Pages

Total Visitors

Tuesday, September 11, 2012

ಬೆಳಕಿಂಡಿ..ಅಬ್ಬಾ ಎಷ್ಟು ತುಂಟ ಮಕ್ಕಳು.. ಹೇಳಿದ್ದೇನೂ ಕೇಳೋದಿಲ್ಲ ..  ವಿಸ್ತಾರವಾಗಿರುವ ಮೈದಾನವಿಡೀ ತಮ್ಮದೇ ಎಂಬಂತೆ ಅತ್ತಿಂದಿತ್ತ ಇತ್ತಿಂದತ್ತ ಕುಣಿಯುತ್ತಿದ್ದಾರೆ.

 ಅರೇ.. ಅದಾರು ಸೈಕಲ್ ಬಿಡುತ್ತಿರುವ ಪುಟ್ಟ ಹುಡುಗಿ..ಜೊತೆಗೆ ಇನ್ನೂ ಒಂದನ್ನು ಕೂರಿಸಿಕೊಂಡು ..

 'ಹೇ.. ಜಾಗ್ರತೆ.. ಮೆಲ್ಲ ತುಳಿ.. ಬಿದ್ದುಗಿದ್ದು ಬಿಟ್ಟೀರಾ..  ..' 
ಛೇ.. .. ಆ ಪಾಪದ ನಾಯನ್ನು ಅದೆಷ್ಟು ಗೋಳಾಡಿಸುತ್ತಾರೆ. ನಿನ್ನೆ ಮನೆ ಅಂಗಳಕ್ಕೂ ಬಂದಿತ್ತು. ಬಾಯಿಗೆ ಸೇರದ ಚಪಾತಿಯೊಂದನ್ನು ಅದರತ್ತ ಎಸೆದಿದ್ದೆ. ಬಾಲ ಅಲ್ಲಾಡಿಸುತ್ತಾ ಕಚ್ಚಿಕೊಂಡು ಓಡಿತ್ತು. ಈಗ ಈ ಮಕ್ಕಳು ಅದಕ್ಕೆ ಕಲ್ಲೆತ್ತಿ ಹೊಡೆಯುತ್ತಿದ್ದಾರೆ. 

'ಕೆಟ್ಟ ಮಕ್ಕಳೇ, ಇಲ್ಲಿ ಕೇಳಿ.. ಪ್ರಾಣಿ  ಹಿಂಸೆ  ಮಹಾಪಾಪ.. ಸುಮ್ಮನಿರಿ. ನರಕದಲ್ಲಿ ನಿಮಗೂ ಇದೇ ರೀತಿಯ ಶಿಕ್ಷೆ ಕೊಡುತ್ತಾನೆ ಯಮ..'
ನಾಯೆತ್ತಲೋ ಓಡಿತು. ಮಕ್ಕಳು ಅದರ ಗೊಡವೆ ಬಿಟ್ಟು ಕ್ರಿಕೆಟ್ ಆಡತೊಡಗಿದರು. ಒಬ್ಬ ಎಸೆದ ಚೆಂಡಂತೂ ನನ್ನ ಕಡೆಗೇ ಬಂತು.. ತಲೆ ಬಗ್ಗಿಸಿದೆ.. 
ಹೋ .. ಅದೆಲ್ಲಿತ್ತು ಪಾಪದ  ಹಸು.. ಮೈದಾನದಲ್ಲಿ ಅದಕ್ಕೇನಿದೆಯಪ್ಪಾ ತಿನ್ನಲು.. ಮಕ್ಕಳು ತಿಂದೆಸೆದು ಬಿಟ್ಟ ಪ್ಲಾಸ್ಟಿಕ್ ಕವರ್ ಗಳೇ.. ಛೇ ಪಾಪ .. ಮಕ್ಕಳಿಗೆ ಹೇಳಬೇಕು ಅಲ್ಲೆಲ್ಲಾ ಎಸೆಯಬೇಡಿ ಎಂದು..


ಗುಲ್ಮೊಹರ್ ಮರದಡಿ ಬೀಸುವ ಗಾಳಿಗೆ ತಟಪತನೆ ಉದುರುತ್ತಿರುವ ಹೂವಿನ ಪಕಳೆಗಳು.. ಅದನ್ನು ಉಗುರುಗಳಿಗೆ ಹಾಕಿಕೊಂಡು 

ರಾಕ್ಷಸರ ಆಟ ಆಡಬಹುದು.. ಆಹಾ.. ಖುಷಿಯಾದೀತು ಮಕ್ಕಳಿಗೆ..


ಥೂ.. ಹಾಳು ಸೊಳ್ಳೆಗಳು.. ಎಷ್ಟು ಸಲ ಹೇಳಬೇಕು ನಿಮಗೆ ಕಿಟಕಿ ಬಾಗಿಲು ಸಂಜೆ ಹೊತ್ತು ತೆರೆದಿರಿಸಬೇಡಿ ಎಂದು.. 
ದಡಾಲನೆ ಮುಚ್ಚಿದ ಬಾಗಿಲು..
ಮತ್ತೇನಿಲ್ಲ .. ಬರಿ ಕತ್ತಲೆ ಮಾತ್ರ..  


17 comments:

 1. very nice to read this with pictures..

  ReplyDelete
 2. ಎಷ್ಟೊಂದು ವಾಸ್ತವ!! ಚೆನ್ನಾಗಿದೆ ಇಂದಿನ ಸತ್ಯ.

  ReplyDelete
 3. ಹೀಗೆ ಮನದ ಕತ್ತಲುಗಳು ಕೆಲವೊಮ್ಮೆ ಸ್ವಚ್ಚಂದವಾಗಿ ಉಸಿರಾಡುವ ಅವಕಾಶವನು ಕಿತ್ತೆಸೆಯುತ್ತವೆ. ಪ್ರತಿಯೊಂದು ಸಾಲುಗಳೂ ಸ್ವತಂತ್ರ! ಬೆಳಕು ನೀಡುವ ಕಿಂಡಿಗಳೂ ಎಲ್ಲ ಕಡೆ ಬಾಗಿಲು ಮುಚ್ಚಿದ್ದರೂ!

  ReplyDelete
 4. ಚಂದಮಾಮ ಕಥೆ ಥರ ಚಿತ್ತಗಳಿಂದ ಕೂಡಿದೆ...ಎಲ್ಲಾ ಸ್ವಗತ ಅಲ್ಲವೇ ಚೆನ್ನಾಗಿದೆ..

  ReplyDelete
 5. very nice anitha.. foto's jote captions super

  ReplyDelete
 6. ಚೆನ್ನಾಗಿದೆ... ನಾವು ನಮಗೆ ಇಷ್ಟವಾದಂತೆ, ನಮ್ಮ ಮನಸ್ಸಿಗೆ ಹಿತವೆನ್ನಿಸಿದ್ದನ್ನು ಮಾಡುತ್ತಾ ಸಾಗುವ ನಾವು... ಅದು ಇತರರ ನೋವಿಗೆ, ಇನ್ನಿತರ ವ್ಯವಸ್ಥೆಗಳನ್ನು ಹಾಳು ಮಾಡಿದರೂ ಅದರ ಪರಿವೆ ಇಲ್ಲದಂತೆ ನಡೆಯುತ್ತದೆ... ಅಂತಹ ಬದುಕಿನ ಕತ್ತಲಿನ ಮುಸುಕುಗಳೆಷ್ಟಿವೆಯೋ ನಮ್ಮ ನಡುವೆ...

  ReplyDelete
 7. eno onthara vishaada aayth kane ...

  ReplyDelete
 8. ತುಂಬಾ ಇಷ್ಟವಾಯ್ತು ..ನಿಜವಾಗಲೂ ಹೋಗುವ ದಾರಿಯಲ್ಲೋ ತುಂಬಾ ಕಥೆಗಳು ಇರುತ್ತವೆ ಅಲ್ಲವ?

  ReplyDelete
 9. ಚಿಕ್ಕ ವಯಸ್ಸಿನಲ್ಲಿ ಮಾಡಿದ ಕೆಲವೊಂದು ತರಲೆಗಳ ನೆನಪು ಕಾಡಿತು...

  ReplyDelete