ತುಂಬಾ ಹೊತ್ತಿನಿಂದ ಅವರ ಜಗಳ ಮುಂದುವರಿದಿತ್ತು
ನಿಮಗೆ ನನ್ನ ಮೇಲೆ ಪ್ರೀತಿಯೇ ಇಲ್ಲ ಐ ಲವ್ ಯೂ ಅಂತ ಹೇಳೋದೇ ಇಲ್ಲ ನೀನು ಎಂದು ಅವಳ ಕೋಪ
ಹಾಗೆ ಹೇಳಿದರೆ ಮಾತ್ರ ಪ್ರೀತಿ ಇರೋದು ಇಲ್ಲದಿದ್ರೆ ಪ್ರೀತಿ ಇಲ್ಲ ಅಂತ ನಿನಗ್ಯಾರು ಹೇಳಿದರು ಅನ್ನೋದು ಅವನ ವಾದ
ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಗಡಿಯಾರದ ಮುಳ್ಳುಗಳು ಚಲಿಸುತ್ತಿದ್ದವು.
'ಒಹ್ ಮೊನ್ನೆ ಹೋಟೆಲ್ಲಲ್ಲಿ ತಿಂದಿದ್ದೆವಲ್ಲಾ ಜೀರಾ ಪೂರಿ ಮತ್ತು ಆಲೂ ಟೊಮ್ಯಾಟೋ ಮಸಾಲಾ ಅದನ್ನು ಮಾಡುವ ಅಂತಾ ಇದ್ದೆ.' ಅಂದಳು ಮುಖ ದುಮ್ಮಿಸಿಕೊಂಡೇ
'ಓಹ್.. ಹೌದಾ ...?? ಇವತ್ತಾ.. ?? ಐ ಲವ್ ಯೂ ಸೋ ಮಚ್ ಡಿಯರ್' ಎಂದವಳ ದುಂಡು ಕೆನ್ನೆ ತಟ್ಟಿದ.
ಗಂಡಸಿನ ಹೃದಯದ ದಾರಿ ಹೊಟ್ಟೆಯ ಮೂಲಕವೇ ಅಂತ ಅವಳಜ್ಜಿ ಹೇಳಿದ್ದು ನೆನಪಾಗಿ ನಕ್ಕಳು.
No comments:
Post a Comment