Pages

Total Visitors

Tuesday, October 15, 2013

ಹಸಿವು



ಅದೊಂದು  ದೊಡ್ಡ ಊಟದ ಸರತಿ. ಹಸಿವನ್ನು ಇಂಗಿಸಿಕೊಳ್ಳಲು  ಜನ ಸೇರುತ್ತಲೇ ಇದ್ದರು.
 
 ಸಾಲಿನಲ್ಲಿ ಅವಳು ಸೇರಿಕೊಂಡಳು. ಅವಳ ನಂತರ ಬಂದ ಹಿರಿಯಾಕೆ 'ನನಗೆ ಹೆಚ್ಚು ಹೊತ್ತು  ನಿಲ್ಲಲು ಕಷ್ಟ, ದಯವಿಟ್ಟು ನಿನ್ನ ಮುಂದೆ ನಿಲ್ಲಬಹುದಾ' ಅಂದಳು. ಅವಳು ತಲೆಯಾಡಿಸಿ ಒಪ್ಪಿಗೆ ಸೂಚಿಸಿದಳು, ನಂತರ ಬಂದ ಪುಟ್ಟ ಹುಡುಗ, ಕ್ರಾಪಿನ ಯುವಕ, ಕೋಲೂರಿ ನಡೆಯುತ್ತಿದ್ದ ಮುದುಕ, ಎಲ್ಲರಿಗೂ  ಅವಳಿಂದ ಮುಂದೆ ನಿಲ್ಲಲು ಕಾರಣಗಳಿದ್ದವು.

ಅವಳು ತಲೆಯಾಡಿಸಿ ಒಪ್ಪಿಗೆ ಸೂಚಿಸುತ್ತಲೇ ಇದ್ದಳು..

ಯುವತಿಯೊಬ್ಬಳು ಅವಳನ್ನು ಕಂಡು 'ನೀನು ಹೀಗೆ ಎಲ್ಲರನ್ನೂ ಮುಂದೆ ಹೋಗಲು ಬಿಟ್ಟರೆ ನೀನು ಅಲ್ಲಿಗೆ ತಲುಪುವಾಗ ಬೆಳಗಾಗಬಹುದು' ಎಂದಳು.. 

ಅವಳು ಸುಮ್ಮನೆ ನಕ್ಕು 'ನನಗೆ ಹಸಿವಿಲ್ಲ. ಆದರೆ ಹಸಿವಿನ ಕಣ್ಣುಗಳಿಂದ ತಪ್ಪಿಸಿ ನಿಲ್ಲಲು ಇದಕ್ಕಿಂತ ಸುರಕ್ಷಿತ ಸ್ಥಳವಿಲ್ಲ.  ಬೆಳಗಾಗುವುದನ್ನೇ ಕಾಯುತ್ತಿದ್ದೇನೆ' ಎಂದಳು. 

7 comments:

  1. ಹಸಿದ ಹೊಟ್ಟೆ ಮತ್ತು ಕಣ್ಣು ಎಂತಹ ವೈರುಧ್ಯದ ಸಂಕೇತಗಳು ಅಲ್ಲವೇ? ಮನೋ ಚಿಕಿತ್ಸಕ ಬರಹ.

    ReplyDelete
  2. ಕೊನೆಯ ಸಾಲಿನಲ್ಲಿ ಅನಿರೀಕ್ಷಿತ ತಿರುವು...... no words.....

    ReplyDelete
  3. ವಾವ್
    ಮಾಲಾ

    ReplyDelete
  4. ಮಾರ್ಮಿಕ!!! ಕಹಿ ಸತ್ಯ!!!

    ReplyDelete