Pages

Total Visitors

Tuesday, December 17, 2013

ವೃತ್ತಿಧರ್ಮ



ದೂರದಲ್ಲಿದ್ದ  ಗೆಳೆಯರನ್ನು ಕಂಡು ಓಡುತ್ತಾ  ಅವರನ್ನು ಸಮೀಪಿಸಿದ . ಏದುಸಿರು ಬಿಡುತ್ತಾ ಹತ್ತಿರ ಬಂದವನನ್ನು ಕಂಡು ಅವರು ಬೆಚ್ಚಿದರು. 

 ' ಈ ಅವತಾರದಲ್ಲಿ ನಮ್ಮ ಜೊತೆ ಬಂದು ನಮ್ಮ ಮರ್ಯಾದೆ  ಕಳೀತೀಯಾ .. ಹೋಗು ಮೊದಲು  ಈ ಧರಿದ್ರ  ಅಂಗಿ ಚಡ್ಡಿ ಬದಲಾಯಿಸಿ ಬಾ. ನೀನು  ಬರೋವರೆಗೂ ಇಲ್ಲಿಯೇ ನಿಂತಿರ್ತೀವಿ ಬೇಗ ಹೋಗು " ಎಂದು ಅವನನ್ನು ದೂಡಿ ಹಿಂದಕ್ಕೆ ಕಳುಹಿಸಿದರವರು. 

ತಲೆ ತಗ್ಗಿಸಿ ಮರಳಿ ಬಂದ  ಅವನು, ತಾನು ಹಾಕಿದ ಹೊಸತರಂತೆ ತೋರುವ ಅಂಗಿ ಚಡ್ಡಿಗಳನ್ನು ಕಳಚಿ  ಕೊಳೆಯಾದ , ಅಲ್ಲಲ್ಲಿ ಹರಿದು ತೇಪೆ ಹಾಕಿದ ಅಂಗಿ ಚಡ್ಡಿಗಳನ್ನು ಸಿಕ್ಕಿಸಿಕೊಂಡು  ಭಿಕ್ಷೆ  ಬೇಡಲು ಹೊರಟಿದ್ದ  ಗೆಳೆಯರ ಗುಂಪು ಸೇರಿಕೊಳ್ಳಲು ಹೊರಟ .

15 comments:

  1. ವೃತ್ತಿಧರ್ಮವನ್ನು ಹೀಗೂ ನೋಡಬಹುದು ಅಲ್ವಾ? ಚೆನ್ನಾಗಿದೆ

    ReplyDelete
  2. Unbeatablraa.. you are a wonderful story teller...

    Ashoka A.S.

    ReplyDelete
  3. Short & Sensible..... V.Effective!!!

    ReplyDelete
  4. ಪದಗಳನ್ನು ಪಾದಗಳ ಸಹಾಯವಿಲ್ಲದೆ ನಡೆಸಲು ಸಾಧ್ಯವಾಗುವಂತೆ ಬಳಸಿದ ಸುಂದರ ಕಥೆ. ಸೂಪರ್

    ReplyDelete
  5. ಒಂದು ಕನ್ನಡಿ - ಇನ್ನೊಂದು ಬಾರಿಯ ಗಾಜು.
    ಮೊದಲು ಗಾಜಿನ ಮೂಲಾಕ ಜಗದ ದರ್ಶನ ಮಾಡಿಸಿ, ಕಡೆಯಲ್ಲಿ ಯಥಾ ಪ್ರಕಾರ ಕನ್ನಡಿಯಲ್ಲಿ ನಿಜಾವರ್ಣ ತೋರಿಬಿಟ್ಟಿರಿ.

    ReplyDelete
  6. ದೊಡ್ಡ ಕಥೆ ಅಂತ ಅಂದ್ರಿ.. ಕುತೂಹಲ ಇಟ್ಕೊಂಡು ಬಂದ್ರೆ ಸರಿಯಾದ ದೊಡ್ಡ ಕಥೆಯನ್ನೇ ಹೆಣೆದಿದ್ದೀರ.. :D :D

    ಇಷ್ಟ ಆಯ್ತು. ವೃತ್ತಿ ಧರ್ಮವನ್ನ ಬಟ್ಟೆಗಳೂ ಬಣ್ಣಿಸಬಲ್ಲವು.

    ReplyDelete
  7. ಚಿಕ್ಕ, ಚೊಕ್ಕ ಕಥೆ . ಇಷ್ಟವಾಯ್ತು .

    ReplyDelete
  8. Wow short and sweet !! Definitely you are a good story teller !!Like it very much :-) :-)

    ReplyDelete
  9. ಏನಿರಬಹುದು ಅಂತ ಓದಿದೆ , ಎಂಟು ವಾಕ್ಯಗಳಲ್ಲಿ ಏನೇನೋ ಇತ್ತು

    ReplyDelete
  10. ಆಯಾಯ 'ಧರ್ಮಕ್ಕೆ' ಅದರದ್ದೇ ಆದ ಪದ್ಧತಿ, ಎಲ್ಲೂ 'ಎಲ್ಲೆ' ಮೀರುವಂತಿಲ್ಲ!
    ಕಿರುಗಥೆ ಮಾರ್ಮಿಕ!

    ReplyDelete
  11. ಅಬ್ಬಾ.. ಎಂತಹ ಕೊನೆ ಈ ಕಥೆಯದ್ದು.. ಓದುಗ ಯೋಚಿಸುವ ಬಗೆಯೇ ಒಂದಾದರೆ ನೀವು ನೀಡಿರುವ ತಿರುವೇ ಬೇರೆ .. ನಿಜಕ್ಕು ಅದ್ಭುತ
    ವೈ. ಎನ್. ಸರಳಾಯ

    ReplyDelete
  12. ಅಕ್ಕಾ ನಿಂಗಳ ಈ ಶೈಲಿಯ ಬರಹ ತುಂಬಾ ಇಷ್ಟ

    ReplyDelete
  13. post card kathe....maarmikavagi kuthoohala ulisikolluttade...congrats..

    ReplyDelete