Pages

Total Visitors

Monday, October 3, 2011

ಬಂಧನ ..





ನಿನ್ನ ಕಣ್ಣ ನೋಟದೊಳಗೆ

ಕೊಲ್ಲುವ ಖಡ್ಗ ವಿದೆ.. 

ಅದೇಕೋ ತಿಳಿಯೆ 

ಇನ್ನಾರಿಗಾದರೂ  

ಅದರಲ್ಲಿ ಇರಿದರೆ 

ಗಾಯವಾಗುವುದಿಲ್ಲಿ ..

ನೆತ್ತರೇನೂ ಹರಿಯುವುದಿಲ್ಲ 

ಕಣ್ಣ  ಹಸಿಯಾಗಿಸಿ 

ಬಿಸಿ ಉಸಿರ ಕಾರಿ 

ನೋವು ಶಮನವಾಗುವುದು ..

ಮತ್ತೊಮ್ಮೆ ಮಗದೊಮ್ಮೆ 

 ಇದು ಮರುಕಳಿಸದಿರಲೆಂದೇ 
ಆ ನಯನಗಳು ಮುಚ್ಚುವಂತೆ 

ಮುದ್ದಿಟ್ಟು ಮೈಮರೆಸಿ 

ಎದೆಯ ಪಂಜರದೊಳಗೆ  

ಪ್ರೀತಿಯ  ಬೇಡಿ ಹಾಕಿ 
ನಿನ್ನ ಬಂಧಿಸಿದ್ದು ... 


3 comments:

  1. ಆಹಾ, ಯಕ್ಷಗಾನದ ಚಿತ್ರಕ್ಕೆ ಒಪ್ಪೋ ನವ್ಯ ಕಾವ್ಯ!
    ಹೆಮ್ಮೆಯ ೨ ಪ್ರಕಾರಗಳನ್ನು ಯಶಸ್ವಿಯಾಗಿ ಬೆಸೆದಿದ್ದೀರಿ.

    ನನ್ನ ಬ್ಲಾಗುಗಳಿಗೆ ಬನ್ನಿರಿ:
    www.badari-poems.blogspot.com
    www.badari-notes.blogspot.com

    ಆಹಾ, ಯಕ್ಷಗಾನದ ಚಿತ್ರಕ್ಕೆ ಒಪ್ಪೋ ನವ್ಯ ಕಾವ್ಯ!
    ಹೆಮ್ಮೆಯ ೨ ಪ್ರಕಾರಗಳನ್ನು ಯಶಸ್ವಿಯಾಗಿ ಬೆಸೆದಿದ್ದೀರಿ.

    ನನ್ನ ಬ್ಲಾಗುಗಳಿಗೆ ಬನ್ನಿರಿ:
    www.badari-poems.blogspot.com
    www.badari-notes.blogspot.com

    ReplyDelete
  2. ಎದೆಯ ಪಂಜರದೊಳಗೆ
    ಪ್ರೀತಿಯ ಬೇಡಿ ಹಾಕಿ
    ನಿನ್ನ ಬಂಧಿಸಿದ್ದು ... !
    ಈ ಭಾವ ಚೆನ್ನಾಗಿದೆ ಅನಿತಕ್ಕ. ಸೊಗಸಾದ ಚಿತ್ರಣ.

    ReplyDelete