Pages

Total Visitors

Tuesday, August 30, 2011

ಒಂದಾದವರು...


ನಾನೊಂದು ಅಕ್ಷರ 

ಅವಳೊಂದು ಅಕ್ಷರ

ಅರ್ಥೈಸಿಕೊಳಲಾರದಂತೆ  

ನಮ್ಮಿಬ್ಬರ ನಡುವೆ 

ಅದಾರೋ 

ಚುಕ್ಕಿಗಳನ್ನು ಇಟ್ಟಿದ್ದರು....

ನನ್ನ ಮುಖ  ಅವಳೂ 

ಅವಳ ನಗು ನಾನೂ

ದೂರದಿಂದಲೇ ನೋಡಿದೆವು

ಒಂದೊಂದೇ ಚುಕ್ಕಿಗಳನ್ನು ಅಳಿಸಿ 

ನಾವಿಬ್ಬರೊಂದಾದೆವು ....

ಒಂದು ಪದವಾದೆವು 


7 comments:

  1. Beautiful expression Anitha! keep it up! :):)

    ReplyDelete
  2. Excellent Photo by Mr.Ram Naresh Manchi!
    ( Click on the photo to get a expanded view )
    Good work! Really liked it!
    tumba chennagide Anitha, Thank you both.

    ReplyDelete
  3. ಗಟ್ಟಿ ಕವಿತೆ. ಹಲವು ದಿನಗಳಿಂದ ಪಕ್ವಗಾಗುತ್ತಲೇ ಅವಿತುಕೊಳ್ಳಲಾಗದೇ ಒಮ್ಮಲೆ ಪದಗಳಲ್ಲಿ ಮೂರ್ತರೂಪ ಪಡೆದ ಬಗೆ ಸುಂದರವಾಗಿದೆ. ಗೊತ್ತಿದ್ದೂ ಗೊತ್ತಿಲ್ಲದಂತೆ ಅಡಗಿಕೊಂಡ ಭಾವವಿದು.ಶುಭವಾಗಲಿ.

    ReplyDelete
  4. ಅಕ್ಷರ ಅಕ್ಷರ ಕೂಡಿದಾಗಲೇ ಪದಕ್ಕೊಂದು ಅರ್ಥ.. ಚೆನ್ನಾಗಿದೆ

    ReplyDelete
  5. ವಾವ್

    ಬರೀ ಅಕ್ಷರಗಳಲ್ಲೇ ಪದವನ್ನು ಕಟ್ಟಿನಿಲ್ಲಿಸಿದ ಮತ್ತು ತನ್ಮೂಲಕ ಎರಡು ಹೃಹಯಗಳ ನಡುವಿನ ’ಚುಕ್ಕಿಗಳ’ ಅಂತರವನ್ನು ಅಳಿಸಿ ಹಾಕಿದ ನಿಮ್ಮ ಕವನದ ಹೂರಣ, ಸೂಪರ್.

    ಕಾವ್ಯವು ಓದುಗನಿಗೆ ಅರ್ಥವಾಗಾದಾಗಲೇ ಅದರ ಹುಟ್ಟಿಗೂ ಸಾರ್ಥಕ್ಯ. ನಿಮ್ಮ ಸುಲಭ ಸರಳ ಶೈಲಿ ಸಲಿಲಿತವಾಗಿ ಓದಿಸಿಕೊಂಡು ಹೋಗುತ್ತದೆ ಮತ್ತು ಮರು ಓದಿಗೆ ಇನ್ನೊಂದು ಆಯಾಮವನ್ನು ಪ್ರಕಾಶಿಸುತ್ತದೆ.

    ನೀವು ನಮ್ಮ ತಲೆಮಾರಿನ ಒಬ್ಬ ಉತ್ತಮ ಕವಿಯತ್ರಿ.

    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    ReplyDelete
  6. ನಾಕಕ್ಷರಗಳಲ್ಲೇ ನಾಕು ವರುಷದ ಭಾವ...... ಚೆನ್ನಾಗಿದೆ...

    ReplyDelete