ರೀ ..ಇವತ್ತು ನಮ್ಮ ಹೊಸ ಅತಿಥಿಯನ್ನು ಮನೆಗೆ ಕರ್ಕೊಂಡು ಬರೋಣ್ವಾ..
'ನೋಡೇ ಶಿಲ್ಲೂ ನೀನೂ ನಾನೂ ಇಡೀ ದಿನ ಆಫೀಸ್ನಲ್ಲಿ ಕೆಲ್ಸ ಮಾಡಿ ಸುಸ್ತಾಗಿರ್ತೀವಿ ಮನೇಗ್ಬಂದ್ರೆ ಇಲ್ಲಿನೂ ಕಡ್ಮೆ ಕೆಲ್ಸ ಇರಲ್ಲ.ಎಲ್ಲಾ ಮುಗ್ಸಿ ಹಾಸಿಗೆ ಸೇರುವಾಗ ಹನ್ನೊಂದು ಗಂಟೆ ಆಗಿರುತ್ತೆ. ಇದರ ನಡುವೆ ಈ ಹೊಸ ಜವಾಬ್ಧಾರಿ ಅಗತ್ಯ ಇದೆ ಅಂತ ಅನ್ಸುತ್ತಾ ನಿಂಗೆ? ಯೋಚ್ನೆ ಮಾಡು ..

'ಹ್ಹೋ..! ಆಗ್ಲೇ ನೀನೇ ಎಲ್ಲಾ ಡಿಸೈಡ್ ಮಾಡಿ ಆಗಿದೆ .. ಬಿಡು ಇನ್ನು ನನ್ನೇನು ಕೇಳೋದು..? ನಿನ್ನಿಷ್ಟ ಬಂದಂತೆ ಮಾಡ್ಕೋ..'
'ಪ್ಲೀಸ್ ಸುರೇಶ್ ಸಿಟ್ಟು ಮಾಡ್ಕೋಬೇಡಿ. ನಾನ್ಯಾವತ್ತಾದ್ರು ನಿಮ್ಮನ್ನ ಕೇಳ್ದೆ ಏನಾದ್ರು ಮಾಡಿದ್ದೀನಾ.. ನೀವೂ ಕೂಡಾ ಹಾಗೇ ಅಂತ ನಂಗೊತ್ತು. ನನ್ನ ಆಸೆ ಇದು ಅಂತ ಅಂದ್ಕೊಳ್ಳಿ.. ಅಷ್ಟಕ್ಕೂ ಇದ್ರಲ್ಲಿ ತಪ್ಪೇನಿದೆ ಹೇಳಿ..'
'ತಪ್ಪಿನ ಪ್ರಶ್ನೆ ಅಲ್ಲ ಶಿಲ್ಲೂ.. ಮುಂದೆ ಕಷ್ಟ ಪಡ್ಬೇಕಾಗುತ್ತೇನೋ ಅನ್ನೋ ಭಯ.. ಜೊತೆಗೆ ಅಮ್ಮ ಬೇರೆ ಊರಿಂದ ಬರ್ತಿದ್ದಾರೆ. ಅವರಿಗೆ ನಮ್ಮ ಈ ನಿರ್ಧಾರ ಬೇಸರ ಆಗ್ಬಹುದು. ನಾನು ನೀನು ಒಪ್ಪಿದಷ್ಟು ಸುಲಭ ಅಲ್ಲ ಅವ್ರನ್ನು ಮಣಿಸೋದು..ಅದಲ್ಲದೇ ಆ ಪುಟ್ಟ ಜೀವವನ್ನು ಸಾಕೋ ಅನುಭವ ಆದ್ರೂ ನಿಂಗೇನಿದೆ ಹೇಳು..?'
'ಅನುಭವಕ್ಕೆ ಏನು.. ಯಾರ್ಗೂ ಹುಟ್ಟಿನಿಂದಲೇ ಬಂದು ಬಿಡಲ್ಲ ಅದು. ನಾವೇ ಕಲೀಬೇಕು... ಆದ್ರೆ . ಹೆಣ್ಣಿಗೆ ತಾಯ್ತನ ಅನ್ನೋದು ರಕ್ತದಲ್ಲೇ ಇರುತ್ತೆ ಬಿಡಿ. . ಅದನ್ನು ಹೊಸದಾಗಿ ಕಲಿಯಬೇಕಿಲ್ಲ..'
ಅಷ್ಟಕ್ಕೂ ಇದನ್ನ ನಿರ್ಧಾರ ಮಾಡ್ಬೇಕಾಗಿರೋದು ನೀವು.. ಅವ್ರಲ್ಲ. ಅವ್ರನ್ನ ಒಪ್ಸೋ ಕೆಲ್ಸ ನಂಗೆ ಬಿಟ್ಬಿಡಿ. ನಿಧಾನವಾಗಿ ಹೇಳಿದ್ರೆ ಅರ್ಥ ಮಾಡ್ಕೊಳ್ತಾರೆ. ಅದೂ ಅಲ್ದೇ ನಂಗೀಗ ಆಫೀಸ್ ಟೈಮಿಂಗ್ಸ್ ಕೂಡಾ ಈಗ ಚೇಂಜ್ ಆಗಿದೆ. ಹಾಗಾಗಿ ಅವ್ನನ್ನ ನೋಡ್ಕೋಳ್ಳೋಕೂ ಕಷ್ಟ ಆಗಲ್ಲ. ನಾವಿಬ್ರೇ ಅಲ್ಲದೆ ಇನ್ನೊಂದು ಜೀವ ನಮಗಾಗಿ ಕಾಯ್ತಾ ಇರುತ್ತೆ ಅನ್ನೋದು ಎಷ್ಟು ಸಂತಸದ ವಿಷ್ಯ ಅಲ್ವಾ ಡಿಯರ್..
ಆಹಾ... ಈಗ ಡಿಯರ್ ಗಿಯರ್ ಅಂತೆಲ್ಲ ನನ್ನ ಪೂಸಿ ಮಾಡೋದೇನೂ ಬೇಕಾಗಿಲ್ಲ.
ಹೇ ಇಲ್ಲಾ ಸುರೇಶ್.. ಅವ್ನು ಎಷ್ಟು ಮುದ್ದು ಮುದ್ದು ಇದ್ದಾನೆ ಅಂದ್ರೆ ನೋಡಿದ ಕೂಡ್ಲೇ ಎತ್ಕೊಳ್ಳದೇ ಇರೋಕೆ ಮನ್ಸೇ ಬರಲ್ಲ.. ನೀವೂ ಅಷ್ಟೇ ನೋಡಿ.. ಈವಾಗೇನೋ ಹೀಗೆಲ್ಲ ಮಾತಾಡ್ತೀರಿ ..ಅವ್ನು ಬಂದ್ಮೇಲೆ ನನ್ನ ಕಡೆ ನೋಡೋಕೂ ಟೈಮ್ ಇರಲ್ಲ ನಿಮ್ಗೆ..
ಸರಿ ಸರಿ ಅವ್ನಿನ್ನು ಮನೆಗೇ ಬಂದಿಲ್ಲ .. ಆಗ್ಲೇ ಸುರು ಆಯ್ತು ಗುಣಗಾನ. ಬಂದ್ಮೇಲಂತೂ ನನ್ನ ಹೊಟ್ಟೆಗೆ ತಣ್ಣೀರ ಬಟ್ಟೇನೇ ಗತಿ ಅನ್ಸುತ್ತೆ..
ಅಯ್ಯೋ ಹಾಗ್ಯಾಕಂದ್ಕೋತೀರಿ.. ಎಲ್ರಿಗೂ ನೀವೆ ಬೇಯ್ಸಿ ಹಾಕಿದ್ರಾಯ್ತಪ್ಪ..
ಇರು ನಿಂಗೆ ಮಾಡ್ತೀನಿ.. ಮಾತಲ್ಲಂತೂ ನಿನ್ನ ಗೆಲ್ಲಕಾಗಲ್ಲ ಬಿಡು..ನಿನ್ನ ಕುಶಿನೇ ನಂಗೂ ಬೇಕಾಗಿರೋದು .. ಆದ್ರೆ ಈ ಸಂತೋಷವನ್ನು ಇಷ್ಟು ದೊರ ನಿಂತ್ಕೊಂಡು ಸೆಲೆಬ್ರೇಟ್ ಮಾಡೋದು ತಪ್ಪು ಅಂತ ಅನ್ಸಲ್ವಾ ನಿಂಗೆ..
ಆಹಾ .. ಅದೆಲ್ಲ ಏನೂ ಬೇಡ ರಾಯರೇ.. ಸಧ್ಯಕ್ಕೆ ದೂರದಿಂದಲೇ ಥ್ಯಾಂಕ್ಸ್ ಹೇಳ್ತೀನಿ .. ಯಾಕೆಂದ್ರೆ .ಶುಭಸ್ಯ ಶೀಘ್ರಂ .. ಈವಾಗಲೇ ಹೊರಟು ಬಿಡೋಣ ... ನನ್ನ ಫ್ರೆಂಡ್ ಗೆ ಫೋನ್ ಮಾಡಿ ಈಗ್ಳೆ ಬರ್ತಾ ಇದ್ದೀನಿ ಅಂತ ಹೇಳ್ಬಿಡ್ತೀನಿ. ಆಮೇಲೆ ಬೇರೆ ಯಾರಾದ್ರೂ ಕೇಳಿದ್ರು ಅಂತ ಅವ್ಳು ನಾಯಿ ಮರಿ ಕೊಟ್ಬಿಟ್ರೆ ಕಷ್ಟ..
:D :D ಮೊದ್ಲು ಬರ್ತಿರೋ ಅತಿಥಿ ಪುಟ್ಟ ಮಗು ಅಂದ್ಕೊಂಡೆ.. ಆಮೇಲೆ ದತ್ತು ಪುತ್ರ ಅದ್ಕೊಂಡೆ... ಕೊನೆಗೆ ಗೊತ್ತಾಯ್ತು.. :)
ReplyDeleteಓದುತ್ತ ಹೋದಂತೆ ಒಂದು ಅಂದ್ಕೊಂಡಿರ್ತಿವಿ...ಕೊನೇಲಿ ಇನ್ನೊಂದು ತಿರುವಿರುತ್ತೆ...ಬಹುಶಃ ನಿಮ್ಮ ವೈಶಿಷ್ಟ್ಯವಿರಬೇಕು ಇದು...
ReplyDeleteಸೌಧ , ಯಾರು ಜೀವವೇ ಯಾರು ಬಂದವರು..ಇದರಲ್ಲೂ ಇಂತಹುದೇ ಅನುಭವ...
ಚೆನ್ನಾಗಿ ಬರೆಯುತ್ತಿರಿ...ಬಹಳ ಇಷ್ಟವಾಗುತ್ತದೆ....
thiruvu needuva nimma lekhana bahala estavaayithu
ReplyDeleteಅನೀತಕ್ಕ ನಿಮ್ಮ ಸೃಜಶೀಲತೆಗೆ ಮತ್ತೊಂದು ಗರಿ ಇದು..:))) ಮನದಲ್ಲಿ ಸಾವಿರಾರು ಭಾವಗಳು ಮಿಂಚಿ ಮರೆಯಾಗುತ್ತವೆ.. ಕುತೂಹಲವನ್ನುಳಿಸಿಕೊಂಡು ಕತೆ ಕಡೆಯವರೆಗೂ ಸರಾಗವಾಗಿ ಓದಿಸಿಕೊಳ್ಳುತ್ತದೆ.. ಕತೆಯಲ್ಲಿನ ನವಿರಾದ ಭಾವಗಳು ಮನಸ್ಸನ್ನು ಹಾಗೆಯೇ ಸೆಳೆದು ಬಂಧಿಸುತ್ತವೆ.. ಪ್ರೀತಿ, ಕರುಣೆ, ಸರಸ ಸಂಭಾಷಣೆ, ಸಾಕು ಪ್ರಾಣಿಗಳ ಮೇಲಿನ ನಿಮ್ಮ ಕಾಳಜಿ ಮನಗೆಲ್ಲುತ್ತದೆ..:))) ಮ್ಮ್.. ತುಂಬಾ ಹಿಡಿಸಿತು..:)))
ReplyDeletenayimari manege tarodandre viroda vyakta padisode jasti... kutoohalavannu kadirisikondu odisikondu hoyitu....chennagide Anitha :):)
ReplyDeleteಅನಿತಕ್ಕ...ನಿಮ್ಮ ಪ್ರತಿ ಕತೆಯಲ್ಲೂ ಸಸ್ಪೆನ್ಸ್ ಇದ್ದೆ ಇರುತ್ತೆ.....ಹಾಗಾಗಿ ಮೊದಲು ಮಗು ಅ೦ತ ಅ೦ದುಕೊ೦ಡರೂ ಇದು ಬೆರೆಯೇ ಏನೋ ಅಗಿರಬಹುದು ಎ೦ದುಕೊ೦ಡೆ, ಕೊನೆಗೆ ನೋಡಿದರೆ ನಾಯಿ ಮರಿ....:)
ReplyDelete