ಅವಳಿಗಳಾದ ನಮ್ಮ ಹುಟ್ಟುಹಬ್ಬ ಎಂದು ಅಪ್ಪ, ನನಗು ಅಣ್ಣನಿಗೂ ಬಟ್ಟೆ ತಂದಿದ್ದರು. ಹೊಸಿಲಲ್ಲೆ ಕಾಯುತ್ತಾ ಕುಳಿತಿದ್ದ ಇಬ್ಬರ ಕೈಗು ಒಂದೊಂದು ಪ್ಯಾಕೆಟ್ ನೀಡಿ ಒಳನಡೆದರು. ಅವಸರದಲ್ಲೇ ಪ್ಯಾಕೆಟ್ ಹರಿದು ಬಟ್ಟೆ ಹೊರಗೆಳೆದೆ. ನನ್ನಿಷ್ಟದ ಬಣ್ಣದ ಪ್ಯಾಂಟು ಶರ್ಟ್.. ಸಂತಸದಿಂದ ಕಣ್ಣು "ಮಿಟುಕಿಸುವುದರಲ್ಲೇ ಅಣ್ಣ 'ನನ್ನದದು ಕೊಡು.. ನಿನ್ನದಿಲ್ಲಿದೆ' ಎಂದು ಅವನ ಕೈಯಲ್ಲಿದ್ದ ಡ್ರೆಸ್ ನನ್ನೆಡೆಗೆ ನೂಕಿದ.ಯಾಕೋ ಮೊದಲ ಬಾರಿಗೆ ನಮ್ಮಿಬ್ಬರೊಳಗೆ ಏನೋ ಭಿನ್ನತೆ ಇದೆ ಎಂಬ ಅನುಮಾನ ನನ್ನಲ್ಲಿ ಮೊಳೆಯಿತು.
ಮರುದಿನ ಬೆಳಗ್ಗೆ ಏಳುವಾಗ ಅಣ್ಣನ ಅಂಗಿ ನನ್ನ ತಲೆದಿಂಬಿನ ಮೇಲೆ ಇತ್ತು. ನಿನಗೆ ಬೇಕಿದ್ರೆ ಇದನ್ನೆ ಹಾಕು ಎಂದ. ಅವ ಹಾಕಿದ ಸ್ವಲ್ಪ ಹಳೇ ಅಂಗಿಯ ಕಡೆಗೆ ನೋಡಿ ಮೆಲ್ಲನೆ, ಬೇಡ .. ನನ್ನ ಅಂಗಿಯೇ ಚಂದ ಎಂದೆ..
ಒಂಟಿ ಮನೆಯಲ್ಲಿ ವಾಸವಾಗಿದ್ದ ನಾವು ಮೊದಲ ಬಾರಿಗೆ ಪುಟ್ಟ ವಠಾರದ ಮನೆಯಲ್ಲಿ ವಾಸಿಸಲು ಬಂದಿದ್ದೆವು. ಎಲ್ಲ್ರ ಮನೆಯಲ್ಲೂ ಮಕ್ಕಳ ಸೈನ್ಯ ಇತ್ತು.ಬಂದ ಮರುದಿನವೆ ಬಾಗಿಲೆಡೆಯಲ್ಲಿ ಮುಖ ಹೊರಗೆ ತೂರಿಸಿ ಇಣುಕುತ್ತಿದ್ದ ನಮ್ಮಿಬ್ಬರನ್ನು ಪಕ್ಕದ ಮನೆಯ ಹುಡುಗರು ಆಟಕ್ಕೆ ಕರೆದರು. ಸದಾ ಅಣ್ಣನ ಜೊತೆಯಲ್ಲೇ ಆಡುತ್ತಿದ್ದ ನಾನು ಅವನೊಡನೆ ಸಾಗಿದೆ.ಬುಗುರಿ ಆಟ ಆಡುತ್ತಿದ್ದ ಅವರು ನನ್ನನ್ನು ಆಟದಿಂದ ಹೊರಗೇ ಉಳಿಸಿದರು. ಅಣ್ಣನೂ, ಆಗೊಮ್ಮೆ ಈಗೊಮ್ಮೆ ನನ್ನೆಡೆಗೆ ನೋಡುತ್ತಿದ್ದವನು, ಮೆಲ್ಲನೆ ಅವರ ಕಡೆಯಿಂದ ನನ್ನ ಬಳಿ ಬಂದು ನನಗೆ ಬುಗುರಿ ತಿರುಗಿಸುವುದನ್ನು ಹೇಳಿಕೊಡಲಾರಂಬಿಸಿದ.
ಆಗಷ್ಟೆ ಹೈಸ್ಕೂಲಿನ ಮೆಟ್ಟಲೇರಿದ್ದು. ಶಾಲೆಯಿಂದ ಪ್ರವಾಸ ನಿಶ್ಚಯವಾಗಿತ್ತು. ಕೇವಲ ಎರಡು ದಿನದ್ದು. ಅಪ್ಪ ಅಮ್ಮ ಒಪ್ಪಿಯಾರೆಂಬ ಧೈರ್ಯದಲ್ಲಿ ಹೆಸರು ನೀಡಿದ್ದೆವು. ಮನೆಗೆ ಬಂದೊಡನೆ ವರದಿ ಸಲ್ಲಿಸಿ ಆಗಿತ್ತು. ಅಪ್ಪ ಒಪ್ಪಿ ತಲೆಯಾಡಿಸಿದ್ದೂ ಆಗಿತ್ತು.ಆದಿನ ರಾತ್ರೆ ಅಮ್ಮ, ಅಪ್ಪನ ಜೊತೆ ತುಂಬಾ ಹೊತ್ತು ಮಾತನಾಡುತ್ತಿದ್ದುದು ಕೇಳಿಸಿತ್ತು.
ಮರುದಿನ, ರಜದಲ್ಲಿ ಅಪ್ಪ ಅಮ್ಮನೇ ನನ್ನನ್ನು ಅದೇ ಜಾಗಕ್ಕೆ ಕರೆದುಕೊಂಡು ಹೋಗುವ ಭರವಸೆ ನೀಡಿ ಅಣ್ಣನಿಗೆ ಮಾತ್ರ ಈಗ ಹೋಗಲು ಅನುಮತಿ ಕೊಟ್ಟರು.ಹಾಗಿದ್ರೆ ನಾನೂ ನಿಮ್ಮ ಜೊತೆಗೇ ಹೋಗೋದು.. ಈಗೊಮ್ಮೆ ಯಾಕೆ.. ಎಂದ ಅಣ್ನ ಅಲ್ಲಿಂದ ಸರಿದು ಹೋದ.
.
ಮೊದಲ ಬಾರಿಗೆ ಸಭೆಯಲ್ಲಿ ಭಾಷಣ ಮಾಡಿದ್ದೆ. ಬಹುಮಾನವೂ ಬಂದಿತ್ತು. ಅದೇ ಸಂಭ್ರಮದಲ್ಲಿ ಮನೆಗೆ ಬಂದಿದ್ದೆ. ನೆರೆಮನೆಯರೂ ಅಮ್ಮನೊಂದಿಗೆ ಮಾತಿಗೆ ನಿಂತಿದ್ದರು. ನನ್ನ ಉತ್ಸಾಹ ನೋಡಿ 'ಇದೆಲ್ಲ ನಾಲ್ಕು ದಿನ ಅಷ್ಟೆ ಆಮೇಲೇನಿದೆ? ಯಾರು ಕೇಳ್ತಾರೆ ನಮ್ಮ ಭಾಷಣ.. ಮನೆಯರು ಹೇಳಿದ್ದನ್ನ ಕೇಳ್ಕೊಂಡು ಇರಬೇಕು..ಎಂದು ಮೂಗು ಮುರಿದು ಹೋದರು. ಕೈಯಲ್ಲಿದ್ದ ಟ್ರೋಫಿಯನ್ನು ಪಕ್ಕಕ್ಕೆಸೆದೆ.ಹೊರಗಿನಿಂದ ಆಗಷ್ಟೆ ಒಳ ಬಂದ ನನ್ನಣ್ಣ ಅಮ್ಮನೊಡನೆ ನನ್ನ ಭಾಷಣದ ಶೈಲಿಯ ವರ್ಣನೆ ಮಾಡಿ ಅಲ್ಲಿ ಬಿಸುಡಿದ್ದ ಟ್ರೋಫಿಯನ್ನು ಸುರಕ್ಷಿತ ಸ್ಥಳ ಸೇರಿಸಿದ.
ನನ್ನ ಪ್ರತಿದಿನದ ಎಲ್ಲಾ ಕೆಲಸ ಕಾರ್ಯಗಳ ಒಂದು ಭಾಗ ನನ್ನ ಅಣ್ಣನದೇ ಆಗಿತ್ತು. 'ಹೆಣ್ಣಿನ ಜನುಮಕ್ಕೆ ಅಣ್ಣ ತಮ್ಮರು ಬೇಕು' ಎನ್ನುವ ಜನಪದ ಗೀತೆ ನನ್ನ ಮಟ್ಟಿಗೆ ನಿಜವೇ ಆಗಿತ್ತು. ಭಾಂದವ್ಯದ ಮೂಲ ಇರುವುದು ತ್ಯಾಗದಲ್ಲಿ ಎಂದು ನನಗೆ ತನ್ನ ಕೆಲಸಗಳಿಂದಲೇ ತಿಳಿಸಿದವನು.ಅವಳಿಗಳಾದ್ದರಿಂದ ಅವನಿಂದ ಕೇವಲ ಗಂಟೆಗಳ ಲೆಕ್ಕದಲ್ಲಿ ನಾನು ಚಿಕ್ಕವಳಾಗಿದ್ದರೂ ಇನ್ನೂ ನನ್ನನ್ನು ಸಣ್ಣ ಮಗುವೆಂದೇ ತಿಳಿದ ಅವನ ಪ್ರೀತಿಗೆ ಎಲ್ಲೆಯೆಲ್ಲಿ.. ಇದು ಕೂಡಾ ನನ್ನ ಸ್ವಾರ್ಥವೋ ಏನೋ .. ಆದರೂ ನಿತ್ಯವೂ ನನ್ನೆಡೆಗೆ ಹರಿದು ಬರುವ ಅವನ ಮಮತೆಯ ಧಾರೆ ನಿರಂತರವಾಗಿರಲಿ ಎಂಬ ಹಾರೈಕೆಯಷ್ಟೆ ನನ್ನದು.
Anil is so sweet! you are lucky to have him as your brother Anitha. I read the write up. It is nicely written. I liked it.
ReplyDeleteNice writing
ReplyDeletetnq AS
ReplyDeletetnq Kamath sir
I liked it, Anitha, well said this is the bonding between brothers and sisters in the world which no one can change.
ReplyDeleteReally u are very lucky to have such a nice & understanding Twin Brother :) Wish u both a very happy Rakshabandhan :)
ReplyDeleteಅಣ್ಣನ ಪ್ರೀತಿ ಪಡೆದ ನೀವು ಧನ್ಯರು. ಆ ಅಣ್ಣನ ಹೆಸರು ಹಾಕಬೇಕಿತ್ತು. ಇನ್ನಾದರೂ ಬರೆಯಿರಿ.
ReplyDeleteಮಾಲಾ
ನಿಮ್ಮ ಬಹುತೇಕ ಕವಿತೆಗಳನ್ನು ಓರ್ಕುಟ್ ನಲ್ಲಿ ಓದಿದ್ದೇನೆ, ಮೆಚ್ಚಿದ್ದೇನೆ. ನಿಮ್ಮ ಗದ್ಯವನ್ನು ಓದಿರಲಿಲ್ಲ. Very nice style, ಆಪ್ತ ಬರಹ.
ReplyDeleteanil bhavange rakshabandhana lekkalli olleya gift ningala ee baraha... anna - thangi bhandhana yavagalu henge erali..li engala shubha harike....
ReplyDeleteHello Anitha, Happy Rakshabandan day! Lekhana tumba chennagide. Avvigoo odlikke helteeni.
ReplyDeleteneevu chikkavariddaga ninna anna Anil ge dose puuta antidru, matte neenu Idli putti...nenapideya?
Balakrishna (Komati Nanda)
Very nice....
ReplyDeleteಧನ್ಯವಾದಗಳು
ReplyDeleteಮಾಲ.. ನನ್ನಣ್ಣನ ಹೆಸರು ಅನಿಲ್..
ReplyDelete"ಭಾಂದವ್ಯದ ಮೂಲ ಇರುವುದು ತ್ಯಾಗದಲ್ಲಿ "
ReplyDeleteಈ ಸಂಬಂಧ- ಅನುಬಂಧ ಹೀಗೇ ಇರಲಿ.
ಬಹಳ ಚನ್ನಾಗಿದೆ ಅಣ್ಣಾ
ReplyDeleteNicely written.. :)
ReplyDelete