Pages

Total Visitors

Thursday, October 6, 2011

ಸೂರಿಕುಮೇರು..



 ಅವರ ಉದ್ದ ಕೂದಲನ್ನು  ನಯವಾಗಿ ಬಾಚಿ ಮೂರು ಭಾಗವಾಗಿಸಿ, ಸುಂದರ ಜಡೆ ಹೆಣೆಯುತ್ತಾ ಕುಳಿತಿದ್ದೆ.
'ಹೂಗು ಸೂಡ್ಸೆಕ್ಕಾ,' ಎಂಬ ನನ್ನ ಪ್ರಶ್ನೆಗೆ 'ಹುಂ' ಎಂಬಂತೆ ತಲೆ ಅಲುಗಿತು. ಗಿಡದಿಂದ ಕಿತ್ತು ತಂದ ಸುಂದರ ಹೂವನ್ನು ಮುಡಿಸಿದೆ. 'ಈಗ ಎಷ್ಟು  ಚೆಂದ ಆತು ಗೊಂತಿದ್ದಾ' ಎಂದೆ.  ಹಿಂದಿನಿಂದ ದೊಡ್ಡಮ್ಮ, ' ಆಯಿದಿಲ್ಲೆಯೋ ಇನ್ನೂ ಸಿಂಗಾರ, ಸಾಕು ಚೆಂದ ಮಾಡಿದ್ದು' ಎಂದರು. 




'ನೋಡು ನಿನ್ನ ದೊಡ್ದಮ್ಮಂಗೆ ಹುಳ್ಕು ಆವ್ತಾ ಇದ್ದು, ಅದರ ಕೂದಲು ಇಷ್ಟು ಒಪ್ಪ ಇಲ್ಲೆ ಹೇಳಿ' ಎಂದು ಹಿಂದಕ್ಕೆ ತಿರುಗಿದರು ಜಡೆ ಹೆಣೆಸಿಕೊಳ್ಳುತ್ತಿದ್ದ ಸುಂದರ ಕೂದಲಿನ ಒಡೆಯ, ನನ್ನ ದೊಡ್ಡಪ್ಪ, ಯಕ್ಷಗಾನದ ಅದ್ವಿತೀಯ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ಟ. 

ಗೋವಿಂದ ದೊಡ್ಡಪ್ಪ ಎಂದರೆ ಮೊದಲಿಗೆ ನೆನಪಾಗುವುದು,  ಅವರು ನನ್ನನ್ನು ಕಂಡೊಡನೆ ಮೂಗಿನ ಮೇಲೆ ಬೆರಳಿಟ್ಟು ಮೂಗು ಕತ್ತರಿಸುತ್ತೇನೆ ಎಂಬಂತೆ ಅಭಿನಯಿಸುತ್ತಿದ್ದುದು. ನಿಜಕ್ಕೂ ಅವರು ನನ್ನ ಮೂಗನ್ನು ಕತ್ತರಿಸುತ್ತಾರೆ ಎಂಬ ಭಯದಲ್ಲಿ ಅವರ ಹತ್ತಿರ ಹೋಗಲೇ ಅಂಜುತ್ತಿದ್ದೆ.

 ಆಗೆಲ್ಲಾ ದೊಡ್ಡಮ್ಮನೇ, ದೊಡ್ಡಪ್ಪನಿಗೆ ಬಯ್ದಂತೆ ಮಾಡಿ ನನ್ನನ್ನೆತ್ತಿ ಸಮಾಧಾನಿಸುತ್ತಿದ್ದರು. ಆದರೆ ಒಂದೆರಡು ದಿನಗಳಲ್ಲೆ , ಅವರು ಸುಮ್ಮನೆ ತಮಾಷೆ  ಮಾಡುವುದು ಎಂದರಿವಿಗೆ ಬಂದು ನಾನು ನನ್ನ ಬಾಲ ಬಿಚ್ಚಿದ್ದೆ. ಸ್ವಲ್ಪವೇ ಕಾಲಾವಧಿಯಲ್ಲಿ ಅವರ ತಲೆ ಮೇಲೇರಿ ಸವಾರಿ ಮಾಡುವ ಆತ್ಮೀಯತೆಯನ್ನು ಹೊಂದಿದ್ದೆ. ನಮ್ಮಲ್ಲಿ ಬೇರಾರಿಗೂ ಇರದ ಅವರ ಉದ್ದನೆ ಕೂದಲು ನನ್ನ ಇನ್ನೊಂದು ಆಕರ್ಷಣೆ. ನಾನು ಜಡೆ ಹೆಣೆಯಲು ಕಲಿತದ್ದೇ ಅವರ ಕೇಶ ಶೃಂಗಾರ ಮಾಡಲು  ನನಗೆ ದೊರೆತ ಪೂರ್ತಿ ಸ್ವಾತಂತ್ರ್ಯದಿಂದ..!!


ಆಗೆಲ್ಲ ನಮ್ಮ ದೊಡ್ಡ ಹಬ್ಬ ಎಂದರೆ ಪುತ್ತೂರು ಜಾತ್ರೆ. ನಾವಿದ್ದ ಕೊಡಗಿನ ಭಾಗಮಂಡಲದಿಂದ ಅಪ್ಪ ಅಮ್ಮ ಅಣ್ಣನೊಡನೆ ಸಂಜೆಗೆ ಪುತ್ತೂರು ತಲುಪುತ್ತಿದ್ದೆವು. ಎಲ್ಲಾ ಊರುಗಳಿಂದ ಸೇರುತ್ತಿದ್ದ ಜನರ ಗೌಜು , ಗದ್ದಲ, ಸಂತೆಯ ಅಂಗಡಿಗಳು, ಜಾತ್ರೆಯನ್ನು ಕಳೆಕಟ್ಟಿಸುತ್ತಿದ್ದರೆ, ಇನ್ನೊಂದು ಮುಖ್ಯ ಸೆಳೆತ ಅ ದಿನ ನಡೆಯುತ್ತಿದ್ದ ಯಕ್ಷಗಾನಗಳು.





 ಹತ್ತಿರ ಹತ್ತಿರದಲ್ಲಿ ಆಟದ ಟೆಂಟ್ ಗಳು. ನಾವು ದೊಡ್ಡಪ್ಪ ಕಲಾವಿದರಾಗಿ ದುಡಿಯುತ್ತಿದ್ದ ಧರ್ಮಸ್ಥಳ ಮೇಳದ ಟೆಂಟ್ ಇರುವ ಕಡೆ ಹೆಜ್ಜೆ ಹಾಕಿ,ಸೀದಾ ಚೌಕಿಯ ಹತ್ತಿರ ಹೋಗುತ್ತಿದ್ದೆವು.ಅವರೆಲ್ಲಾದರು ಎದುರೇ ಇದ್ದರೆ ನಮ್ಮನ್ನು ಸ್ವಾಗತಿಸಿ, ಆಟ ನೋಡಲು ಕುಳಿತುಕೊಳ್ಳುವ ವ್ಯವಸ್ಥೆ ಮಾಡುತ್ತಿದ್ದರು. ಕೆಲವೊಮ್ಮೆ ನಿದ್ರೆಯಲ್ಲಿದ್ದರೆ, ಅವರನ್ನು ಏಳಿಸುವ ಮಹತ್ಕಾರ್ಯ ನನ್ನದಾಗುತಿತ್ತು. ನಾನೋ, ಅವರು  ಮಲಗಿರುವ ಕಡೆ ಹೋಗಿ, ಕುಂಭಕರ್ಣನನ್ನು ರಾಕ್ಷಸರು ಏಳಿಸುವಂತೆ ಚಿತ್ರ "ಚಿತ್ರ ಹಿಂಸೆ ನೀಡಿ ಏಳಿಸುತ್ತಿದ್ದೆ. 

ಅವರ ವೇಷದ ಪೆಟ್ಟಿಗೆಯ ಮೇಲೆ ಕೂತು, ಬಣ್ಣ ಬಣ್ಣದ ಉಡುಪುಗಳು, ವೇಷದ ಸಾಮಗ್ರಿಗಳು,ಎಲ್ಲವನ್ನೂ ಅಚ್ಚರಿಯಿಂದ ನೋಡುತ್ತಿದ್ದೆ. ಸಾಮಾನ್ಯ ಮನುಷ್ಯರು ಸ್ವಲ್ಪವೇ ಹೊತ್ತಿನಲ್ಲಿ ರಾಜರೂ, ರಾಕ್ಷಸರೂ, ಆಗಿ ಮಾರ್ಪಾಡಾಗುವುದು  ನನಗೆ ಕನಸಿನಂತೆ ತೋರುತ್ತಿತ್ತು. 

ಆ ರಾತ್ರಿಯ ರಂಗಿನ ಗುಂಗು ತುಂಬಾ ದಿನಗಳ ಕಾಲ ಉಳಿದುಕೊಳ್ಳುತ್ತಿತ್ತು. ಒಂದು ದಿನ ಆಟ ನೋಡಿದರೆ ಮರುದಿನ ಇಡೀ ನಿದ್ದೆ ಮಾಡುತ್ತಿದ್ದ ನನಗೆ, ದೊಡ್ದಪ್ಪ ಹಗಲು ಹೊತ್ತಿನಲ್ಲಿಯೂ ಏನಾದರು ಕೆಲಸ ಮಾಡುತ್ತಿದ್ದುದು ಆಶ್ಚರ್ಯವೆನಿಸುತ್ತಿತ್ತು. 
 
ಬಿಡುವಿಲ್ಲದ ನಿತ್ಯದ ಕೆಲಸ, ಆಯಾಸಗಳ ನಡುವೆಯೂ ಕುಟುಂಬದ ಎಲ್ಲಾ ಕಾರ್ಯಕ್ರಮಗಳಲ್ಲಿ  ಸಂತಸದಿಂದ ಪಾಲ್ಗೊಂಡು, ಸಹಕಾರಿಯಾಗಿರುತ್ತಿದ್ದ ದೊಡ್ಡಪ್ಪ , ಸಮಾರಂಭದ ಕಳೆ ಹೆಚ್ಚಿಸುತ್ತಿದ್ದರು. 

ಹೊಟ್ಟೆ ಹೊರೆಯುವುದಕ್ಕೆ ಒಂದು ಉದ್ಯೋಗ ಎಂದು ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟಿದ್ದರೂ, ಅದರ  ಆಳ, ಅಗಲಗಳನ್ನು ಅರ್ಥೈಸಿಕೊಂಡು, ಕಿಂಚಿತ್ತೂ ದಕ್ಕೆಯಾಗದಂತೆ ನಡೆದವರು ದೊಡ್ದಪ್ಪ.ನಾಟ್ಯವಾಗಲೀ, ಅರ್ಥ ವೈಭವವಾಗಲೀ ಎರಡರಲ್ಲೂ ಸಮಾನ ಪರಿಣತಿ ಹೊಂದಿದವರು. ಎಪ್ಪತ್ತರ ಹರೆಯದಲ್ಲಿರುವ ಇವರು ಈಗಲೂ ರಂಗಸ್ಥಳವೇರಿದರೆ ಇಪ್ಪತ್ತರ ಯುವಕ.


ಈ ಕ್ಷೇತ್ರದ ಮೇರು ಕಲಾವಿದರಾದರೂ ನನಗೆ ದೊಡ್ದಪ್ಪನಾಗಿಯೇ ಹೆಚ್ಚು ಆಪ್ತರು. ದೊಡ್ದಪ್ಪನ ಮುಂದಿನ ಜೀವನವು ಸುಖಮಯವಾಗಿ, ಅವರ ಆಶೀರ್ವಾದದ ಕೈ ಸದಾ ನಮ್ಮ ತಲೆಯ ಮೇಲೆ ಇರಲೆಂಬುದೇ ನನ್ನ ಆಶಯ.  



10 comments:

  1. Very nice write up on K.Govinda Bhat

    Girish P V
    Kulai - Hosabettu
    Mangalore

    ReplyDelete
  2. super ayidu...puttur jatreli govinda mavana vesha nodiddu egalu kannige kattutha eddu...

    ReplyDelete
  3. ಅನಿತಾವ್ರೆ.,,,ನಿಮ್ಮ ವೀಡಿಯೋ ಬಗ್ಗೆ ವಿವರ..? ಆದ್ರೆ ಹಾಡು...ವಾ ಮಸ್ತ್ ಹೂವು ಚಲುವೆಲ್ಲಾ ನಂದೆಂದಿತು...ವಿರಹಾ ನೂರು ನೂರು ತರಹಾ...ಬಣ್ಣಾ ಬಣ್ಣಾ ..ಬಂಧನದ ಹಾಡು,,,

    ReplyDelete
  4. ವಂದನೆಗಳು ಗಿರೀಶ್, ಅಶೋಕ್. ಪ್ರಸನ್ನ, ಜಲನಯನ,
    ಈ ವಿಡಿಯೋ, ನನ್ನಣ್ಣ (ದೊಡ್ಡಪ್ಪನ ಕೊನೆಯ ಮಗ) ಸೂರ್ಯನ ಮದುವೆ ನಿಶ್ಚಿತಾರ್ಥದ ಸಣ್ಣ ತುಣುಕು.

    ReplyDelete
  5. olle informative lekhana

    ReplyDelete
  6. ಅನಿತಕ್ಕಾ, ಸೂಪರ್ ಆಯ್ದು ಬರದ್ದು. ಗೋವಿಂದ ಭಟ್ ಯಕ್ಷಗಾನದ ಸಾರ್ವಭೌಮ. ಅವರ ನಮ್ಮವರು ಹೇಳುವುದರಲ್ಲೇ ಒಂದು ಹೆಮ್ಮೆ . ಆ ಹೆಮ್ಮೆಗೆ ಆನುದೆ ಭಾಗಿ.

    ReplyDelete
  7. doddappa andre namma doddappa .. great :)

    ReplyDelete
  8. ಇವರ ಸ್ವರ, ಘರ್ಜನೆ, ಅರ್ಥಗಾರಿಕೆ, ನಾಟ್ಯ, ಎಲ್ಲವೂ ಮೈಜುಮ್ಮೆನಿಸುವ೦ತೆ ಮಾಡುತ್ತದೆ. ಯಕ್ಷ ಸಾರ್ವಭೌಮ

    ReplyDelete