Pages

Total Visitors

Thursday, February 20, 2014

ಒಲವಿನ ಹನಿಗಳು



ದೂರವಿದ್ದಾಗ 
ನೆನಪುಗಳಲಿ ಬಂಧಿ
ಹತ್ತಿರವಿದ್ದಾಗ 
ಕನಸುಗಳಿಗೆ ಸ್ವಾತಂತ್ರ್ಯ
  ***
 ನೆನಪುಗಳೋ
ಕಣ್ಣೆವೆಯೊಳಗಿನ ಕನಸುಗಳಂತೆ
ಬಿಚ್ಚಿದರೆ ಸ್ವಾತಂತ್ರ್ಯ
ಮುಚ್ಚಿದರೆ ಜೀವಂತ
***
ಮತ್ತಷ್ಟು ಬದುಕುವಾಸೆ ನನಗೆ
ಕಣ್ಣ ಕನಸುಗಳಿಗೆ ಬಣ್ಣ ತುಂಬಲಿದೆ
ನಿನ್ನ ನೆನಪ ರಂಗಿಂದ
ಇಂದೇ ಸಾಯುವಾಸೆಯೂ ನನ್ನದೇ
ತುಂಬಿಬಿಡಲಿ ನಿನ್ನ ಕಣ್ಣುಗಳು
ನನ್ನ ನೆನಪಿನಿಂದ ..
***
ಕೆಡಿಸದಿರಿ ನಿದ್ದೆ
ಕನಸುಗಳ ರಂಗು
ಚೌಕಟ್ಟಿನ ಹೊರಗೂ
ಚೆಲ್ಲೀತು..
***
ದಾರಿ ದೂರವಿದೆ
ಚಿಂತೆಯಿಲ್ಲ..
ನಿನ್ನ ನೆನಪ ಬುತ್ತಿಯಿದೆ..
***
ದಾರಿ ಕವಲೊಡೆಯುವುದಾದರೆ
ಹಿಂತಿರುಗೋಣ
ಬಂದ ದಾರಿಯಲ್ಲೇ.
***
ಒದ್ದೆಯಾಗಲಿ ಮನಸು
ನಿನ್ನ ನೆನಪ ಸ್ವಾತಿ ಮಳೆಯಲಿ
ಚಿಪ್ಪಿಗೂ ನಾಚಿಕೆಯಾದೀತು ಬಿಡು
ಮುತ್ತುಗಳಿಗೇಕೆ ಲೆಕ್ಕ..
***
ಬಳಿಯಿರುವಾಗ 
ಕಣ್ಣೆತ್ತಲೂ ನಾಚಿಕೆ
ದೂರವಾದಾಗೇಕೋ
ಬೇಕೆನಿಸುವುದು ಅಪ್ಪುಗೆ
***
ಮನದ ಕಿಟಕಿ ತೆರೆದರೆ
ಒಳ ಬಂದ ಬೆಳಕೆಲ್ಲಾ
ಅವನದೇ ನೆನಪು..
***
ಉಸಿರಿಗೂ ಜೀವಕ್ಕೂ 
ಸಂಬಂಧವೇ ಇಲ್ಲ 
ನಿನ್ನ ನೆನಪುಗಳಿವೆ ಬದುಕಲು..
***
ನೀರಿನೊಳಗಿನ ನೀನು
ಹೊರತೆಗೆದರೆ
ನಿನ್ನ ನೆನಪುಗಳಿಲ್ಲದ ನಾನು..
***
ಮನಸು ಕತ್ತಲ ಗೂಡು
ಒಳ ಬಂದ ಬೆಳಕಿಲ್ಲಿ
ಸ್ವತಂತ್ರ
***
ಖಾಲಿ ಇರಲಿ ಮನಸ ಖೋಲಿ
ತುಂಬಬೇಕಿದೆ ನೆನಪುಗಳ ಪೆಟ್ಟಿಗೆ
ಮುಚ್ಚಳ ಸರಿಸಿದರೆ 
ಕನಸು ಕಾಣುವ ನೀನು..
***

7 comments:

  1. ಒಲವ ಹನಿಗಳ ಸುರಿಮಳೆ....

    ReplyDelete
  2. ಕೆಡಿಸದಿರಿ ನಿದ್ದೆ
    ಕನಸುಗಳ ರಂಗು
    ಚೌಕಟ್ಟಿನ ಹೊರಗೂ
    ಚೆಲ್ಲೀತು..
    ***
    ದಾರಿ ದೂರವಿದೆ
    ಚಿಂತೆಯಿಲ್ಲ..
    ನಿನ್ನ ನೆನಪ ಬುತ್ತಿಯಿದೆ..
    ***
    ದಾರಿ ಕವಲೊಡೆಯುವುದಾದರೆ
    ಹಿಂತಿರುಗೋಣ
    ಬಂದ ದಾರಿಯಲ್ಲೇ. - Tumba ista adavu ivu! Chennagide akka :)

    ReplyDelete
  3. ಚೆನ್ನಾಗಿವೆ ಹನಿಗಳು ..... ತುಂಬಾ ಇಷ್ಟವಾದವು ...

    ReplyDelete
  4. ಒಂದಕ್ಕಿಂತ ಒಂದು ಚೆನ್ನ :)

    ReplyDelete
  5. ಕಡಲ ಗಾತ್ರದ ಹನಿಗಳು!

    ReplyDelete