ಹೋಯ್ ಇಲ್ಲಿ ಬನ್ನಿ.. ಕೇಳಿತ್ತಾ.. ಎಲ್ಲಿದ್ದೀರಿ ಎಲ್ಲರೂ.. ಮಾವನ ತಾರಕ್ಕೇರಿದ ಸ್ವರ ಕೇಳಿ ಗಾಬರಿಯಿಂದ ಅವರಿದ್ದಲ್ಲಿಗೆ ಹೋದರೆ ಅವರೊಂದು ಕೋಣೆಯ ಕಡೆಗೆ ಕೈ ತೋರಿಸಿ ಅಲ್ಲಿ ಹಕ್ಕಿ ಉಂಟು ಅಂದರು. ಒಂದು ಲೆಕ್ಕದಲ್ಲಿ ಗೋಡೌನ್ ಅನ್ನಬಹುದೇನೋ ಅದನ್ನು. ಹಳೇ ಪೇಪರ್, ಹೊಲಿಗೆ ಮಿಷನ್, ಪೈಪ್ ಫಿಟ್ಟಿಂಗ್ಸ್ ಇಂತದ್ದೆಲ್ಲಾ ಅದರೊಳಗೆ ಇರುತ್ತಿದ್ದುದು. ಮಳೆಗಾಲ ಹೊರಗಿನ ನೀರ ಇರಚಲು ಕೋಣೆಯೊಳಗೆ ಬರುತ್ತದೆ ಎಂದು ಮುಚ್ಚಿಯೇ ಇರುವ ಕಿಟಕಿಗಳ ಕೋಣೆ ಅದು. ಬಾಗಿಲೊಂದು ತೆರೆದಿರುತ್ತದೆ ಅಷ್ಟೇ,, ಆ ಬಾಗಿಲಿನ ಒಳಗೆ ಹಕ್ಕಿ ಬರಬೇಕಾದರೂ ಎರಡು ಕೋಣೆ ದಾಟಿಯೇ ಬರಬೇಕು.. ಎಲಾ ಹಕ್ಕಿಯೇ.. ಎಷ್ಟು ಸರ್ಕಸ್ ಮಾಡಿದೆ ಇದು ಎಂದುಕೊಂಡು ಬಾಗಿಲೊಳಗೆ ಇಣುಕಿದೆ. ಪುಟ್ಟ ನಸು ಹಳದಿ, ಒಂದಿಷ್ಟು ಹಸಿರಿನ ಬಣ್ಣದ ಉದ್ದ ಕೊಕ್ಕಿನ ಸನ್ ಬರ್ಡ್ ಅದು. ಬಲ್ಬಿನ ವಯರಿನಲ್ಲಿ ನೇತಾಡುತ್ತಾ ಕುಳಿತಿತ್ತು. ನನ್ನನ್ನು ಕಂಡದ್ದೇ ಮುಚ್ಚಿದ ಕಿಟಕಿಯ ಸರಳಿನ ಬಳಿ ಹೋಗಿ ಕುಳಿತು ಅಪಾಯಕಾರಿ ಪ್ರಾಣಿಯನ್ನು ನೋಡುವಂತೆ ನನ್ನ ಕಡೆ ನೋಡತೊಡಗಿತು.
ನನಗೋ ಅಷ್ಟು ಹತ್ತಿರದಲ್ಲಿ ಆ ಹಕ್ಕಿಯನ್ನು ನೋಡುವಾಗಿನ ಅಚ್ಚರಿ. ಯಾವಾಗಲೂ ಹೂಗಿಡಗಳ ಮೇಲೆ ಕೂತು ಕತ್ತು ಕೊಂಕಿಸಿ ಕೊಕ್ಕನ್ನು ಹೂವಿನೊಳಗೆ ತೂರಿ ಜೇನು ಹೀರುವ ಈ ಹಕ್ಕಿಯನ್ನು ಕಂಡು ನಾನು ಇಲ್ಲೊಂದು ಚೆಂದದ ಹಕ್ಕಿ ಇದೆ, ಕ್ಯಾಮೆರಾ ತೆಗೊಂಡು ಬನ್ನಿ ಅಂತ ಬೊಬ್ಬೆ ಹೊಡೆದಾಗ ಇವರು ಎದ್ದೆನೋ ಬಿದ್ದೆನೋ ಎಂದು ಕ್ಯಾಮರಾ ಕೊರಳಿಗೇರಿಸಿ ಬಂದು ನೋಡಿದರೆ ಅಲ್ಲಿ ಕಾಣುವುದು ಇನ್ನೂ ಕಂಪಿಸುತ್ತಿರುವ ಹೂ ಮಾತ್ರ. ಅದು ಆಗಲೇ ಇನ್ನೆಷ್ಟೋ ಹೂಗಳ ಮಕರಂಧ ಹೀರಿ ಹಾರಿಯಾಗಿರುತ್ತದೆ. ಅಷ್ಟು ಅವಸರದ ಹಕ್ಕಿ ಅದು. ಈಗ ಕೈಗೆ ಸಿಗುವಷ್ಟು ಹತ್ತಿರದಲ್ಲಿದೆ ಎಂದರೆ ಅಚ್ಚರಿಯಲ್ಲದೆ ಮತ್ತೇನು?
ಆದರೇನು? ನೀಲ ಗಗನದಲ್ಲಿ ಸ್ವಚ್ಛಂದವಾಗಿ ಹಾರಾಡುವ ಬಾನಾಡಿಯನ್ನು ಬಗಲಲ್ಲಿಟ್ಟುಕೊಳ್ಳಲಾಗುವುದೇ? ಅದನ್ನು ಹೊರಗೆ ಕಳಿಸುವುದೀಗ ನಮ್ಮ ಮಿಷನ್ ಆಗಿತ್ತು. ನನ್ನನ್ನು ಕಂಡ ಗಾಭರಿಯಲ್ಲಿ ಮತ್ತೆ ಅತ್ತಿತ್ತ ಹಾರಾಡುವುದು, ಫ್ಯಾನಿನ ರೆಕ್ಕೆಯ ಮೇಲೆ ಕುಳಿತುಕೊಳ್ಳುವುದು ಮಾಡುತ್ತಿತ್ತು. ನಾನು ಅದು ಸ್ವಲ್ಪ ಸುದಾರಿಸಿಕೊಳ್ಳಲಿ ಎನ್ನುವಂತೆ ಸುಮ್ಮನೆ ನಿಂತೇ ಇದ್ದೆ. ಹಕ್ಕಿಗೇನನ್ನಿಸಿತೋ.. ಕೋಣೆಯ ಎಲ್ಲಾ ವಸ್ತುಗಳ ಅವಲೋಕನ ಮಾಡಹೊರಟಿತು.
ಹಳೆಯ ಲಾಂದ್ರದ ಪಕ್ಕ ಇನ್ನಷ್ಟು ಹಳೆಯ ಪ್ಲಾಸ್ಟಿಕ್ ಹೂಗಳ ಫ್ಲವರ್ ವಾಸ್ ಒಂದು ದೂಳು ತಿನ್ನುತ್ತಾ ಕುಳಿತು ಸುಮಾರು ವರ್ಷಗಳೇ ಕಳೆದಿತ್ತೇನೋ.. ಹಕ್ಕಿ ಮೆಲ್ಲನೆ ಹೋಗಿ ಅದರ ಮೇಲೆ ಕುಳಿತಿತು. ಹೂವಿನ ರಚನೆಗಳನ್ನು ಕೊಕ್ಕಿನಿಂದ ಕುಕ್ಕಿ ಅದು ನಿಜವಾದ ಹೂವೇನೋ ಎಂದು ಪರೀಕ್ಷೆ ಮಾಡಿತು. ಅಲ್ಲ ಎಂದು ಗೊತ್ತಾದರೂ ಅದಕ್ಕೆ ಕೋಣೆಯಲ್ಲಿದ್ದ ಉಳಿದ ನಿರ್ಜೀವ ವಸ್ತುಗಳಿಂದ ಆ ಹೂವಿನ ವಾಸಿನ ಮೇಲೆ ಪ್ರೀತಿ ಉಂಟಾಯಿತೇನೋ ಎಂಬಂತೆ ಅದರ ತುದಿಯಲ್ಲೇ ಕುಳಿತುಕೊಂಡಿತು. ಹೂವಿಗೀಗ ಜೀವ ಬಂದಂತಾ ಕಾಂತಿ.
ನಾನು ಕೋಣೆಯ ಒಳಗೆ ಕಾಲಿಟ್ಟರೂ ಹಕ್ಕಿ ಹೂವನ್ನು ಬಿಟ್ಟು ಕದಲಲಿಲ್ಲ. ಇವರ ಕ್ಯಾಮೆರಾದ ಕ್ಲಿಕ್ ಸದ್ದಿಗೂ ಅದು ಜಾಗ ಬಿಟ್ಟು ಏಳಲಿಲ್ಲ. ಸಮಯ ಸಾಧಿಸಿ ನಾನು ಕಿಟಕಿಯ ಬಾಗಿಲನ್ನು ತೆಗೆದಿಟ್ಟೆ. ಹೊರಗಿನ ಬೆಳಕು ಗಾಳಿ ನುಗ್ಗಿದೊಡನೆ ಹಕ್ಕಿ ಪಕ್ಕನೆದ್ದು ಕಿಟಕಿಯಿಂದ ಹೊರ ಹಾರಿತು.
ಹಕ್ಕಿ ಹಾರಿ ಹೋಗಿ ಎಷ್ಟೋ ಹೊತ್ತಿನವರೆಗೂ ಕಂಪಿಸುತ್ತಿದ್ದ ಹೂವುಗಳು ಮತ್ತೆ ನಿರ್ಜೀವವಾದವು. ಅದರ ಮೇಲ್ಭಾಗದಲ್ಲಿ ಉದುರಿದ್ದ ಪುಟ್ಟ ಗರಿಯೊಂದು ಈ ಎಲ್ಲಾ ಘಟನೆಗಳು ನಡೆದಿದೆ ಎನ್ನಲಿಕ್ಕೆ ಏಕ ಮಾತ್ರ ಸಾಕ್ಷಿಯಾಗುಳಿದಿತ್ತು.

Very nice... i appreciate your love for nature.
ReplyDelete