Pages

Total Visitors

Saturday, December 8, 2012

ಚಿಟ್ಟೆ ಮತ್ತು ಹಕ್ಕಿ






ಚಿಟ್ಟೆಯೊಂದು ಉದ್ಯಾನವನದಲ್ಲಿ ಅತ್ತಿತ್ತ ಹಾರುತ್ತಿತ್ತು. ತನ್ನ ರಂಗು ರಂಗಿನ ರೆಕ್ಕೆಗಳ ಬಗ್ಗೆ ಅತೀವ ಹೆಮ್ಮೆಯಿಂದ ಬೀಗುತ್ತಿತ್ತು. ಯಾರಾದರು ನೋಡಲಿ .. ಹೊಗಳಲಿ ... ಎಂದದರ ಆಸೆ.. 

ಬೂದು ಬಣ್ಣದ ಹಕ್ಕಿಯೊಂದು ಮರದ ಕೊಂಬೆಯ ಮೇಲೆ ಕುಳಿತು ಗದ್ದಲವೆಬ್ಬಿಸುತ್ತಿತ್ತು. ಅಷ್ಟು ದೊಡ್ಡ ಹಕ್ಕಿಯ ಅನಾಕರ್ಷಕ ಬಣ್ಣ ಚಿಟ್ಟೆಗೆ ನಗು ತರಿಸಿತು. ತನ್ನ ಅಂದ ಅದಕ್ಕೆ ಕಾಣಲೆಂದು ಅದರ ಎದುರಿನಲ್ಲೇ ಮೇಲೆ ಕೆಳಗೆ ಅತ್ತ ಇತ್ತ ಸುತ್ತಿ ಸುಳಿಯಿತು.

ಇದನ್ನೇ ಗಮನಿಸುತ್ತಿದ್ದ ಹಕ್ಕಿ ಪಕ್ಕನೆ ಹಾರಿ ತನ್ನ ಕೊಕ್ಕಿನಲ್ಲಿ ಅದನ್ನು ಸಿಕ್ಕಿಸಿಕೊಂಡಿತು. 

 ನುಂಗುವ ಮೊದಲು  ಚಿಟ್ಟೆಯ ರಂಗು ರಂಗಿನ  ರೆಕ್ಕೆಗಳನ್ನು ಉಪಯೋಗವಿಲ್ಲದ ವಸ್ತು ಎಂಬಂತೆ ಕಿತ್ತೆಸೆಯಿತು.

14 comments:

  1. ಇದರ ನೀತಿ ಏನು ಗೊತ್ತೇ...?
    ಅದನ್ನು ಎರಡು ರೀತಿಯಲ್ಲಿ ಹೇಳಬಹುದು
    ೧. ಹೊಟ್ಟೆಗೆ ಬೇಕಾಗಿರುವುದು 'ಬಣ್ಣ'ವಲ್ಲ, 'ಅನ್ನ'...
    ೨. ಸಿಕ್ಕಾಪಟ್ಟೆ 'ಬಣ್ಣಾಣಗಿತ್ತಿ'ಯಾಗದಿರೆಲೆ ಪಾತರಗಿತ್ತಿ... ಹಕ್ಕಿಯ ಬಾಯಿಗೆ ಸಿಕ್ಕಿ ಸತ್ತುಗಿತ್ತಿ...

    ReplyDelete
    Replies
    1. In present world, women situations is like butterfly. am I correct

      Delete
  2. ಬಹಳ ಚಂದದ ಕತೆ ಎಂದು ನಾನಿದನ್ನು ಹೊಗಳಿದರೆ ಕತೆಗಾರ್ತಿಯದೂ ಚಿಟ್ಟೆಯ ಅವಸ್ಥೆ ಆಗಬಾರದಲ್ಲ? ;-) ಆದರೂ objective ಆಗಿ (ಕತೆಗಾರ್ತಿಯ ತಲೆಗೆ ಹತ್ತದಂತೆ) ಹೇಳುತ್ತೇನೆ: ಬಹಳ ಸೊಗಸಾದ ಅರ್ಥಗರ್ಭಿತ ’ಚಿಕ್ಕ ಮತ್ತು ಚೊಕ್ಕ’ದಾದ ಕತೆ. ಪುಟಗಟ್ಟಲೆ ಬರೆದು ಹೇಳುವಂಥದ್ದನ್ನು ಮೂರುಚಿತ್ರಗಳ ಜತೆ ಮೂರು ಚಿಕ್ಕ ಪ್ಯಾರಗ್ರಾಫ್‌ಗಳಲ್ಲಿ ಹೇಳಿದ್ದು ಮತ್ತಷ್ಟು ಚಂದವಾಗಿದೆ. "ನುಂಗುವ ಮೊದಲು ಚಿಟ್ಟೆಯ ರಂಗು ರಂಗಿನ ರೆಕ್ಕೆಗಳನ್ನು ಉಪಯೋಗವಿಲ್ಲದ ವಸ್ತು ಎಂಬಂತೆ ಕಿತ್ತೆಸೆಯಿತು." ವಾಕ್ಯವೊಂದಕ್ಕೇ ವಿಶೇಷ ‘ಭೇಷ್!’ ಸಲ್ಲುತ್ತದೆ. ಈ ಕತೆಯಲ್ಲಿ ಬರುವಂಥ ಚಿಟ್ಟೆಗಳನ್ನೂ ಅವುಗಳಿಗಾಗುವ ಪಾಡನ್ನೂ ನಾವೆಲ್ಲ ನೋಡುತ್ತಿರುತ್ತೇವೆ, ಕಲಿಯೋದಿಲ್ಲ ಅಷ್ಟೇ.

    ReplyDelete
  3. ಚಿತ್ರಕ್ಕೆ ತಕ್ಕ ಸಾಲುಗಳನ್ನು ತುಂಬಾ ಚೆನ್ನ್ನಾಗಿ ಹೆಣೆದಿದ್ದೀರ...ಇಷ್ಟ ಆಯ್ತು...

    ReplyDelete
  4. ಬಣ್ಣ ಬಣ್ನದ ಚಾಕೋಲೇಟ್ ಕವರ್ ನಂತೆ ಬಣ್ಣ ಬಣ್ನದ ರೆಕ್ಕೆ ಧೂಳು ಪಾಲಾಯಿತು

    ReplyDelete
  5. ಬಣ್ಣ ಬಣ್ಣದ ತಳುಕು ಉಪಯೋಗವಿಲ್ಲವೆಂದು ಮತ್ತೊಮ್ಮೆ ಮಾನ್ಯವಾಯಿತು.

    ಚಿತ್ರಗಳು ಅದಕ್ಕೊಪ್ಪುವ ಬರಹ.

    ReplyDelete
    Replies
    1. ಹಾಯ್ ಅನಿತಕ್ಕಾ. ಒಂದೊಳ್ಳೆ ನೀತಿಯನ್ನ, ಅತ್ಯಂತ ಕಡಿಮೆ ಸಾಲುಗಳಲ್ಲಿ ಹೇಳಿದಿರಿ :-)

      ನ್ಯಾನೋ ಕಥೆಯನ್ನ ಓದಿದ ಅನುಭವವಾಯ್ತು :-)

      Delete
  6. ಬದುಕಿಗೂ ಇದು ಅನ್ವಯವಾಗುತ್ತದೆಯೇನೋ... ಎಲ್ಲವೂ ನನ್ನಲ್ಲಿದೆ ಎಂಬ ಅಹಂಗಿಂತ, ಮೌಲ್ಯಯುತವಾದ ಬದುಕು ನಮ್ಮದಾಗಬೇಕಾಗಿದೆ

    ReplyDelete
  7. ಚಿತ್ರಗಳೊಂದಿಗೆ ಬಹಳ ಚಿಕ್ಕದಾಗಿ ಚೊಕ್ಕದಾಗಿ ತತ್ವ ನೀಡಿದ ಪರಿ ಇಷ್ಟವಾಯಿತು. ಬಹಳ ಚೆನ್ನಾಗಿದೆ. ನಮ್ಮ ಸೌಂದರ್ಯದ ಬಗ್ಗೆ ಅಹಂಕಾರ ಬಂದರೆ, ನಮಗೆ ಅಧೋಗತಿ!

    ReplyDelete
  8. ಸೂಪರ್..ನಮ್ಮ ನಾಡಿನಲ್ಲಿ ಕಲ್ಲುಗಳಲ್ಲಿ ಸಂಗೀತ ನುಡಿಸುತ್ತಾರೆ, ಹೂವುಗಳನ್ನು ಅರಳಿಸುತ್ತಾರೆ..ಹೀಗಾಗಿ ಕಲ್ಲುಗಳು ಕಥೆ ಹೇಳುತ್ತವೆ..
    ಇಲ್ಲಿ ನೋಡಿ ಕೆಲ ಸುಂದರ ಚಿತ್ರಗಳು ಕಥೆ ಹೇಳುವುದಷ್ಟೇ ಅಲ್ಲ..ನೀತಿ ಪಾಠವನ್ನು ಮಾಡುತ್ತಿದ್ದೆ..ಸುಂದರ ಅತಿ ಸುಂದರ...

    ReplyDelete
  9. ಕೆಲವೇ ಗೆರೆಗಳಲ್ಲಿ ಒಂದು ಜೀವನ ತತ್ವವನ್ನು ಸಾರುವ ಕಥೆ..ಬಹಳ ಚೆನ್ನಾಗಿದೆ...ನಮ್ಮ ಪುಟ್ಟಿ ಇದೇ ಮೊದಲಲ್ಲ ಈ ತರಹದ ಕಥೆ ಬರೆದದ್ದು..ಮಹತಿಯಲ್ಲಿ ಮೊದಲೊಮ್ಮೆ ಇರುವೆಗಳ ಕಥೆ ಓದಿದ್ದು ನೆನಪಾಯಿತು.

    ReplyDelete
  10. ವಸಂತ್ ಕುಮಾರ್December 20, 2012 at 6:46 PM

    ಪ್ರಕೃತಿ ಹೇಳುವ ಕಥೆಯನ್ನು ಕೇಳುವ ತಾಳ್ಮೆ ಈಗಿನ ಮನುಜರಿಗಿಲ್ಲ...

    ReplyDelete
  11. Arehole Sadashiva RaoDecember 20, 2012 at 9:32 PM

    bahala chennagide.....munduvariyali nimma saahitya yatre...adanoduva bhagya nammadagali

    ReplyDelete