಳುವ ನಿಮ್ಮ ಚತುರತೆಗೆ ಸಲಾಂ.. ಟ್ವಿಸ್ಟ್ ನ ಕಿಕ್ ಗೆ ನನಗೇ ಫಿಟ್ಸ್ ಬಂದಂಗಾಯ್ತು..:-D ಚೆನ್ನಾಗಿದೆ ಅನಿತಕ್ಕ..:)))
ReplyDeleteನಾನಂತೂ ಗಾಡಿ ನಿಲ್ಲಿಸುವುದಿಲ್ಲ ಬಿಡಿ ಐಶ್ವರ್ಯ ರೈ ಎದುರಿಗೆ ನಿಂತು ಕೈ ಮಾಡಿದರೂ! ಸುಮ್ಮನೇ ರಿಸ್ಕ್ ಪರ್ಸ್ ಕಳಕೊಳ್ಳಬೇಕು!
ReplyDeleteಕಿರುಗತೆಯಲ್ಲಿ ಈ ಪರಿಯ ತಿರುವು ನೀಡುವ ನಿಮ್ಮ ಚಾಕಚಕ್ಯತೆ ಮೆಚ್ಚಲೇಬೇಕು.
ಕಹಾನಿ ಅಂತ್ಯ ತುಂಬಾ ಇಷ್ಟ ಆಯ್ತು... :)
ReplyDeleteಯಾವಾಗಲೂ ನಮ್ಮ ಹುಷಾರಿನಲ್ಲಿ ನಾವು ಇರಬೇಕು ಕಪಟತನ ಯಾವ ರೂಪದಲ್ಲಿ ಇರುತ್ತೆ ಅನ್ನೋದು ಹೇಳಕ್ಕಾಗಲ್ಲ ಅನ್ನೋದು ಈ ಕಥೆಯ ನೀತಿ Nice twist
ReplyDeleteNice one ri...
ReplyDeletenice story.... Saraswathi S Bhat.
ReplyDeletehahaha...Super ri Madam....
ReplyDeletehha hha hha..super...photo haakiddu sakkat ide...
ReplyDeleteChannagide ..short one ...!
ReplyDelete