ಗುಲ್ ಮೊಹರ್ ...
ಬಂದಾಗ ಮಾರ್ಚ್ ತಿಂಗಳು
ಮೈ ಕೈಯೆಲ್ಲಾ ಖಾಲಿ ಖಾಲಿ
ಶೂನ್ಯಕ್ಕೆ ನೆಟ್ಟ ನೋಟ
ತಲೆಯ ಮೇಲೆ ಬೆಂಕಿಯ
ಮಳೆಗರೆವ ಸುಡು ಸೂರ್ಯ
ನೆತ್ತರೂ ಆರುವ ಕಾಲ
ತೇವ ಕಾಣದ ನೆಲದಾಳದಲ್ಲಿ
ಅದೇನೋ ಕಂಪನ
ಸಹಜವಿದು ಎಂಬಂತೆ ಕುಡಿವೊಡೆವ
ಹೊಸ ಮೊಗ್ಗುಗಳಿಗೆಲ್ಲಿ
ಅಡಗಿತ್ತೋ ಜೀವ ಚೈತನ್ಯ
ಹಸಿರ ಹರೆಯಕೆ
ನಾಚಿಕೆಯ ಅರುಣರಾಗ
ಆವರಿಸಿದ ಇಬ್ಬನಿಯ ಜೊತೆಗೆ
ಮೌನದಲೇ ಪ್ರೇಮ ಸಲ್ಲಾಪ ....
samachittada hoovadu.. KashTAku sukhakaku aLukadu..:)
ReplyDeleteದೆಹಲಿಯ ಈ ನಡುಗುವ ಚಳಿಯಲ್ಲಿ ಇಂದು ನೀವು ಹಾಕಿರುವ ಬೇಸಿಗೆಯ ಚಿತ್ರಣದ ಈ ಬಿಸಿ ಕವನ ಓದಿ ಮನದಲ್ಲೇನೋ ಬಿಸಿ ಹೊಮ್ಮಿ ಕ್ಷಣ ಛಳಿಯ ಓಡಿಸಿತು.
ReplyDeletesuper eddu....
ReplyDeleteಬೆಚ್ಚನೆಯ ನೆನಪುಗಳು ಯಾವತ್ತೂ ಕಾಲಾತೀತ.ಗುಲ್ ಮೋಹರ್ ಹೂಗಳ ಹಾಡು ಮನ ಸೆಳೆಯಿತು. ಒಳ್ಲೆಯ ರಚನೆ.
ReplyDeleteಗುಲ್ ಮೊಹರ್ ಹೂವುಗಳು ಸುಂದರ ರೂಪಕ. ಈ ಮರ ಉಟ್ಟ ಕೆಂಪು ಸೀರೆಯ ಸೊಗಸೇ ಗುಲಾಬಿ ಹೂವಿಗೂ ಹೊಟ್ಟೆಕಿಚ್ಚು. ಮುಳ್ಳುಗಳಿಲ್ಲದೆಯೋ ಮನಸ್ಸಿಗೆ ಚುಚ್ಚುತ್ತಿದೆ ಕಣ್ಣ ಮುಚ್ಚದಂತೆ ಮಾಡುವ ಮಾಟಗಾತಿ.
ReplyDeletechennagide...
ReplyDeletenice!
ReplyDelete