Pages

Total Visitors

Tuesday, October 18, 2011

ಕರಗುವ ಕ್ಷಣಗಳು..




ಸವಿಗನಸು ಆಗಷ್ಟೇ ಮೂಡಿತ್ತು
ಕರಗಿ ಬಿಡಬೇಕೇ ಕತ್ತಲು...

ಹೊಸತೊಂದು ಆಟದ ಆವಿಷ್ಕಾರವಾಗಿತ್ತು 
ಮುಗಿದೇ ಬಿಟ್ಟಿತು ಬಾಲ್ಯ 

ಪ್ರಿಯನ ಕಣ್ಣಿಗಿನ್ನೂ ಕಣ್ಣು ಕೂಡಿತ್ತಷ್ಟೇ
ಹರೆಯ ಕೈಗೆ  ಸಿಗದಂತೆ ಜಾರಿತ್ತು 

ತುಟಿಗಿನ್ನೂ ಸೋಕಿತ್ತಷ್ಟೇ ರುಚಿಕರ ತಿನಿಸು 
ಖಾಲಿಯಾಗಿತ್ತು ತುಂಬಿದ್ದ ತಟ್ಟೆ 

ಶಬ್ಧಗಳಿನ್ನೂ  ಹಾಡಾಗಿರಲಿಲ್ಲ
ಉಡುಗಿತ್ತು ಗಂಟಲಿನ ಧ್ವನಿ 

ಅಲ್ಲಲ್ಲಿ ಬೆಳ್ಳಿ ಕೂದಲು ಕಾಣಿಸಿತ್ತಷ್ಟೇ
ಹೇಳದೆ ಕೇಳದೆ ಕಾಲ ಮೀರಿತ್ತು 

ಪಯಣದ ಸುಖವಿನ್ನೂ ಸುರುವಾಗಿತ್ತಷ್ಟೇ 
ಗಮ್ಯ ಕಾಣಿಸಿ ವಾಹನದಿಂದ ಇಳಿಸಿತ್ತು 


ಬೇಕೆನಿಸಿದ್ದೆಲ್ಲ   ಹೀಗೆ ಬೇಗನೆ ಕಳೆದು ಹೋಗುವುದ್ಯಾಕೋ   .. 

  


4 comments:

  1. ಅದೇನೋ ನನಗು ಇನ್ನು ಅರ್ಥವಾಗಿಲ್ಲ.....ಕವನ ತುಂಬಾ ಚನ್ನಾಗಿದೆ. ಬೇಕೆನಿಸಿದ್ದು ತುಂಬಾ ಬೇಗ ಕಳೆದುಹೊಗುತ್ತದೋ ಅಥವಾ ಬೇಕೆನಿಸಿದ್ದರಲ್ಲಿ ನಾವು ಆಳವಾಗಿ ಕಳೆದು ಹೊಗುವುದರಿ೦ದ, ಅದು ಮುಗಿದು ಹೋಗುವುದು ತಿಳಿಯುವುದಿಲ್ಲವೋ ಎ೦ಬುದು ಇನ್ನು ಅರ್ಥವಾಗಿಲ್ಲ.

    ReplyDelete
  2. ಹುಂ..ಶ್ರುತಿ .. ಹೌದೇನೋ.. ಬೇಕಿನಿಸಿದ್ದರಲ್ಲಿ ಮುಳುಗಿ ಹೊತ್ತಿನ ಪರಿವೆ ಮರೆತಿರುತ್ತೇವೆ ಅಲ್ವಾ ..
    --

    ReplyDelete
  3. Nice poem.....
    nanagu haage feel agtide...
    bekenisiddu adeshtu bega jaari hoguttaveyalla...?

    ReplyDelete
  4. ಚೆನ್ನಾಗಿದ್ದು ಕವನ.. ಬೇಕನಿಸಿದ್ದು ಬೇಗ ಕಳೆಯೋ ಅನುಭವ ನಂಗೂ ಸುಮಾರು ಸಲ ಆಗಿದೆ

    ReplyDelete