Pages

Total Visitors

Friday, December 30, 2011



ಒಂಟಿ .. 

ನಡೆದಾಡಿದವೆಷ್ಟೋ ಹೆಜ್ಜೆಗಳು 
ಬಿಟ್ಟು ಗುರುತುಗಳ ..
ನಾನಿಲ್ಲಿ ಒಂಟಿ, ನನ್ನವರಿಲ್ಲಿಲ್ಲ .. 

ಕಳೆದ ಕಾಲದ ನೆನಪ 
ಮೈ ತುಂಬಾ ಹೊದ್ದರೂ 
ಬದಲಾಗಿದ್ದು ನಾನೇ... ಕಡಲಲ್ಲ .. 

ನೋಟಕ್ಕೆ ನಿಲುಕುವಷ್ಟೇ 
ಹರಿಯಬಿಡಬಹುದು ಮನ 
ಅದರಾಚೆಗಿನ ನಿಜವು ನನ್ನದಲ್ಲ .. 














8 comments:

  1. ಚಿತ್ರಕ್ಕೆ ಕವನ ಸೊಗಸಾದ ಸಾಲುಗಳ ಸಮ್ಮಿಲನ.. :)

    ReplyDelete
  2. ಸಾಲುಗಳು ಬಲು ಇಷ್ಟವಾಯ್ತು....

    ReplyDelete
  3. ನಿರೀಕ್ಷೆಯಲ್ಲಿ ಒಂಟಿತನ ಮರೆಯಬಹುದು ...ಅಲ್ವಾ ...ತುಂಬಾ ಚೆನ್ನಾಗಿದೆ ,ಅಭಿನಂದನೆಗಳು

    ReplyDelete
  4. ಎಲ್ಲದಕ್ಕಿಂತ ಮನಸಿನ ಒಂಟಿತನ ಕಷ್ಟ ಅಲ್ಲವ ? ಚೆನ್ನಾಗಿ ಬರೆದಿದ್ದೀರಿ

    ReplyDelete
  5. ಒಂದು ಗಟ್ಟಿ ಮತ್ತು ಸಾರಸ್ವತ ಕಾವ್ಯ. ಕೆಲವೇ ಸಾಲುಗಳಲ್ಲಿ ಬದುಕಿನ ಮಹಾನ್ ಮಜಲುಗಳ ಗಮ್ಯ ಅಡಗಿದೆ...
    ನೋಟಕ್ಕೆ ನಿಲುಕುವಷ್ಟೇ
    ಹರಿಯಬಿಡಬಹುದು ಮನ
    ಅದರಾಚೆಗಿನ ನಿಜವು ನನ್ನದಲ್ಲ .. - ಈ ಸಾಲುಗಳಂತು ನನ್ನ ಯೋಚನಾಲಹರಿಯನ್ನು ಒಮ್ಮೆ ಕೆಣಕಿ ಸ್ಪಂದನಾ ಲಹರಿಯನ್ನು ಹೆಚ್ಚಿಸಿಬಿಟ್ಟವು. ವಂದನೆಗಳು ಅಕ್ಕ....

    ReplyDelete
  6. ಬಲು ಗಂಭೀರ ಸಾಲುಗಳು...ಇಷ್ಟವಾಯ್ತು..

    ReplyDelete
  7. ದೃಶ್ಯವೇ ಕರಗಿ ಅಕ್ಷರಗಳಾದ ಅನುಭವ.....

    ಕವನ ಇಷ್ಟ ಆಯಿತು :)

    ReplyDelete
  8. ಅನಿತಕ್ಕ ಸಾಲುಗಳು ಬಹಳ ಇಷ್ಟವಾಯಿತು..... ನಾವು ಯಾವತ್ತೂ ಒ೦ಟಿಯೇ...ಮನಸ್ಸಿನಲ್ಲಿ, ಬದುಕಿನಲ್ಲಿ ಕೆಲವು ಹೆಜ್ಜೆ ಗುರುತುಗಳು ಉಳಿಯುತ್ತದೆಯೇ ಹೊರತು ಕೊನೆಯವರೆಗೂ ನಮ್ಮೊಡನೆ ಹೆಜ್ಜೆ ಹಾಕುವವರು ಯಾರೂ ಇಲ್ಲ....

    ReplyDelete