ಪ್ರಪಂಚವಿಡೀ ಒಂದೇ ಶಬ್ಧದೊಳಗೆ ಸೇರಿಕೊಂಡಂತೆ,ಬೇರೆಲ್ಲವೂ ಇದರೊಳಗೆ ಅಡಗಿಕೊಂಡಂತೆ, ಮಗಳಿಗೆ ಮೂಸಂಬಿ ಜ್ಯೂಸ್ ಮಾಡುವ ತಯಾರಿಯಲ್ಲಿ ಬಿಡಿಸಿದ್ದ ತೊಳೆಗಳನ್ನು ಮಿಕ್ಸಿಗೆ ಹಾಕಿ ತಿರುಗಿಸುತ್ತಿದ್ದಳು. ಮಿಕ್ಸಿ ಆಫ್ ಮಾಡಿ ಜ್ಯೂಸನ್ನು ಮಗಳ ಇಷ್ಟದ ಗಾಜಿನ ಲೋಟದೊಳಗೆ ಸುರಿಯುತ್ತಿರುವಾಗಲೇ ಹೊರಗಿನಿಂದ ಬಿಕ್ಕಳಿಸಿ ಅಳುವ ಸ್ವರ ಕೇಳಿಸಿತು ಶಾಂತಾಳಿಗೆ.
ಅರೇ..!! ಪಲ್ಲವಿ .. ಆಗ್ಲೇ ಬಂದಾಯ್ತಾ..ಇವತ್ತೇನಾಯ್ತಪ್ಪಾ ಇವಳಿಗೆ..? ಕೊಂಚ ಹಠಮಾರಿ.. ಜೊತೆಗೆ ಎಲ್ಲಾದಕ್ಕು ಅಳು.. ಎಂದು ಯೋಚಿಸುತ್ತಲೇ ಮಗಳ ಕೋಣೆಯೆಡೆಗೆ ಹೆಜ್ಜೆ ಹಾಕಿದಳು ಶಾಂತಾ..
ಅಪ್ಪನನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡಿದ್ದರಿಂದ ಅಪ್ಪ ಅಮ್ಮ ಎಲ್ಲವೂ ಆಗಿ ಬೆಳೆಸುವ ಅನಿವಾರ್ಯತೆ. ಆದರೂ ಆಗಾಗ ಅಪ್ಪ ಎಲ್ಲಿರಬಹುದು ಈಗ ..? ನಮ್ಮಿಬ್ಬರನ್ನು ನೋಡ್ತಿರಬಹುದಾ.. ಅಂತೆಲ್ಲ ಕೇಳುತ್ತಿದ್ದಳು.
ಆಗಸದಲ್ಲೆಲ್ಲ ಹರಡಿ ಕಣ್ಣು ಮಿಟುಕಿಸುವ ಚಿಕ್ಕಿಗಳೆಡೆಗೆ ಬೆರಳು ತೋರಿಸಿ ' ಅಪ್ಪ ನಕ್ಷತ್ರವಾಗಿದ್ದಾರೆ ಪುಟ್ಟಿ.. ಅಲ್ಲಿಂದಲೇ ನಮ್ಮನ್ನು ನೋಡ್ತಾರೆ ಎಂದು ಮಗಳನ್ನು ಸಮಾಧಾನಿಸುತ್ತಿದ್ದಳು ಶಾಂತಾ ..
ರಾತ್ರಿ ಕೆಲವೊಮ್ಮೆ ಬಹಳ ಹೊತ್ತು ಆಗಸದೆಡೆಗೆ ನೋಟ ಹರಿಸುವುದು ಪಲ್ಲವಿಯ ಇಷ್ಟದ ಕೆಲಸ ಆಗಿತ್ತು. ತನಗ್ಯಾರಾದರು ಬಯ್ದರೆ, ತನ್ನನ್ನು ಹೊಗಳಿದರೆ ಎಲ್ಲವನ್ನೂ ಅಪ್ಪನಿಗೆ ಒಪ್ಪಿಸುತ್ತಿದ್ದಳು ಕಿಟಕಿಯ ಸರಳಿಗೆ ಜೋತು ಹೊರಗೆ ಕಾಣುವ ಆಗಸದೆಡೆಗೆ ನೋಡುತ್ತಾ.. ಆಗಸ ಅವಳ ಪಾಲಿಗೆ ನೆಂಟನೆ ಆಗಿತ್ತು..
ಮಗಳ ಕೋಣೆಯ ಬಾಗಿಲಲ್ಲೇ ಬಿದ್ದಿದ್ದ ಶಾಲೆಯ ಬ್ಯಾಗನ್ನು ಕೈಯಲ್ಲೆತ್ತಿ ಒಳಗೆ ಇಣುಕಿದಳು. ಕಾಲಿನ ಶೂಸ್ ಗಳನ್ನು ತೆಗೆಯದೇ ಹಾಗೇ ಮಂಚದ ಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು ಪಲ್ಲವಿ .
ಕೊಂಚ ಆತಂಕದಿಂದ ಹತ್ತಿರ ಹೋಗಿ ಕುಳಿತ ಶಾಂತಾ, 'ಏನಾಯ್ತು ಮುದ್ದು, ಯಾಕಳ್ತಿದ್ದೀಯಾ, ಯಾರಾದ್ರು ಏನಾದ್ರು ಅಂದ್ರಾ ನನ್ನ ಗಿಳಿಮರಿಗೆ..' ಎಂದೆಲ್ಲಾ ಪೂಸಿಹೊಡೆದಳು.
ಅಳು ಜೋರಾಯಿತೇ ವಿನಹ ಕಡಿಮೆ ಆಗಲಿಲ್ಲ. ಈಗ ಬರೀ ಪುಟ್ಟ ಹುಡುಗಿಯೇನಲ್ಲ.. ಯಾಕೋ ಅತಿಯಾಯ್ತು ಇವಳದ್ದು ಎನಿಸಿತು ಶಾಂತಾಳಿಗೆ..
ಆದರೂ ಮೆತ್ತಗೆ ಬೆನ್ನು ತಲೆ ಸವರುತ್ತಾ ಅಲ್ಲೇ ಕುಳಿತಳು.
'ಅಮ್ಮಾ' ಎಂಬ ಅಳುವಿನೊಂದಿಗೆ ನಡುಗುವ ಸ್ವರದಲ್ಲಿ ಪಲ್ಲವಿಯ ಸ್ವರ ಕೇಳಿದಾಗ ಮೆಲ್ಲನೆ 'ಏನಾಯ್ತು ಕಂದಾ' ಎಂದಳು
' ಮತ್ತೇ.. ಮತ್ತೇ.. ಅಪ್ಪಾ.. ಪುನಃ ಬಿಕ್ಕಳಿಸತೊಡಗಿದಳು ಪಲ್ಲವಿ .
'ರಾತ್ರಿ ನಾವಿಬ್ಬರೂ ನೋಡೋಣ ಅಪ್ಪನನ್ನು.. ಏನಾಯ್ತು ಹೇಳೀಗ ..'ಎಂದಳು..
ಮಲಗಿದವಳು ಮೆಲ್ಲನೆ ಎದ್ದು ಕೂತು 'ಅಮ್ಮಾ.. ಅಪ್ಪ ನಕ್ಷತ್ರವಾಗಿದ್ದಾರೆ ಅಂದಿದ್ದೀಯಲ್ಲ ನೀನು ಅದು ಸತ್ಯ ತಾನೆ.. ಎಂದಳು ಕಣ್ಣು ಒರೆಸಿಕೊಳ್ಳುತ್ತಾ..
'ಹೌದು ಮರಿ ಯಾಕೀಗ ಈ ಪ್ರಶ್ನೆ..' ಎಂದು ಕೇಳಿದಳು ಶಾಂತಾ..
ದುಃಖ ಇನ್ನಷ್ಟು ಹೆಚ್ಚಿದ ಸ್ವರದಲ್ಲಿ 'ಮತ್ತೇ.. ಇವತ್ತು ಸ್ಕೂಲ್ ನಲ್ಲಿ ಸೈನ್ಸ್ ಟೀಚರ್, ನಕ್ಷತ್ರಗಳಿಗೂ ಸಾವು ಬರುತ್ತೆ ಅಂದ್ರು.. ಹಾಗಾದ್ರೆ ಅಪ್ಪ ಪುನಃ ಸಾಯ್ತಾರಾ.. ಎಂದು ಜೋರಾಗಿ ಅಳತೊಡಗಿದಳು ಪಲ್ಲವಿ ...
manassu aadravaaythu kane odi ...bharathi
ReplyDeletechenagide anita naresh manchi avre.. Nakshatravagide emba matu nambida maguvina mugda prashne mana kalakitu..olle nirupane
ReplyDeleteಏನೋ ವಿಶೇಷ ಅಡಗಿದೆ.. ಸ್ವಲ್ಪ ದುಃಖ ತುಂಬಿದೆ ಹಾಗು ಪ್ರೀತಿಯೂ ಸಹ ಅತಿಯಾಗಿ ಎದ್ದು ಕಾಣುತ್ತದೆ.. ಹಾಗೇನೆ.. ಮಗುವಿನ ಮುಗ್ದತೆ ಏನೆಲ್ಲಾ ಆಲೋಚನೆಗಳನ್ನು ಮಾಡುತ್ತದೆ.. ಬಹಳ ಚಿಂತಿಸಿ ಸರಳವಾಗಿ ಬರೆದಿದ್ದಿರಾ.. ವಿಷಯದಲ್ಲಿ ನೋವಿದ್ದರೂ.. ಬರವಣಿಗೆಯ ಶೈಲಿ ಸೊಗಸಾಗಿದೆ.. :)
ReplyDeleteಪ್ರಪಂಚವಿಡೀ ಒಂದೇ ಶಬ್ಧದೊಳಗೆ ಸೇರಿಕೊಂಡಂತೆ,ಬೇರೆಲ್ಲವೂ ಇದರೊಳಗೆ ಅಡಗಿಕೊಂಡಂತೆ...ಇಂತಹಾ ಕುತೂಹಲಕಾರಿ ವಾಕ್ಯಗಳಿಂದ ತೊಡಗುವ ನಿನ್ನ ಬರಹಗಳು ನಮ್ಮನ್ನು ಮುಂದೆ ಓದಿಸಿಕೊಂಡು ಹೊಗುವಲ್ಲಿ ಸಫಲವಾಗುತ್ತವೆ. ಓದಿದ ನಂತರ ಇಷ್ಟು ಬೇಗ ಮುಗಿದೇ ಹೊಯಿತಲ್ಲ ಎಂಬ ಭಾವ ಕಾಡುತ್ತದೆ.ಪ್ರಸ್ತುತ ಬರಹದಲ್ಲಿ ಮುಗ್ದ ಮಗುವಿನ ಮನಸ್ಸನ್ನು ತೆರೆದಿಟ್ಟ ಪರಿ ಮನ ಕಲಕುವಂತಿದೆ ! ಧನ್ಯವಾದಗಳು ಅನಿತ.
ReplyDeletetumbaa chennagide kate....
ReplyDeleteಬಹಳ ಚೆನ್ನಾಗಿ ಮೂಡಿಬ೦ದಿದೆ....ಮಕ್ಕಳ ಮುಗ್ಧ ಪ್ರಶ್ನೆಗಳಿಗೆ ಉತ್ತರ ಕೊಡುವುದು ಸುಲಭವಲ್ಲ....ಇಲ್ಲಿ ಮಗುವಿನ ಮುಗ್ಧತೆ, ತಾಯಿಯ ಅನಿವಾರ್ಯತೆ ಮನಸ್ಸಿಗೆ ನಾಟುತ್ತದೆ.....
ReplyDeletevery touching..
ReplyDeletenicely written.
good one ... Raaghu
ReplyDeleteadbuthvagide akka
ReplyDeleteadbuthvagide akka
ReplyDelete