ಅಲ್ಲೊಮ್ಮೆ ಇಲ್ಲೊಮ್ಮೆ
ಇಣುಕುವ ಅಂಜಿಕೆ
ಅವನು ಕೈಯಲ್ಲಿ ಕೈಯಿಟ್ಟು
ನುಡಿದೇ ನುಡಿಯುತ್ತಾನೆ
ನೀ ಬೇಲೂರ ಶಿಲಾ ಬಾಲಿಕೆ
ಸುತ್ಯಾರಿಲ್ಲದಿದ್ದರೂ ಪಿಸುಮಾತು
ಹತ್ತಿರವಾದಷ್ಟು ಕರಗುವ ತನು ಮನ
ಕುಡಿಯೊಡೆದು ತುಸು ನಾಚಿಕೆ
ಕಾಲ ಉರುಳುತ್ತದೆ ಬೇಡದಿದ್ದರೂ
ಗಂಟೆಗಳು ನಿಮಿಷದಷ್ಟು ವೇಗದಿ
ನಾಳೆ ಮರಳಿ ನನ್ನೆಡೆಗೆ ಬಾ ಎಂಬ ಕೋರಿಕೆ ..
ಮತ್ತೆ ಮತ್ತೆ ಹೆಣೆದುಕೊಳ್ಳುವ ಬೆರಳ ಸಡಿಲಿಸಿ
ತಿರುಗಿ ನೋಡುವ ನೋಟದೊಳಗೆ
ಹಚ್ಚಿಟ್ಟ ಸಾಲು ಸಾಲು ದೀಪಾವಳಿಯ ದೀಪಿಕೆ
ನನನ್ನು ೨೫ ವರ್ಷಗಳ ಹಿಂದಕ್ಕೆ ಮತ್ತೆ ಕರೆದುಕೊಂಡು ಹೋದ ಅನಿತಾ ಅವರಿಗೆ ಜೈ!
ReplyDeleteಭಾಷಾ ಬಳಕೆಯಲ್ಲೇ ಲಾಲಿತ್ಯ. ತಂಗಾಳಿಯಂತೆ ಕಚಗುಳಿ ಇಡುವ ಕಾವ್ಯ ರಚನೆ.
ಚಂದದ ಕಚಗುಳಿ ಇಡೋ ಸಾಲುಗಳು..ಚೆನ್ನಾಗಿದೆ.. ದೀಪಾವಳಿಯ ಶುಭಾಶಯಗಳು..
ReplyDeleteರೋಮಾಂಚನ ಈ ದೀಪಾವಳಿ....
ReplyDeleteಮನದಲ್ಲಿ ಪ್ರೀತಿಯ ಕಚಗುಳಿ....
ನೆನೆದರೆ ನಡುಗುವ ಚಳಿ ಚಳಿ...
ಪ್ರೀತಿಯ ಆಟ ಕಣ್ಣ ನೋಟದಲ್ಲಿ...
ಮಧುರವಾದ ಈ ದೀಪಾವಳಿ.. :)
ಇದು ಪಿಸುಮಾತು ಅಲ್ವಾ..! ಬೆರಳೊಳಗೆ ಬಚ್ಚಿಟ್ಟ ನವಿರು ಭಾವಗಳು ಬೆರಳ ಸಡಿಲಿಸಿ ಪದಗಳಾಗಿದ್ದು ಖುಷಿ ಕೊಟ್ಟಿತು. ಕವಿತೆ ಹೀಗೆ ಬರಬೇಕು, ಜಡ್ಡುಗಟ್ಟಿದ ಭುಜಗಳು ಕೊಡವಿ ಮೈ ಉಬ್ಬಿಸಿ ಮಾತಾಡಿದಂತೆ. ಚೆನ್ನಾಗಿದೆ ಮೃದು ಮಧುರ ಭಾವ ಪ್ರತಿಮೆ. ಶುಭವಾಗಲಿ.
ReplyDelete