Pages

Total Visitors

Wednesday, January 23, 2013

ತುಂಟ ಅಲೆ ..




ಎಲೆ ಕಡಲೆ ನಿನ್ನ ಅಲೆಗಳಿಗೆ 
ತೀರದೆಡೆಗೆ ತೀರದ ಬಯಕೆ 
ತಾಯಿ ನೀನಹುದು ನಿಜ ಆದರೂ 
ಎಳೆದೊಯ್ದು ಬಾಗಿಲು ಹಾಕುವೆಯೇಕೆ 

ರಚ್ಚೆ ಹಿಡಿದ ತುಂಟ ಮಗುವದು  
ಬೋರ್ಗರೆದು ನಿನ್ನ ತೆಕ್ಕೆ ಸಡಿಲಿಸಿ 
ರಭಸದಿಂದ  ಬರುತ್ತಿವೆ ದಡದೆಡೆಗೆ 
ಕ್ಷಣ ಹೊತ್ತು ಬಿಟ್ಟು ಬಿಡಬಾರದೇ ಕನಿಕರಿಸಿ 

ಪಿಸು ಮಾತು , ತುಸು ಪ್ರೀತಿ 
ಬರಡು ನೆಲಕೆ ಬೇಕಿದೆ ತಂಪು ಆಲಿಂಗನ 
ನಿನ್ನಲೆಯ ಅಲೆಯುವ ಹುಚ್ಚಿಗೆ 
ಅದೇ ಹಾಕುವುದು ಕಡಿವಾಣ 

ಮರುಕಳಿಸುವ ನೆನಪ ಅಲೆಗೆ  
ಮರಳ ತೀರ ನೆನೆ ನೆನೆದು ಒದ್ದೆ.
ಹೊತ್ತ ಪರಿವೆಯಿಲ್ಲದೆ ನಿಂತು ನಾನು 
ಈ ಚಿನ್ನಾಟವ ನೋಡುತ್ತಲೇ ಇದ್ದೆ. 

5 comments:

  1. chennagide kavana, jotege photo kooda

    ReplyDelete
  2. ಕವನ ತು೦ಬಾ ಚೆನ್ನಾಗಿದೆ.. ಮರುಕಳಿಸುವ ನೆನಪ ಅಲೆಗೆ
    ಮರಳ ತೀರ ನೆನೆ ನೆನೆದು ಒದ್ದೆ.
    ಹೊತ್ತ ಪರಿವೆಯಿಲ್ಲದೆ ನಿಂತು ನಾನು
    ಈ ಚಿನ್ನಾಟವ ನೋಡುತ್ತಲೇ ಇದ್ದೆ.. ಈ ಸಾಲುಗಳು ನನಗೆ ತು೦ಬಾ ಹಿಡಿಸಿದವು.

    ReplyDelete
  3. ಕಡಲು ತೀರದಾಟದಲ್ಲಿ ಪ್ರೇಮದ ಪ್ರತಿಮೆ ಸಾಕಾರಗೊಂಡ ಪರಿ ಚೆಂದವೆನಿಸುತ್ತದೆ :) ಚೆಂದದ ಕವಿತೆ ಅಕ್ಕಾ.

    ReplyDelete
  4. ಚಿತ್ರ ಅದಕ್ಕೆ ಪೂರಕವಾದ ಕವನ ಎರಡೂ ಚೆನ್ನಾಗಿದೆ.

    ReplyDelete
  5. ಚೆಂದದ ಕವನ.. ನನ್ನ ಸಾಗರನ ನೆನ್ಪಾಯ್ತು :(

    ReplyDelete