ಬೀಸುವ ಗಾಳಿಯಲೆಗೆ
ಕರಗುವ ಸುಮ ಸೌರಭದಂತೆ
ಒಂದಾಗು ಬಾ ಎನ್ನಲ್ಲಿ
ಬಾಯಾರಿ ಬಂದಿಹೆಯೇನು
ನೀಗುವೆನು ದಾಹವ
ತುಂಬಿ ಪ್ರೀತಿಯ ಮಾತಿನಲ್ಲಿ
ಜೀವನದ ದಾರಿಯಲಿ
ಕಾಲೆಡವದಂತೆ ಹಿಡಿ ನನ್ನ ಕೈ
ನೋಡೋಣ ಬಾನಿನ
ಮಿನುಗುವ ಚಿಕ್ಕೆಗಳ
ಓಹೋ .. ತಗಲಿತೇನು ಮೈಗೆ ಮೈ
ದುಃಖದಲಿ ಬೆಂದಾಗ
ಹನಿಗಣ್ಣಾಗಿ ದೂರ ನಿಲ್ಲದಿರು
ನಿನ್ನ ಚೆಲು ಮೊಗವ ಹಾಗೆ ಮರೆಸಿ
ತೆರೆದಿಹುದು ಎದೆಯ ಕದ
ತುಂಬು ತೋಳುಗಳ ಚಾಚಿ
ಬರಬಾರದೇ ಬಳಿಗೆ ಕನಿಕರಿಸಿ
ಬದಲಾಯಿಸಲಾರದ ಬದುಕು
ಕೊಟ್ಟಷ್ಟು ಸಾಕು ಬಿಡು
ಸಿಗದ ದ್ರಾಕ್ಷೆಯ ಚಿಂತೆ ನಮಗದೇಕೆ
ಬೆರಳುಗಳ ಹೆಣೆದುಬಿಡು
ಸಾಗುವೆಡೆ ಹೆಜ್ಜೆಯಿಡು
ಮನದ ಮಾತಿಗೆ ಬೇರೆ ಸಾಕ್ಷಿ ಬೇಕೇ
beutiful lines.....
ReplyDeleteಒಂದು ಪ್ರೇಮ ಕಾವ್ಯದ ಶೈಲಿ, ಓಘ ಮತ್ತು ಹೂರಣ ಹೇಗಿರಬೇಕು ಎಂಬುದು ಇಲ್ಲಿ ಪ್ರಮಾಣೀಕರಿಸಿದಂತಿದೆ.
ReplyDeleteತಮ್ಮ ಕಾವ್ಯವನ್ನು ಓದುವ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.
nice
ReplyDelete