Pages

Total Visitors

Saturday, January 18, 2014

ಕೋಪವೇಕೆ..




ನಕ್ಕು ಬಿಡೇ ಗೆಳತಿ 
ಕರಗಿ ಹರಿಯಲಿ ನೋವ ಬಂಡೆಗಳು
ಒಲವೊಸರ ಧಾರೆಯಾಗಿ 
ಅದರ ಹನಿ ಸ್ಪರ್ಶಕ್ಕೆ 
ಕಾದಿಹೆನು ಜನುಮಗಳಿಂದ
ತಣಿಸು ಬಾ ಬೇಗೆ ನೀಗಿ

ಈ ಬಿಂಕ ಬಿಗುಮಾನ
ಆ ಕೊಂಕು ಕುಡಿಹುಬ್ಬು
ಕೆನ್ನೆಯ ಕೆಂಪೆಲ್ಲ ನನ್ನದೇ ನಲ್ಲೆ
ಕೊಡುವೆಯೇನೇ ಎನಗೆ
ಕಿರುನಗುವ ರಸದೂಟ
ನೀನೀಗ ಕಬ್ಬ ಜಲ್ಲೆ

ಸಿಹಿಯ  ಜೊತೆ ಕಹಿ ಬೇಕು
ನೋವಿನಲು ನಲಿವು
ಒಣ ಕೊಂಬೆಯಲ್ಲು ಜೀವ ಸೆಲೆಯು
ಜೊತೆ ನೀನು ಇರುವಾಗ
ಕತ್ತಲೆಯ ಬದುಕಿನಲು 
ಕೋಟಿ  ನಕ್ಷತ್ರದ ಹೊಳೆವ ಪ್ರಭೆಯು

ಆ ಚಿಂತೆ ಈ ಚಿಂತೆ ನೂರಾರು ನೆವಗಳ
ಗುಡಿಸಿ ಸಾರಿಸಿ 
ರಂಗೋಲಿಯಲಿ ಮುಚ್ಚು
ಹೆಣೆದು ಬೆರಳುಗಳ
ಕೂಡಿಸಿ ಕಣ್ಬೆಳಕು
ಬಾ ಇಲ್ಲಿ ಎದೆಯೊಳಗೆ ದೀಪ ಹಚ್ಚು.


12 comments:

  1. ತುಂಬಾ ಚಂದವಿದೆ ಮೇಡಂ

    ReplyDelete
  2. ಚೆನ್ನಾಗಿದೆ :-)

    ReplyDelete
  3. ಅಕ್ಕಾವ್ರೆ....
    ನಿಮಗೆ ಉದ್ದೇಶ ಇಲ್ಲದಿದ್ದರೂ ನಾನು ಇಲ್ಲೇ ಘಾಸಿಗೊಂಡೆ... :(

    ReplyDelete
  4. Nice kavithe Anithakka

    ReplyDelete
  5. 'ಕತ್ತಲೆಯ ಬದುಕಿನಲು'
    exactly...
    'ಬಾ ಇಲ್ಲಿ ಎದೆಯೊಳಗೆ ದೀಪ ಹಚ್ಚು.'
    ಸಲಾಂ ಸಲಾಂ...

    ReplyDelete
  6. ಆ ಚಿಂತೆ ಈ ಚಿಂತೆ ನೂರಾರು ನೆವಗಳ
    ಗುಡಿಸಿ ಸಾರಿಸಿ
    ರಂಗೋಲಿಯಲಿ ಮುಚ್ಚು
    ಹೆಣೆದು ಬೆರಳುಗಳ
    ಕೂಡಿಸಿ ಕಣ್ಬೆಳಕು
    ಬಾ ಇಲ್ಲಿ ಎದೆಯೊಳಗೆ ದೀಪ ಹಚ್ಚು.
    excellent andalso heart touching..

    ReplyDelete
  7. nakku bidu gelthi kari hariyali nov bandegalu ....en kalpane akka

    ReplyDelete
  8. nakku bidu gelthi kari hariyali nov bandegalu ....en kalpane akka

    ReplyDelete
  9. nakku bidu gelthi kari hariyali nov bandegalu ....en kalpane akka

    ReplyDelete