ಇತಿಹಾಸದ ಅತ್ಯಮೂಲ್ಯ ವಿಷಯಗಳನ್ನೆಲ್ಲ ಸಂಗ್ರಹಿಸಿದ್ದ ಬೃಹತ್ ಮ್ಯೂಸಿಯಮ್ ಅದು.ಅದರ ವಿಶಾಲತೆಯನ್ನು ಕಣ್ಣಲ್ಲೇ ಅಳೆದ. ತುಂಬಾ ಜನರು ಒಳಗಿದ್ದರೂ ಖಾಲಿ ಎಂದೇ ಎನಿಸುತ್ತಿತ್ತು. ನಿಧಾನಕ್ಕೆ ನೋಡುತ್ತಾ ಮುಂದುವರಿಯುತ್ತಿದ್ದ.
ಒಂದು ಕಡೆ ಸಾವಿರಾರು ತಲೆಬುರುಡೆಗಳನ್ನು ಕ್ರಮಬದ್ಧವಾಗಿ ಜೋಡಿಸಿದ್ದರು.
ಹತ್ತಿರದಲ್ಲಿದ್ದ ಗೈಡ್ ಹೆಮ್ಮೆಯಿಂದ ಹೇಳಿದ. ಇದು ನಮ್ಮ ಶತ್ರು ಸೈನಿಕರ ತಲೆಬುರುಡೆ. ಅವರ ಆಹಾರಕ್ಕೆ ವಿಷವಿಕ್ಕಿ ಎಲ್ಲರನ್ನೂ ಒಂದೇ ಬಾರಿಗೆ ಕೊಂದು, ನಾವು ಗೆದ್ದಿದ್ದೆವು.
ಮೆತ್ತಗೆ ತಲೆದೂಗಿದ.
ಮುಂದಕ್ಕೆ ಹೋದಂತೆಲ್ಲ ಅವರ ಹೆಮ್ಮೆಯ ತುರಾಯಿಯ ಮೇಲೆ ಇಂತಹ ಗರಿಗಳು ಅಸಂಖ್ಯಾತವಿದ್ದವು.
ಎಲ್ಲವನ್ನೂ ನೋಡಿ ತೃಪ್ತಿಗೊಂಡವನೆ, ಅಲ್ಲಿನ ಅಧಿಕಾರಿಯ ಕೈಯಲ್ಲಿ ಸುಂದರವಾದ ನಾಣ್ಯವೊಂದನ್ನಿಟ್ಟು ಇದು ನಮ್ಮ ದೇಶದ ಹಳೆಯ ಕಾಲದ ಅತ್ಯಮೂಲ್ಯ ನಾಣ್ಯ. ಇದನ್ನು ನಿಮ್ಮ ಮ್ಯೂಸಿಯಂ ಗೆ ಅರ್ಪಿಸುತ್ತಿದ್ದೇನೆ.ದಯವಿಟ್ಟು ಸ್ವೀಕರಿಸಿ.
ಅಧಿಕಾರಿಯ ಮುಖ ಆನಂದದಿಂದ ಹೊಳೆಯಿತು.
ಮರುದಿನದ ಪೇಪರ್ ನ ಹೆಡ್ ಲೈನ್ ಹೀಗಿತ್ತು..
ವಿಶ್ವ ವಿಖ್ಯಾತ ಮ್ಯೂಸಿಯಂ ಶಕ್ತಿಯುತ ಮಿನಿ ಬಾಂಬ್ ಧಾಳಿಗೆ ನಾಶ. ಸಾವಿರಾರು ಸಾವು.
ಬದಲಾಗಿದ್ದು ಕಾಲ ಮಾತ್ರ. ಮನುಷ್ಯನಲ್ಲ.
Ufff!!!! ನಿಜ.
ReplyDelete100/100 :):):) Very nice sentence formations. Very matured style of presentation. Nice punch. Strong message! very very good. 100/100 :):)
ReplyDeleteA gripping story, narrated in a simple and lucid language. - Sudhindra Haldodderi
ReplyDeleteabba.... simple and super presentation......
ReplyDeletetnq :)
ReplyDeleteyes mam ur 100 % r8
ReplyDeleteha.. nija badalagolla manushya.. nice article
ReplyDeleteಬಹಳ ಸತ್ಯವಾದ ಮಾತು !
ReplyDeleteಮನುಷ್ಯನ ಮೂಲಸ್ವಭಾವ ಯಾವಾಗಲೂ ಹೀಗೆನೇ.....