ಸಂಜೆ ಹೊತ್ತು. ಸೂರ್ಯ ತನ್ನ ಕರ್ತವ್ಯವನ್ನು ಮುಗಿಸಿ ಮನೆಗೆ ಹೋಗುವ ತರಾತುರಿಯಲ್ಲಿದ್ದ. ಈ ಹೊತ್ತಿನಲ್ಲಿ ಏನೂ ಮಾಡದೆ ಸುಮ್ಮನೆ ಅತ್ತಿತ್ತ ನೋಡುತ್ತ ಕುಳಿತಿರುವುದು ನನಗೆ ಅತಿ ಇಷ್ಟ.
ಆಗಲೇ ನನ್ನ ಕಣ್ಣಿಗೆ ಬಿದ್ದಿತ್ತದು. ಪುಟ್ಟ ಪುಟ್ಟ ಇರುವೆಗಳು ಒಂದು ಹಸಿರಿನ ಮಿಡತೆಯ ಸತ್ತ ದೇಹವನ್ನು ಹೊತ್ತೊಯ್ಯುತ್ತಿದ್ದವು. ಸ್ವಲ್ಪ ದೂರ ಸಾಗಿದ ಬಳಿಕ ಗೋಡೆಯಲ್ಲಿದ್ದ ಚಿಕ್ಕ ತೂತಿನೊಳಗೆ ಸಾಗಬೇಕಿತ್ತು ಇವರ ಮೆರವಣಿಗೆ.
ಎಷ್ಟು ಸಲ ಸುತ್ತು ಬಂದರೂ ಈ ಭಾರೀ ಗಾತ್ರದ ಆಹಾರವನ್ನು ಗೂಡಿನೊಳಗೆ ಎಳೆದೊಯ್ಯಲು ಸಾಧ್ಯವಾಗಲಿಲ್ಲ. ನಾನು ಕುತೂಹಲದಿಂದಲೇ ಅವರ ಕಾರ್ಯವನ್ನು ವೀಕ್ಷಿಸುತ್ತಿದ್ದೆ. ನೋಡುತ್ತಿದ್ದಂತೆ ಮಿಡತೆಯ ಅಂಗಗಳನ್ನು ತುಂಡಾಗಿಸತೊಡಗಿದವು. ಬೇರೆ ಬೇರೆಯಾಗಿಸಿದ ಚೂರುಗಳನ್ನು ವಿಜಯ ಪತಾಕೆಯಂತೆ ಎತ್ತಿ ಹಿಡಿದು ಅತ್ತಿತ್ತ ಓಡಾಡಿದವು.
ನಂತರ ಒಂದೊಂದಾಗಿ ನಿಧಾನಕ್ಕೆ ಗೂಡಿನೊಳಗೆ ಹೋಗತೊಡಗಿದವು. ಅಷ್ಟೇ.. ಸ್ವಲ್ಪ ಹೊತ್ತಿನಲ್ಲಿ ಮಿಡತೆಯ ಇಡೀ ಶರೀರ ಗೂಡಿನೊಳಗೆ ಸೇರಿ ಹೋಗಿತ್ತು ತುಂಡು ತುಂಡುಗಳಾಗಿ..
ನಾನು ಮೆಲ್ಲನೆದ್ದು ಅಡುಗೆ ಮನೆಯಲ್ಲಿ ಹರವಿಟ್ಟಿದ್ದ ಉದ್ದನೆಯ ಪಡುವಲಕಾಯನ್ನು ತುಂಡಾಗಿಸಿ ಫ್ರಿಡ್ಜ್‌ನೊಳಗಿರಿಸಿದೆ.
Nodi kali maadi tili!
ReplyDeleteTumba chennagide!
ಸಹ ಬಾಳ್ವೆ, ಕರ್ತವ್ಯ ನಿಷ್ಠೆ ಇವುಗಳಿಂದ ಕಲಿಯಬೇಕು.
ReplyDeleteನಿಮ್ಮ ಸರಳ ಶೈಲಿ, ಸುಂದರ ಚಿತ್ರ ಇನ್ನಷ್ಟು ಮೆರಗುಕೊಟ್ಟಿವೆ.
tnq :)
ReplyDelete