Pages

Total Visitors

Thursday, May 9, 2013

ಸಂತೆ


ಕನಸುಗಳಿದೆಯೇ ಇಲ್ಲಿ ಮಾರಲಿಕ್ಕೆ 
ಹುಡುಕಿದರೆ ಹೆಕ್ಕಲಿಕ್ಕೆ.. 
ಯಾರಾದರು ಕಳೆದುಕೊಂಡಿರುವರೆ
ಈ ಸಂತೆಯೊಳಗೆ.. 
ಬದುಕುಗಳ ಮಾಲೆ ಕಟ್ಟಿ 
ಬಣ್ಣ ತುಂಬಿ .. ನೇತು ಹಾಕಿದ್ದಾರಿಲ್ಲಿ
ಕೊಳ್ಳಬಲ್ಲವರಿಗಾಗಿ .ಕಾಯುತಿದೆ.. 
ಹಳೆಯದಕ್ಕೆ ಹೊಸ ಮೆರಗು 
ನೀಡಿ ಕರೆಯುತಿದೆ..
ನುಗ್ಗಿ ಕೊಳ್ಳುವ ಜನ ಇರುವವರೆಗೆ.. 
ಒಂದಿಷ್ಟು ಪರಿಚಿತ ಮುಖಗಳಲ್ಲೂ 
ಅಪರಿಚಿತ ಭಾವ ......
ಗುರುತರಿಯದಿದ್ದರೂ ಕಿರುನಗೆಯ ಧಾರೆ .. 
ಸಣ್ಣ ಹೂವ ಮಾಲೆಯಾದರೂ ಸರಿ.. 
ಕೊಂಡು ಕೊಡುವವರಿದ್ದರೆ.. 
ಮೊಗದಲ್ಲಿ ನಗು ತುಳುಕಿ ಬೆಳಗೀತು... 
ಹೊರಳಿ ಮನೆಗೆ ನಡೆವ ವೇದನೆಯೋ .. 
ಮರಳಿ ಬರುವ ಕಿರು ಆಸೆಯ ತುಡಿತವೋ .. 
ಕಾಡೀತು ಯಾವತ್ತಿಗೂ..
ಸಂತೆಯೊಳಗಿನ ಏಕಾಂತದ 'ಮತ್ತು'... 
ಇನ್ನೊಮ್ಮೆ ಹಂಚಲು ಸಂತಸವ ಹೊತ್ತು...
                              -- ಅನಿತಾ ನರೇಶ್ ಮಂಚಿ 








ಸಂತೆಯ ಸರಕ ನೋಡಿ 
ಬೆರಗಾಗಿ ನಿಂತೆಯಲ್ಲೆ !
ಕೊಂಡದ್ದು ಕಳೆದದ್ದು ಸರಿಹೋಯ್ತು 
ನೋಡಿಲ್ಲಿ!
ಬಗೆ ಬಗೆಯಾ ಓಲೆ ಬಣ್ಣಾದ ಮಾಲೆ
ರಂಗು ಮಾಸೀತು ಜೋಕೆ !
ಅಗ್ಗದ ಅರಿವೇ ಜಗ್ಗಿ ಎಳೆದಾಗ 
ಹರಿದೇ ಹೊಯ್ತಲ್ಲೇ ಚೆಲುವೆ !
ಈ ಚಿಲ್ಲರೆ ಸರಕು ತರವಲ್ಲ ನಿನಗೆ
ತಂದೇನು ರೇಶಿಮೆ ಮಕಮಲ್ಲ ಉಡುಗೆ
ಅಸಲಿ ಬಂಗಾರ ನೀನು 
ನಿನಗೇಕೆ ನಕಲಿ ಗೊಡವೆ !
ಜೋಡಿಸಿ ಇಟ್ಟಿರುವೆ ಸಿಹಿ ಮುತ್ತ ಮಾಲೆ
ತುಂಬಲೇನೇ ನಿನ್ನ ಕೆನ್ನೆ ಗುಳಿ ... !!
                          -- ಅಶೋಕ ಭಾಗಮಂಡಲ 

4 comments:

  1. chitra santhe.... jugalbandhi chennagide :-)

    ReplyDelete
  2. tumba tumba chennagide.kushiyayitu.abhinandanegalu

    ReplyDelete
  3. ಜುಗಲ್ ಬಂಧಿ ಖುಷಿಯಾಯಿತು.

    ಮಂಚಿಯವರ:
    "ಸಂತೆಯೊಳಗಿನ ಏಕಾಂತದ 'ಮತ್ತು'...
    ಇನ್ನೊಮ್ಮೆ ಹಂಚಲು ಸಂತಸವ ಹೊತ್ತು..."

    ಮಾತಿಗೆ ಅಶೋಕ ಭಾಗಮಂಡಲ ಅವರ ಪದಲಾಸ್ಯ:
    "ಜೋಡಿಸಿ ಇಟ್ಟಿರುವೆ ಸಿಹಿ ಮುತ್ತ ಮಾಲೆ
    ತುಂಬಲೇನೇ ನಿನ್ನ ಕೆನ್ನೆ ಗುಳಿ ... !!"

    ಜೋಡಿ ಸಲಾಂ ಇಬ್ಬರಿಗೂ....

    ReplyDelete