ಮೊಣಕೈಯಲ್ಲಿಳಿಯುವ ಬಣ್ಣದ
ನೀರನ್ನು ನೆಕ್ಕುತ್ತಾ
ಹಿಡಿದ ಕ್ಯಾಂಡಿಯ ಕರಗಿಸುವ ಪೋರ
ಸರಬರ ನೆರಿಗೆ ಸದ್ದಿನೊಂದಿಗೆ
ಬಿಸಿಲ ಕೋಲಿಗೆ
ಕೈ ಅಡ್ಡ ಹಿಡಿದೋಡುವ ಯುವತಿ
ಸಿಕ್ಕ ಸಿಕ್ಕಲ್ಲೆಲ್ಲಾ ಮೂಸುತ್ತಾ
ತನ್ನ ಗಡಿ ಅಳೆಯುವ ನಾಯಿ
ಅಂಗಡಿಯ ಅಗ್ಗದ ಸರ
ಕೊಳ್ಳಲಾಗದ ಅಸಹಾಯಕತೆಗೆ
ರಚ್ಚೆ ಹಿಡಿದ ಮಗಳ
ಬೆನ್ನಿಗೆ ಬಡಿಯುವ ತಾಯಿ
ನಾವು ಜಗತ್ತನ್ನು ಹತ್ತಿರವಾಗಿಸುತ್ತಿದ್ದೇವೆ
ಎಂಬ ಘೋಷ ವಾಕ್ಯದ ಫಲಕ
ಕೈ ಕೈ ಹಿಡಿದು
ನಡೆವ ಜೋಡಿಯ ಕನಸು
ಉಡುಪಿನ ಕನ್ನಡಿಯಲ್ಲಿ ಮೂಡಿದ
ನರೆ ಬಿಂಬವ ಕಂಡ ಮುದುಕ
ಉದುರಿಸುವ ಎಲೆ ಹೊತ್ತ
ಮರದ ಹಕ್ಕಿಯ ಕಂಬನಿ
ಎಲ್ಲವೂ ದಾಖಲಾಗುತ್ತಿತ್ತು
ಮುಚ್ಚಿದ್ದ ಕನ್ನಡಿಯ ಕಾರೊಂದು
ಅರೆಕ್ಷಣ ನಿಂತಿದ್ದಾಗ
ಅವಳು ಕಣ್ತೆರೆದಿದ್ದರೆ ...
--
chennagide.....madam...
ReplyDeleteವಾವ್ ಬೀದಿಯ ಅನುಕ್ಷಣದ ಅಮೂರ್ತ ಚಿತ್ರಗಳನ್ನು ಸಾದೃಶವಾಗಿ ಕಟ್ಟಿಕೊಟ್ಟಿದ್ದೀರ.
ReplyDeleteಸ್ಥರಾಸ್ತಿಗಳ ಮುಂದೆ ಸದಾ ಪ್ರವಾಹದೋಪಾದಿಯಾಗಿ ಸಾಗುತ್ತಲೇ ಇರುವ ಚರಾಸ್ತಿಗಳ ಚಿತ್ರಣ.
Madam ,tumbaa chennaagiye baradiddeeri tumbaa santoshavaaytu !
ReplyDeleteನಿಮ್ಮ ಲೇಖನಗಳು ಉತ್ತಮವಾಗಿದೆ,
ReplyDeleteನೀವು ನನ್ನ ಜಾಲತಾಣಕ್ಕೆ ಬೇಟಿ ನೀಡಿ,
****
ವೈಶಿಷ್ಟ್ಯಗಳು
***
ಲೈವ್ ಕ್ರಿಕೇಟ್, ಕನ್ನಡದ ಪತ್ರಿಕೆ (ದಿನ, ವಾರ, ಮಾಸ)ಗಳು,
ಎಲ್ಲ ದೇಶಗಳ ಸಮಯ, 1 ಜಾನಪದ ವಿಡಿಯೋ, ಪ್ರಮುಖ U-Tube ವಿಡಿಯೋಗಳು,
ಇರುವೆಗಳ ಜಗತ್ತು, ನಿಮ್ಮ ಮಾತು ಕೇಳುವ ಮೀನು,
ನೀವು ಹುಟ್ಟಿದ ವಾರ ತಿಳಿಯಿರಿ ಮತ್ತು ಹಲವಾರು ಮಾಹಿತಿಗಳು ಒಂದೇ ಜಾಲತಾಣದಲ್ಲಿ ಲಬ್ಯವಿದೆ.
**
ನೀವೂ ನೋಡಿ ಇತರರಿಗೂ ತಿಳಿಸಿರಿ.
**
www.spn3187.blogspot.in
are kshana kanterediddare....super lines :)
ReplyDelete