Pages

Total Visitors

Monday, June 25, 2012

ಕಾಡುವಂತ ಗೆಳೆಯ ಬೇಕು..

ಪ್ರತಿ ಕ್ಷಣವೂ ರಚ್ಚೆ ಹಿಡಿದ ಪುಟ್ಟ ಮಗುವಿನಂತೆ ನನಗೇ ಜೋತು ಬೀಳುವ ಇವನು ಇವತ್ತು ಹೀಗೆ ತಣ್ಣಗೆ ಮಲಗುವುದು ಎಂದರೆ.. 

ಪಾದರಸದಂತೆ ಚುರುಕಾಗಿದ್ದವನು, ಈಗ ಕೆಲವು ದಿನಗಳಿಂದ ಯಾಕೋ ಹೀಗೇ.. ನಾನಾಗಿ ಮಾತನಾಡಿದರೆ ಬೇಕೋ ಬೇಡವೋ ಎಂಬ ಉತ್ತರ.. ಕೆಲವೊಮ್ಮೆ ಇವನೇನು ಹೇಳುತ್ತಿದ್ದಾನೆ ಎಂದು ನನಗರಿವಾಗದಂತೆ ಅಸ್ಪಷ್ಟ.. ಒಮ್ಮೊಮ್ಮೆ ಸುಮ್ಮನೆ ಕುಳಿತನೆಂದರೆ ಎಷ್ಟು ಮಾತನಾಡಿಸಿದರೂ ಮಾತನಾಡಲಾರ..  ತನ್ನಷ್ಟಕ್ಕೆ ತಾನೇ ಸರಿ ಹೋದಾನು ಎಂದು ನನ್ನದೇ ಚಿಂತೆಗಳಲ್ಲಿ ಮುಳುಗಿ ಇವನ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ. 

ಇಂದು ಹತ್ತಿರವಿದ್ದವನನ್ನು ತಟ್ಟಿ ಎಬ್ಬಿಸಹೋದರೆ ಕೊರಡಿನಂತೆ ಸುಮ್ಮನೆ ಬಿದ್ದುಕೊಂಡಿದ್ದ.ನನಗೂ ಇವನ ಸಿಟ್ಟು ಸೆಡವು ನೋಡಿ ಬೇಸರವಾಗಿತ್ತು. ಕೊಂಚ ಜೋರಾಗಿ ಅಲುಗಾಡಿಸಿದೆ.ಉಹೂಂ.. ಯಾವುದೇ ರೀತಿಯ ಸ್ಪಂದನವಿಲ್ಲ.. 

ಕಂಡವರೆಲ್ಲ ಹೇಳುತ್ತಿದ್ದರು.. ಸಾಕೇ..  ಅದೆಷ್ಟು ಅಂತ  ಇಡೀ ದಿನ ಅವನೊಡನೆ ಇರ್ತೀಯ.. ನಿನ್ನ ಕೈ ಕೂಸಿನಂತಾಗಿದ್ದಾನೆ ಅವನು .. ಸತ್ಯ ಎಂದರೆ ನಾನೆ ಇವನ ಕೂಸಾಗಿದ್ದೆ. ನನ್ನ ನೋವು ನಲಿವು ಎಲ್ಲವೂ ಇವನೊಡನೆ ಹಂಚಿಕೊಳ್ಳುತ್ತಿದ್ದೆ.. ನನ್ನೆಲ್ಲ ಮಿಡಿತಗಳನ್ನು ಅರಿತವನಂತೆ ನಾನು ಪಿಸುನುಡಿದರೂ ಕೇಳಿಸಿಕೊಳ್ಳುತ್ತಿದ್ದ.. !!

ಛೇ.. ಏನಾಗಿದೆ ಇವನಿಗೆ.. ??ನನ್ನೆಲ್ಲವೂ ಆಗಿದ್ದವನು ಇಷ್ಟು ಸುಲಭವಾಗಿ ನನ್ನನ್ನಗಲಿ ಹೋಗುವುದೆಂದರೆ..  ನನ್ನ ಒಳಗೇನೋ ಕುಸಿದು ಬಿದ್ದ ಅನುಭವ.. ಮುಂದಕ್ಕೆ ಯೋಚಿಸಲೂ ಸಾಧ್ಯವಾಗದೇ ಬಿಕ್ಕತೊಡಗಿದೆ. 

... ಅಯ್ಯೋ .. ಅದಕ್ಯಾಕಿಷ್ಟು ಅಳು.. ಎಲ್ಲಿ ನಿನ್ನ ಸಿಮ್ ತೆಗೆದು ಈ ಹೊಸ ಮೊಬೈಲಿಗೆ  ಹಾಕು.. ಆ ಓಬಿರಾಯನ ಕಾಲದ ಮೊಬೈಲನ್ನು ಎಲ್ಲಿಯಾದರೂ ಜಾಗ್ರತೆ ತೆಗೆದಿಡು.. ಮ್ಯೂಸಿಯಮ್‌ನವರಿಗೆ ಬೇಕಾದೀತು.. ಎಂದು ನನ್ನ ಕಡೆಗೊಂದು ಚಂದದ ಬಾಕ್ಸ್ ತಳ್ಳಿದರು ಇವರು..!!


31 comments:

 1. ನಿಜವಾಗಲು ನಾನು ಯಾರ ಬಗೆಯೋ, ಏನೋ ವಿಶೇಷತೆಯೋ ಈ ಲೇಖನದಲ್ಲಿದೆಯೋ, ಯಾರ ಬದುಕಿನ ಚಿತ್ರಣವೋ ಎಂದು ಕಾತುರದಿಂದ ಓದುತ್ತಿದ್ದ ನನಗೆ ದಿಗ್ಗನೆ, ಅನಿರೀಕ್ಷಿತ ತಿರುವು...!!!! ನಾನು ಎಂದು ಯೋಚಿಸಲಾಗದ ಮನಸ್ಸಿನ ಭಾವ ಅದು, ನೀವೋ, ನಿಮ್ಮ ಲೇಖನವೋ ಅದ್ಬುತ ಕಣ್ರೀ, ನನ್ನ ಮೊಬೈಲ್ ನಿಮ್ಮಷ್ಟು ಹಳೆಯದಾಗುವತನಕ ಇಟ್ಟುಕೊಳ್ಳುವುದಿಲ್ಲ... 6 ತಿಂಗಳಿಗೆ ನವನವಿನಾ, ಹೊಸ ಹೊಸ ಅಪ್ಲೀಕೇಷನ್ ಗಳ ಹುಡುಕಾಟದಲ್ಲಿರುತ್ತೇನೆ, ಕೆಲವರು ಹಳೆಯ ಮೊಬೈಲಿನ ಜೊತೆಗಿನ ನಟ್ಟು ನೋಡುತ್ತಿದ್ದೇ, ಅದು ಸತ್ತು ಸತ್ತು ಹುಟ್ಟುವ ಪರಿಯನ್ನು, ನಿಮ್ಮ ಲೇಖನದಲ್ಲಿ ಅಚ್ಚುಕಟ್ಟಾಗಿ ನವನವೀನಾವಾಗಿ ವಿವರಿಸಿದ್ದೀರಾ... ಕೊನೆಯ ಒಂದು ಪ್ಯಾರಾ ಅಮೋಘವಾಗಿ ನಿರೀಕ್ಷೆಗೂ ಮೀರಿದ ತಿರುಳು ಅಲ್ಲಿದೆ. ಮುಂದಿನ ಲೇಖನ ಇನ್ನಷ್ಟು, ನವನವಿನಾವಾಗಿ ಹೊರಬರಲಿ... :-)))))) ಸಖತ್ ಲೇಖನ

  ReplyDelete
 2. hmmm Anitha!! i am proud of myself...first line odi ne guess maaDde...LOL
  :-)
  ms

  ReplyDelete
 3. ನನಗೂ ಒಂದು ಸಂಗಾತಿಯಿದೆ. :-) ಲಾಯ್ಕಿದ್ದು :-)

  ReplyDelete
 4. ೫* ಬರಹ

  ಅಂತೂ ಕ್ಲೈಮ್ಯಾಕ್ಸಿನವರೆಗೂ ಘನಸ್ಫೋಟ ಮಾಡದ ಸಿನಿಮಾ ನಿರ್ದೇಶಕಿ ನೀವು. ಹೊಸ ಮೊಬೈಲ್ ಕೊಂಡ ಕೂಡಲೇ ಅದಕ್ಕಾಗಿ ನಮಗೆ ಪುಟ್ಟ ಪಾರ್ಟಿಕೊಡಬೇಕು ನೀವು ಅನಿತಕ್ಕಾ...

  ReplyDelete
 5. ನಿಮ್ಮೆಲ್ಲಾ ಬರಹಗಳಿಗೂ ಒಂದು ಅನಿರೀಕ್ಷಿತ ಅಂತ್ಯ ಇರುತ್ತದೆ ...ಮೊಬೈಲ್ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡಿದಿರಿ ....ಅಭಿನಂದನೆಗಳು .

  ReplyDelete
 6. ಮೊಬೈಲ್ ಎಂದರೆ ಮಡದಿಯಂತೆ...

  ಜೊತೆ ಇದ್ದಾಗ ಸ್ವಲ್ಪ ಕಿರಿಕಿರಿ ಎನಿಸಿದರೂ...
  (ರೂಢಿಯಾದ ಮೇಲೆ) ಬಿಟ್ಟು ಇರುವದು ಕಷ್ಟ....

  ಚಂದದ ಬರಹ...

  ReplyDelete
 7. ತುಂಬಾ ಚೆನ್ನಾಗಿದೆ. ಮೊಬೈಲ್ ಗೆಳೆಯನ ಅಗಲುವಿಕೆ ............

  ReplyDelete
 8. ಅಬ್ಬ ಪೂರ್ಣ ಓದೋದ್ರೊಳಗೆ ಏನೇನೋ ಯೋಚನೆ ಬಂದಿತ್ತು ...ನಿನ್ನ ಕೈ ಕೂಸಿನಂತಾಗಿದ್ದಾನೆ ಅವನು ಅಂದಾಗ ಪುಟ್ಟ ಮಗುವಿರಬಹುದೇ ಎಂದೆಲ್ಲ ಮುಂದಕ್ಕೊಡಿತ್ತು ... ತುಂಬಾ ಚೆನ್ನಾಗಿದೆ ನಿಮ್ಮ ಮೊಬೈಲ್ ಗೆಳೆಯನ ಅಗಲುವಿಕೆ ...ನನ್ನ ಗೆಳತಿ ಸೋನಿ ಯೂ ಕೂಡ ಹಾಗೆ ಕೆಲವೊಮ್ಮೆ ತುಂಬಾ ನಿದಾನ :)

  ReplyDelete
 9. ತಡಕಾಡಿ ಬಿಟ್ಟೆ ಎಲ್ಲ್ ಹೋಯ್ತು ಅಂಥ ನನ್ ಮೂರು ವರ್ಷದ ನೋಕಿಯ ಎಕ್ಸ್-೩.

  ಮಗು ತರ ಓದಿದೆ. ಮನಸು ಹಗುರಾಗಿಸುತ್ತದೆ ಈ ರೀತಿಯ ಲಘು ಬರಹಗಳು.

  ReplyDelete
 10. ಚಿಕ್ಕದಾಗಿರೋ ಕಥೆಯ ಅಂತ್ಯ ಸೊಗಸಾಗಿದೆ.. ಒಂದು ವಿಶೇಷ ಭಾವನೆ ಅನ್ನಿಸುತ್ತದೆ.. :)

  ReplyDelete
 11. ಮೊಬೈಲ್ ಬಗ್ಗೆ ಇಷ್ಟು ಸೊಗಸಾದ ಕತೆ...ತುಂಬಾ ಚೆನ್ನಾಗಿದೆ....ಅಂತ್ಯ ಸೂಪರ್..

  ReplyDelete
 12. ಕೆಲವಕ್ಕೆ ಜೀವ ಇರೋದಿಲ್ಲ..ಆದ್ರೆ ನಮ್ಮನ್ನ ಸದಾ ಕಾಡುತ್ತವೆ..ನಮ್ಮ ಸಂಸಾರದ ಭಾಗ ಎಂಬ ಭಾವ ತರುತ್ತವೆ..ನಿಮ್ಮ ಲೇಖನ ಓದುತ್ತ ಹೋದ ಹಾಗೆ..ನನ್ನ ಮನಸು ಭೂಪಟದಲ್ಲಿ ಹರಿದಾಡುತ್ತಿತ್ತು..ಕಡೆಗೆ ಅಚಾನಕ್ಕಾಗಿ ತಿರುವುಗಳಲ್ಲಿ ಗಾಡಿ ನಿಂತ ಅನುಭವ....ತಿರುಗಿ ನೋಡಿದರೆ...ಕಾಣುವ ಸುಂದರ ಪ್ರಕೃತಿ ಮಾತೆಯಂತೆ...ಸುಂದರ ಲೇಖನ..ನನ್ನದು ಒಂದು ಆ ತರಹ ಲೇಖನ ಕಳೆದ ವರ್ಷ ಗೀಚಿದ್ದು.. http://lakshavarsha.blogspot.in/2011/04/my-sony-ericcson-handset-laid-to-rest.html

  ReplyDelete
 13. ಸಖತ್.... :)

  ReplyDelete
 14. good story. tumbaa ishta aayitu kanri idu very nice

  ReplyDelete
 15. ನಿಮ್ಮ ಮೊಬೈಲಿಗೂ ಬರಹವಾಗೋ ತುಡಿತ ಇತ್ತು ಅನ್ಸುತ್ತೆ..... ಚೆನ್ನಾಗೈತೆ ಅನಿತಕ್ಕಾ.....

  ReplyDelete
 16. ಯಾರ ಬಗ್ಗೆ ಹೇಳ್ತಿದಾರೆ ಅಂದ್ಕೊಳ್ತಾ ಇದ್ದೆ... ನಿಜಕ್ಕೂ ಚೆನ್ನಾಗಿದೆ.. ನಿಮ್ಮ ಲೇಖನ ಓದಿ ನನ್ನ ಮುದ್ದಿನ ಗೆಳೆಯ samsung ಗೆ ಒಂದು ಮುತ್ತು ಕೊಟ್ಟೆ...

  ReplyDelete
 17. ನಿಗೂಢ ವಸ್ತು ವಿಷಯ ಓದುಗನ ಉತ್ಸುಕತೆಯ ಮೇಲೆ ಸವಾರಿ ಮಾಡುತ್ತೆ... ಕೊನೆಯ ಸಾಲಿನ ವರೆಗೂ ಎಳೆದೊಯ್ಯುವ ಎಳೆತ. ನಿರೂಪಣೆ ಮತ್ತೆ ಗೆದ್ದಿತು ಅನಿತಾ ಅವರೆ..ಅಭಿನಂದನೆಗಳು, ಶುಭವಾಗಲಿ...

  ReplyDelete
 18. always ur story takes u turn...superrrrrrrrr like

  ReplyDelete
 19. ಗುಡ್. ವೈರಿನ ಬಗ್ಗೆ ಮತ್ತು ಕಲ್ಲುಬೆಂಚಿನ ಬಗ್ಗೆ ಇಂತಹದೇ ಕಥೆಗಳನ್ನು ನಾನು ಬರೆದಿದ್ದೆ.
  ಮೊಬೈಲ್ ಬಗ್ಗೆ ಒಂದು ಅಣಕವಾಡು. ಮೂಲ - ಜಿಗಿಜಿಗಿಯುತ ನಲಿ ಗಗನದ ಬಯಲಲಿ

  ನುಡಿನುಡಿಯುತ ನಡಿ ಮೊಬೈಲು ಕಿವಿಗೆ ಹಿಡಿ ನಿನ ನುಡಿ ನಿನಗೇ ಮೋಡಿ
  ಮೊಬೈಲ್ ಕಾಟದಿಂದ ಒಂಟಿ ಎಲ್ಲಾ ವಾಕಿಂಗ್ ಹೋಗರು ಜೋಡಿ!!

  ReplyDelete
 20. ಹಹ್ಹಹ್ಹ.ಸೂಪರ್.

  ReplyDelete