Pages

Total Visitors

Monday, November 7, 2011

ಕಿಟಕಿ ..


ನಾನಿದ್ದೆ ಜೀರ್ಣವಾಗಿದ್ದ ಪುಟ್ಟ ಮನೆಯಲ್ಲಿ ...
ಆಗಸದ ಸುಡು ಸೂರ್ಯ ಸುಡುತ್ತಿದ್ದ ನನ್ನ
 ಮಳೆನೀರ ಎರಚಲಿಗೆ ಮುಖವೊಡ್ಡುತ್ತಿದ್ದೆ..
ತಂಗಾಳಿ ನನ್ನ ಒಳ ಹೊರಗೆ 
ಸುಳಿ ಸುಳಿದು ಆಟವಾಡುತ್ತಿತ್ತು..
ಪ್ರತಿ ಕಂಬಿ ಕಂಬಿಗಳಲ್ಲೂ 
ಪ್ರಿಯಕರನ ಕಾದಿದ್ದ ಪ್ರೇಯಸಿಯ ಕೈಯ ಬಿಸಿ,
ಬರದಾಗ ನಿಂತು ಕಣ್ಣೀರು ಸುರಿಸಿದ್ದ ಅವಳ ಹೃದಯದ ಚೂರು .....
 ಮೇಲೇರ ಹೋಗಿ ಬಿದ್ದು ಅತ್ತಿದ್ದ 
ಪುಟ್ಟ ಕಂದನ ಅಳು ......
ಅಪ್ಪನ ಹೆಗಲೇರಿ ನನ್ನಿಂದ ಎತ್ತರ ಎಂದು ನಕ್ಕಿದ್ದ ಮುಗ್ದ ಹಾಸ ...
 ಕೈಯಾಸರೆಯಲ್ಲೇ ನಡೆಯುತಿದ್ದ ಅಜ್ಜಿಯ ಭರವಸೆ....
ಯಾರೋ ಬಂದು ನನ್ನಂದವ  ಕಂಡು ಎತ್ತಿ ಒಯ್ದರು 
ಸುಂದರ  ಅರಮನೆಗೆ.........
ಅಮೃತ ಶಿಲೆಯ ಗೋಡೆಯೇರಿದ ನಾನು ಕಪ್ಪು ಕನ್ನಡಿಯೊಳಗೆ ಬಂಧಿ ...
ಒಳಗಿನಿಂದಾದರೋ ಕಸೂತಿಯ ಪರದೆಗಳ ಮಾಲೆ...
ಇಲ್ಲಿ ನನ್ನನಾರು ನೋಡುವರಿಲ್ಲ ....ಕಾಡುವರಿಲ್ಲ...ಆಡುವರಿಲ್ಲ....
ನನ್ನ ಅಗತ್ಯವೇ ಇಲ್ಲದ ಸದಾ ಮುಚ್ಚಿರುವ ಬಾಗಿಲಿನ ಈ ಮನೆಯಲ್ಲಿ.....   

5 comments:

  1. ಜೀವವಿಲ್ಲದ ಕಿಟಕಿಗೊಂದು ಜೀವದ ಕಥೆ... ನಿಮ್ಮ ಕಲ್ಪನೆ ಸೊಗಸಾಗಿ ಮೂಡಿ ಬಂದಿದೆ.. :)

    ReplyDelete
  2. ತುಂಬಾ ಚೆನ್ನಾಗಿದೆ ಈ ಕವಿತೆಯ ಸಾಲುಗಳು. ಆಕಾಂಕ್ಷೆಯ ನಿವೇಧನೆ, ಆರಾಧನೆಯನ್ನು ಈ ಕವಿತೆಯಲ್ಲಿ ಕಂಡಿದ್ದೇನೆ. ಕಾವ್ಯಬದ್ಧ ಭಾವಾರ್ಥಗಳೂ ಕೂಡ ನವೀನವಾದುದು ಅನ್ನಿಸಿತು.ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಅನಿತಕ್ಕ.

    ReplyDelete
  3. super....kitakiya hinde eishtu bhavanegalu...!!!

    ReplyDelete
  4. chennagiddu kavana.. Kitaki aache kanadu ashte alla helo tara hindina bhauagala varnaneya kalpanene super

    ReplyDelete
  5. ವಿಭಿನ್ನ ಶೈಲಿಯ ಕವಿತೆ ! ಚೆನ್ನಾಗಿದೆ.

    ReplyDelete