ಇಲ್ಲೇ ನೋಡಿ.. ಎಲ್ಲಾ ಇಲ್ಲಿದೆ
ಕೊಂಡುಕೊಳ್ಳಿ ನೀವು ಬಯಸಿದುದನು
ಬಣ್ಣ ಬೇರೆ ಬೇರೆ ಇರಬಹುದು
ಎಲ್ಲದಕ್ಕೂ ಸಮಾನ ಬೆಲೆ
ಇರುವ ಸುಳ್ಳು ಪೊಳ್ಳು
ತೂಕವೇನಿಲ್ಲ, ನನ್ನಂತೆ ಇದೂ ಖಾಲಿ
ಒಳಗೆ ತುಂಬಿಟ್ಟ ಗಾಳಿ
ನೋಟಕ್ಕಾದರೂ ಹೊಟ್ಟೆ ತುಂಬಿದಂತಿರಬೇಕಲ್ಲ
ಬಿಟ್ಟರೆ ಹಾರಲೂ ಆಗದ
ನೆಟ್ಟಗೆ ನಿಲ್ಲಲೂ ಬಾರದ ಜೀವವಿದು
ಕೊಳ್ಳಿ ಕೊಳ್ಳಿ ಇದನೆಂದು ಕೂಗುತ್ತಲೇ
ಮರೆತಿದ್ದೇನೆ ಇವು ನಿಜವಲ್ಲವೆಂದು
ಕೊಂಡ ಮುಖಗಳಲ್ಲಿ ನಗೆ ರೇಖೆ ಎಳೆಯುವ
ಇವುಗಳ ಮರೆಯಲ್ಲಿ ನನ್ನದಿದೆ ಬೆವರು
ಹೊತ್ತ ಹೊರೆಯ ಇಳುಹುವರಿಲ್ಲದೆಯೇ
ಎತ್ತಿ ಹಿಡಿದ ಇವುಗಳ ನಡುವೆಯೇ
ಕಳೆದು ಹೋಗಿದ್ದೇನೆ .. ಬದುಕ ಅರಸುತ್ತಲೇ..
ಗಾಳಿ ತುಂಬಿದ ಬದುಕಿನಾವರಣ ನಿಮ್ಮ ಕವಿತೆಯಲ್ಲಾಗಿದೆ..... ಚಿತ್ರಕ್ಕೆ ಕವಿತೆ ಸಾಥ್ ಕೊಟ್ಟಿರುವ ರೀತಿಯು ಹಿಡಿಸಿತು.....
ReplyDeleteಕಳೆದು ಹೋಗಿದ್ದೇನೆ, ಎನ್ನುವುದು ನಿಜವಾಗಲೂ ನಮ್ಮೆಲ್ಲರ ಅಳಲು. ಕವಿತೆ ಸುಂದರವಾಗಿದೆ, ಸರಳವಾಗಿದೆ. ಮನ ಮುಟ್ಟುತ್ತದೆ.
ReplyDeleteಪ್ರತಿಯೊಬ್ಬರಿಗೂ ಕೆಲವೊಂದು ಸಂದರ್ಭದಲ್ಲಿ "ಕಳೆದುಹೋಗಿದ್ದೇನೆ.."ಎನಿಸದಿರದು...
ReplyDeleteಕವಿತೆಗೆ ಪೂರಕವಾದ ಚಿತ್ರ...
ತುಂಬಾ ಚೆನ್ನಾಗಿದೆ...