Pages

Total Visitors

Sunday, August 28, 2011

ನೆನಪು..




ಎಲ್ಲವನ್ನು ಸೇರಿಸಿ ಹೆಡೆಮುರಿ ಕಟ್ಟಿ 

ಬೀಸಿ ಎಸೆದೆ ಮರೆವಿನ ಕಾರಾಗ್ರಹಕ್ಕೆ 

ಯಾರು ಬೀಗವ ತೆಗೆದರೋ 

ಪುಟಿದೆದ್ದು ತಿರುಗಿ ಬಂದು ಎದೆಬಾಗಿಲ ತಟ್ಟಿತು...

ಸರಿ,.. ಅದಕ್ಕೂ ಬೇಸರವಾಗಿರಬಹುದು 

ಈಗ  ಸುಮ್ಮನಿರಬಹುದು ಎಂದು 

ಮೆತ್ತಗೆ ಬಾಗಿಲು ಸರಿಸಿ ಬಿಟ್ಟೆ ಒಳಕ್ಕೆ 

ಕತೆ ಹೇಳಲೇ ಎಂದು ಕೇಳಿ   ಕುಳಿತೇ ಬಿಡಬೇಕೇ ? .

ಬಿಟ್ಟುಬಿಡು ಹಳೆಯ ಪುರಾಣ 

ಹೊಸತೇನಿದೆ  ಹೇಳಲಿಕ್ಕೆ 

ಎಂದು  ಮಲಗಿದರೂ, ಹೇಳಿತು  ಮುಸುಕ ಸರಿಸಿ...

ಮಗದೊಮ್ಮೆ ಕೇಳಿದರೇನು 

ಮರೆತ  ಸವಿ ಮಾತುಗಳ ?

 .... ಎದ್ದು ಬಿಡು

ಬರಲಾರದ ನಿದ್ದೆಯ  ಸೋಗೇಕೆ......?

ಮುಚ್ಚಿದ ಕಣ್ಣಲ್ಲೂ ಬೆಳದಿಂಗಳು ಹೊರಚೆಲ್ಲಿ

 ತುಟಿ ಕೊಂಕಿ ನಗುವರಳಲು 

ನೆನಪು ಹೊದಿಕೆಯೊಳಗೆ ಸೇರಿ 

ಬೆಚ್ಚಗೆ  ಮಲಗಿಯೇ ಬಿಟ್ಟಿತು ..

ನನ್ನ ಕನಸುಗಣ್ಣ ಕಾವಲಿರಿಸಿ ..


-- 

13 comments:

  1. ಕವನ ಚೆನ್ನಾಗಿದೆ ಅನಿತಕ್ಕ.
    ಕಾರಾಗೃಹ ಮಾಡಿ :)

    ReplyDelete
  2. hey Nice one!
    bharee chayi undu needa kavite :):):)

    ReplyDelete
  3. ಮಾನ್ಯರೆ, ಸಾಲು ಹೀಗೆ ಬರಬೇಕಿತ್ತು.... " ಕ್ಕೆ" ಅನ್ನುವ ಜಾಗದಲ್ಲಿ " ದ"
    ಎಲ್ಲವನ್ನು ಸೇರಿಸಿ ಹೆಡೆಮುರಿ ಕಟ್ಟಿ
    ಬೀಸಿ ಎಸೆದೆ ಮರೆವಿನ ಕಾರಾಗ್ರಹದ
    ಯಾರು ಬೀಗವ ತೆಗೆದರೋ ...!
    -ಸುಂದರ ಕವಿತೆ.ಹೆಮ್ಮನಸ್ಸಿನ ಕಾವ್ಯದ ಭಾವ ಹೊಸ ನವಿರು ಭಾವಗಳನ್ನು ತೆರೆದಿಡುತ್ತದೆ. ಅಭಿನಂದನೆಗಳು. (ನಂಗಡ ಕೊಡಗಿಂಜ ಇನ್ನೆತ್ತ ಒರು ಕವಯತ್ರಿ ಬಪ್ಪದ್‍ ದುಂಬ ಅವಶ್ಯ ಇಂಜತ್ತ್. ಅದ್‍ ಇಂದ್‍ ಕಾಂಬಕ್ಕ್ ಕಿಟ್ಟಿಚ್ಚಿ)

    ReplyDelete
  4. No words to say.... Superb Anitha... Love it

    ReplyDelete
  5. ಕಾರಾಗ್ರಹದ .. ಅಂದರೆ ಮುಂದಿನ ವಾಕ್ಯವೇ ತಪ್ಪಾಗುತ್ತದೆ .. ನಾನು ನೆನಪುಗಳನ್ನು ಕಟ್ಟಿ ಎಸೆದದ್ದು ಮರೆವಿನ ಕಾರಾಗ್ರಹದೊಳಗೆ.. ನೆನಪುಗಳು ಬರುವುದಕ್ಕೆ ಯಾರಪ್ಪಣೆ ಬೇಕು ? ಯಾರೋ ಬೀಗ ತೆಗೆದು ಹೊರಗೆ ಬಿಟ್ಟಂತೆ ಹೊರಬಂದು ಬಿಡುತ್ತವೆ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ರವಿಯವರೇ ..

    ReplyDelete
  6. Kirana .. ಕಾರಾಗ್ರಹ ಹಳತ್ತಾದಿಕ್ಕು :):)

    ReplyDelete
  7. ಉತ್ತಮ ವಸ್ತುವಿನ ಹಂದರವನ್ನು ಬಿಡಿಸಿಡುವ ಕವನ.

    "ಎದ್ದು ಬಿಡು
    ಬರಲಾರದ ನಿದ್ದೆಯ ಸೋಗೇಕೆ?"

    ಸಾಲುಗಳು ಮೆಚ್ಚಿಗೆಯಾದವು. ಅಂತೆಯೇ ಇಡೀ ಕವನ.

    ಮುಖ್ಯವಾಗಿ ಅನಿತಾ ಮೇಡಂ ಮತ್ತು ರವಿ ಮುರ್ನಾಡು ಸರ್ ನಡುವಿನ ಕಾವ್ಯ ಚರ್ಚೆ ಇಷ್ಟವಾಯಿತು.

    ReplyDelete
  8. ಚೆಂದದ ಕವನ ಮೇಡಮ್.. ಇಷ್ಟವಾಯ್ತು.. ನಿಮ್ಮ ಬ್ಲಾಗ್‍ಗೆ ಇದೆ ಮೊದಲ ಭೇಟಿ.. following :)

    ReplyDelete
  9. ವಂದನೆಗಳು ಬದರಿನಾಥ ಪಳವಲ್ಲಿಯವರೇ
    ಪ್ರದೀಪರವರಿಗೆ ಸ್ವಾಗತ :)

    ReplyDelete
  10. Kavanada shaili ishta aythu innu thumba bareyiri
    al d best

    ReplyDelete
  11. ಸೂಪರ್ ರೀ ಕವಿತೆ, ಓದುತ್ತಾ ಓದುತ್ತಾ........

    ReplyDelete