Pages

Total Visitors

Tuesday, September 20, 2011

ಹೂದೋಟ ....



ಬಂಜರಾಗಿದ್ದ ಮನ ,ಅವನ
ಕಂಡೊಡನೆ ಮೆದುವಾಗತೊಡಗಿತ್ತು.

ಕಣ್ಣೋಟ ಬೆರೆತಾಗ
ಹಿಗ್ಗಿನ ವರ್ಷದಾರೆ ಸುರಿದಿತ್ತು .

ನೆನಪುಗಳೆಲ್ಲ  ಬಳಿ ಬಂದು
ಹೊಸ ಕನಸ ಬಿತ್ತಿತ್ತು .

ಕಾಯುವಿಕೆಯಲ್ಲೇ ಕುಡಿಯೊಡೆದು
ಹಸಿರಾಗತೊಡಗಿತ್ತು .

ಬಿಸಿಯುಸಿರಿನ ಸ್ಪರ್ಶಕ್ಕೆ
ಕೆನ್ನೆ ಕೆಂಗುಲಾಬಿ, ಮೊಗ ಕನ್ನೈದಿಲೆಯಾಗಿತ್ತು .

ಮನ ಮಲ್ಲಿಗೆಯಾಗಿ
ತನು ಸುಮ ಪರಿಮಳ ಸೂಸಿತ್ತು .

ಹೊಸ  ಭಾವವೇನೋ  ಮೂಡಿ
ಮೈಯ್ಯೇ  ಹೂದೋಟವಾಗಿತ್ತು ......


3 comments:

  1. ಮಣ್ಣಿನ ಮಗಳು :):) ಪ್ರತಿ ಸಾಲುಗಳೂ ತರ್ಕಬದ್ಧವಾಗಿ ಪ್ರಕೃತಿಯೊಂದಿಗೆ ಹೊಸೆದುಕೊಳ್ಳುತ್ತಿದೆ. ಕವನವು ಅತಿ ಮಧುರ ಭಾವನೆಗಳನ್ನು ಹೊಮ್ಮಿಸುತ್ತಾ ಜೊತೆಯಲ್ಲೇ ಬಿತ್ತನೆಯಿಂದ ಫಸಲಿನವರೆಗಿನ ತೋಟಗಾರಿಕೆಯ ವಿವಿಧ ಹಂತಗಳನ್ನು ಕ್ರಮಬದ್ದವಾಗಿ ತೆರೆದಿಡುತ್ತದೆ! ನೀನೊಬ್ಬ ಉತ್ತಮ ತೋಟಗಾರ್ತಿ ಅಂತ ನನಗೆ ಗೊತ್ತು. ಸತತ ಶ್ರಮದಲ್ಲೂ ನಲಿವು ಕಾಣುವ ನಿನ್ನಂತಹ ರೈತರು, ನಮ್ಮ ದೇಶದ ಅತ್ಯಮೂಲ್ಯ ಸಂಪತ್ತು!

    ReplyDelete
  2. ಪ್ರೀತಿಯ ಉತ್ಕಟತೆ ಮತ್ತು ಅರ್ಪಣಾಭಾವದ ಒಳ್ಳೆಯ ಕವನ. ಒಲವು ಚಿರಾಯುವಾಗಲಿ.
    ನನ್ನ ಬ್ಲಾಗಿಗೂ ಬನ್ನಿರಿ.

    ReplyDelete
  3. kaviteya roopadali hosatondu hoovu aralittu :)kaviteya roopadali hosatondu hoovu aralittu :)

    ReplyDelete