ಮನೆಯಲ್ಲಿ ಸೂತಕದ ಛಾಯೆ.
ಅಪ್ಪ ಕೈಯಲ್ಲಿ ಹಿಡಿದಿದ್ದ ಪೇಪರನ್ನು ಅತ್ತಿತ್ತ ಎಸೆದು ಅಸಮಾಧಾನ ವ್ಯಕ್ತ ಪಡಿಸಿದರೆ , ಅಮ್ಮ ಪಾತ್ರೆಗಳ ಶಬ್ಧವನ್ನು ಏರಿಸಿ ಸೂಚಿಸುತ್ತಿದ್ದಳು. ಮಕ್ಕಳೇನೂ ಕಡಿಮೆ ಇರಲಿಲ್ಲ. ದೊಡ್ಡವಳು ಕೈಯಲ್ಲಿ ಪುಸ್ತಕ ಹಿಡಿದಿದ್ದರೂ ಕಣ್ಣೆಲ್ಲ ಅಲ್ಲೇ ನೆಟ್ಟು ಶತಪಥ ಸುತ್ತುತ್ತಿದ್ದಳು. ಚಿಕ್ಕವಳಂತೂ ಗೊಣಗಾಡಿಕೊಂಡು ಅದರೆದುರೇ ಕುಳಿತಿದ್ದಳು.ರಜಾ ದಿನವಾದ ಇಂದೇ ಹೀಗಾಗಬೇಕೇ..?
ಅಪ್ಪನಿಗೆ ಕಾಲು ಚಾಚಿ ಅದರತ್ತಲೇ ನೋಡುತ್ತಾ ಕುಳಿತುಕೊಳ್ಳುವುದು ಪ್ರಿಯವಾದರೆ, ಅಮ್ಮನಿಗೆ ಅದರೊಡನೆ ಮಾತುಕತೆ.ಮಕ್ಕಳಿಬ್ಬರಿಗಂತೂ ಅದುವೇ ದೈವ. ತಮ್ಮೆಲ್ಲ ಕಷ್ಟ ಸುಖಃಗಳು ಅದರ ಮೂಲಕವೇ ಜಾಹೀರಾಗಬೇಕಿತ್ತು.
ಇಂದದು ಯಾರೊಂದಿಗೂ ನಗದೇ ತಣ್ಣಗೆ ಮಲಗಿತ್ತು.ಮನದ ನೆಮ್ಮದಿ ಕದಡಿತ್ತು..
ಚಿಕ್ಕವಳು ಕುಳಿತಲ್ಲಿಂದಲೇ ಜೋರಾಗಿ ಕಿರುಚಿದಳು. ಎಲ್ಲರೂ ಅವಳಿದ್ದ ಕೋಣೆಯ ಒಳಗೆ ಹೋಗಿ ನೋಡತೊಡಗಿದರು. ಹಾಂ .. ನೋಡುತ್ತಿದ್ದಂತೇ ಎಲ್ಲರ ಮುಖದ ಮೇಲೆ ನಗು ತಾನೆ ತಾನಾಗಿ ಪಸರಿಸಲು ಪ್ರಾರಂಭಿಸಿತು. ನಿಧಾನಕ್ಕೆ ಮೋಡೆಮ್ ನಲ್ಲಿ ಹಳದಿ ಲೈಟ್ ಕಣ್ಣು ಮಿಟುಕಿಸುತ್ತಾ ಉರಿಯಲಾರಂಭಿಸಿತು.
ಅಬ್ಬಾ.. ಅಂತೂ ನೆಟ್ ಸರಿ ಆಯ್ತು..
hahahahaha mane maneya kate idu....vyate agadiddare saaku!
ReplyDeleteNice one madam! Thank you.
ya its really a common thing in our houses...
ReplyDeleteಚಿಕ್ಕವಳು ಕುಳಿತಲ್ಲಿಂದಲೇ ಜೋರಾಗಿ ಕಿರುಚಿದಳು. ಎಲ್ಲರೂ ಅವಳಿದ್ದ ಕೋಣೆಯ ಒಳಗೆ ಹೋಗಿ ನೋಡತೊಡಗಿದರು. ಹಾಂ .. ನೋಡುತ್ತಿದ್ದಂತೇ ಎಲ್ಲರ ಮುಖದ ಮೇಲೆ ನಗು ತಾನೆ ತಾನಾಗಿ ಪಸರಿಸಲು ಪ್ರಾರಂಭಿಸಿತು. ನಿಧಾನಕ್ಕೆ ಮೋಡೆಮ್ ನಲ್ಲಿ ಹಳದಿ ಲೈಟ್ ಕಣ್ಣು ಮಿಟುಕಿಸುತ್ತಾ ಉರಿಯಲಾರಂಭಿಸಿತು.
ReplyDeleteabba sootakada chaye kaledu santhoshada vatavarana mooditalla.. sadya.. :):):):)