ಸಾಗಬೇಕಿದೆ ದಾರಿ ಬಹು ದೂರ
ಹೊತ್ತಿರುವುದು ಹಗುರವೇನಲ್ಲದಿದ್ದರೂ
ಹೊರೆಯನಿಳುಹಲಾರೆನು...
ನನ್ನದಿದು ಕರುಳ ಬಳ್ಳಿ
ಹೊಳೆವ ನಾಳೆಯ ಬೆಳಕು
ಕೈ ಹಿಡಿದರೆ ಸಾಕು ನಡೆಯಬಹುದಿನ್ನು
ಎನ್ನುವವರೆಗಾದರೂ ಎತ್ತಿಕೊಳಲೇ ಬೇಕು..
ಹಾದಿ ಬದಿಯ ಮುಳ್ಳು ಕಲ್ಲುಗಳು
ಪಾಪದ ಪಾದಗಳಿಗೆ ತಾಕೀತೇನೋ..
ನಾನಾದರೋ ಕಷ್ಟಗಳ ಸಹಿಸಿ
ಗಟ್ಟಿಯಾದವನು..
ಅವಳು ನವಮಾಸ ಹೊತ್ತು
ಹೆತ್ತ ತಾಯಿ
ಕೊಂಚ ನಾನೂ ಅನುಭವಿಸುತ್ತೇನೆ
ಆ ಕಷ್ಟ ಆ ಸುಖವ..
ದಾರಿ ತುಳಿವ ನೋವು ನಲಿವುಗಳು
ಮುಂದಿದೆ.. ಇರಲಿ ಬಿಡು
ಈಗಲೇ ಏಕೆ ನಾಳೆಯ ಚಿಂತೆ..
"ಕೊನೆ ತನಕ ನಾನು ಹೋರಾಡಿ ಗೆಲುವೆ" ಎಂಬ ಬೆಂಕಿಯ ಬಲೆ ಚಿತ್ರದ ಹಾಡಿನ ಹಾಗೆ ಹೋರಾಡಿ ಗೆಲ್ಲುವ ಹುಮ್ಮಸ್ಸು ತುಂಬುವ ಪದಗಳ ಸಾಲು ಸೂಪರ್
ReplyDelete" ಕೊಂಚ ನಾನೂ ಅನುಭವಿಸುತ್ತೇನೆ
ReplyDeleteಆ ಕಷ್ಟ ಆ ಸುಖವ.. "
ಈ ಪರಿಯ ಸಮಾನತೆಯನ್ನೇ ಪ್ರತಿ ಹೆಣ್ಣೂ ಮಗಳೂ ತಮ್ಮ ಬಾಳ ಸಂಗಾತಿಯಿಂದ ಬಯಸುವುದು.
ಅತ್ಯುತ್ತಮ ಚಿತ್ರ ಕವನ.
bala payanadali naija kavana
ReplyDelete