ದೂರದಲ್ಲಿದ್ದ ಗೆಳೆಯರನ್ನು ಕಂಡು ಓಡುತ್ತಾ ಅವರನ್ನು ಸಮೀಪಿಸಿದ . ಏದುಸಿರು ಬಿಡುತ್ತಾ ಹತ್ತಿರ ಬಂದವನನ್ನು ಕಂಡು ಅವರು ಬೆಚ್ಚಿದರು.
' ಈ ಅವತಾರದಲ್ಲಿ ನಮ್ಮ ಜೊತೆ ಬಂದು ನಮ್ಮ ಮರ್ಯಾದೆ ಕಳೀತೀಯಾ .. ಹೋಗು ಮೊದಲು ಈ ಧರಿದ್ರ ಅಂಗಿ ಚಡ್ಡಿ ಬದಲಾಯಿಸಿ ಬಾ. ನೀನು ಬರೋವರೆಗೂ ಇಲ್ಲಿಯೇ ನಿಂತಿರ್ತೀವಿ ಬೇಗ ಹೋಗು " ಎಂದು ಅವನನ್ನು ದೂಡಿ ಹಿಂದಕ್ಕೆ ಕಳುಹಿಸಿದರವರು.
ತಲೆ ತಗ್ಗಿಸಿ ಮರಳಿ ಬಂದ ಅವನು, ತಾನು ಹಾಕಿದ ಹೊಸತರಂತೆ ತೋರುವ ಅಂಗಿ ಚಡ್ಡಿಗಳನ್ನು ಕಳಚಿ ಕೊಳೆಯಾದ , ಅಲ್ಲಲ್ಲಿ ಹರಿದು ತೇಪೆ ಹಾಕಿದ ಅಂಗಿ ಚಡ್ಡಿಗಳನ್ನು ಸಿಕ್ಕಿಸಿಕೊಂಡು ಭಿಕ್ಷೆ ಬೇಡಲು ಹೊರಟಿದ್ದ ಗೆಳೆಯರ ಗುಂಪು ಸೇರಿಕೊಳ್ಳಲು ಹೊರಟ .
ವೃತ್ತಿಧರ್ಮವನ್ನು ಹೀಗೂ ನೋಡಬಹುದು ಅಲ್ವಾ? ಚೆನ್ನಾಗಿದೆ
ReplyDeleteUnbeatablraa.. you are a wonderful story teller...
ReplyDeleteAshoka A.S.
Short & Sensible..... V.Effective!!!
ReplyDeleteSuper :)
ReplyDeleteಪದಗಳನ್ನು ಪಾದಗಳ ಸಹಾಯವಿಲ್ಲದೆ ನಡೆಸಲು ಸಾಧ್ಯವಾಗುವಂತೆ ಬಳಸಿದ ಸುಂದರ ಕಥೆ. ಸೂಪರ್
ReplyDeleteಒಂದು ಕನ್ನಡಿ - ಇನ್ನೊಂದು ಬಾರಿಯ ಗಾಜು.
ReplyDeleteಮೊದಲು ಗಾಜಿನ ಮೂಲಾಕ ಜಗದ ದರ್ಶನ ಮಾಡಿಸಿ, ಕಡೆಯಲ್ಲಿ ಯಥಾ ಪ್ರಕಾರ ಕನ್ನಡಿಯಲ್ಲಿ ನಿಜಾವರ್ಣ ತೋರಿಬಿಟ್ಟಿರಿ.
ದೊಡ್ಡ ಕಥೆ ಅಂತ ಅಂದ್ರಿ.. ಕುತೂಹಲ ಇಟ್ಕೊಂಡು ಬಂದ್ರೆ ಸರಿಯಾದ ದೊಡ್ಡ ಕಥೆಯನ್ನೇ ಹೆಣೆದಿದ್ದೀರ.. :D :D
ReplyDeleteಇಷ್ಟ ಆಯ್ತು. ವೃತ್ತಿ ಧರ್ಮವನ್ನ ಬಟ್ಟೆಗಳೂ ಬಣ್ಣಿಸಬಲ್ಲವು.
YA OK AGAIN
ReplyDeleteಚಿಕ್ಕ, ಚೊಕ್ಕ ಕಥೆ . ಇಷ್ಟವಾಯ್ತು .
ReplyDeleteWow short and sweet !! Definitely you are a good story teller !!Like it very much :-) :-)
ReplyDeleteಏನಿರಬಹುದು ಅಂತ ಓದಿದೆ , ಎಂಟು ವಾಕ್ಯಗಳಲ್ಲಿ ಏನೇನೋ ಇತ್ತು
ReplyDeleteಆಯಾಯ 'ಧರ್ಮಕ್ಕೆ' ಅದರದ್ದೇ ಆದ ಪದ್ಧತಿ, ಎಲ್ಲೂ 'ಎಲ್ಲೆ' ಮೀರುವಂತಿಲ್ಲ!
ReplyDeleteಕಿರುಗಥೆ ಮಾರ್ಮಿಕ!
ಅಬ್ಬಾ.. ಎಂತಹ ಕೊನೆ ಈ ಕಥೆಯದ್ದು.. ಓದುಗ ಯೋಚಿಸುವ ಬಗೆಯೇ ಒಂದಾದರೆ ನೀವು ನೀಡಿರುವ ತಿರುವೇ ಬೇರೆ .. ನಿಜಕ್ಕು ಅದ್ಭುತ
ReplyDeleteವೈ. ಎನ್. ಸರಳಾಯ
ಅಕ್ಕಾ ನಿಂಗಳ ಈ ಶೈಲಿಯ ಬರಹ ತುಂಬಾ ಇಷ್ಟ
ReplyDeletepost card kathe....maarmikavagi kuthoohala ulisikolluttade...congrats..
ReplyDelete