Pages

Total Visitors

Friday, March 21, 2014

ಹಸಿವು


ಅಧಿಕಾರದ ಹಸಿವು ಹೊತ್ತವರು
ಬಿದ್ದವರ ಬೆನ್ನ ಮೇಲೆ
ಅಂಬಾರಿ ಏರಿಸಿ ಕುಳಿತರು
ನೋಡಿದವರು ಜಯವೆಂದರು

ಕಾಮದ ಹಸಿವು ಹೊತ್ತವರು 
ಕಕ್ಕುಲಾತಿಯ ಮರೆತು 
ಮಗಳು ಬಿಕ್ಕಿದರೂ ಬಿಡಲಿಲ್ಲ
ಬೆತ್ತಲಾಗಿದ್ದವಳ ತಪ್ಪೆಂದರು 

ಹೊಟ್ಟೆಯ ಹಸಿವು ಹೊತ್ತವರು 
ಕಣ್ಣಲ್ಲೇ ರಕ್ತ ಹರಿಸಿದರೂ
ಎಂದೂ ಮುಗಿಯದ ಹಾಡಿದೆಂದು 
ಜನ ಕಿವಿಗಳನು ಮುಚ್ಚಿದರು 

10 comments:

  1. viparyaasavidu, yaarado tappige, mattyaarigo sikshe.......

    ReplyDelete
  2. ನಿಶಿದ್ಧ ಹಸಿವುಗಳ ಆಟಾಟೋಪ ವ್ಯಥೆಪೂರಿತವಾಗಿ ಚಿತ್ರಿತವಾಗಿದೆ.

    ReplyDelete
  3. ಸಮಸ್ಯೆಗಳಿಗೆ.. ಉತ್ತರಗಳಿಗೆ ಅನುಬಂಧವಿರದು... ಅಗತ್ಯಕ್ಕೆ ಮಾತ್ರ.. ಸುಂದರ ಯೋಚನಾಲಹರಿ.. ಓದುತ್ತಾ ವ್ಯಥೆಯಾಯಿತು.. ಕೆಲವೇ ಸಾಲುಗಳಲ್ಲಿ ಪರಿಣಾಮಕಾರಿಯಾಗಿ ಹೇಳಿದ್ದೀರ ಮೇಡಂ

    ReplyDelete
  4. ಎಷ್ಟೊಂದು ಬಗೆಯ ಹಸಿವುಗಳು...

    -ಮಯ್ಯ

    ReplyDelete