Pages

Total Visitors

Monday, September 12, 2011

ಇಂದು ಇಂದಿಗೆ..




ತನ್ನದೇ ಎಲೆಯ ಅಚ್ಚು
ಪ್ರತಿಚಿಗುರ ಮೇಲೆ 
ಬರೆದ ಅಕ್ಷರಗಳು ಬೇರೆ ಬೇರೆ 
ತಿರುಗಿಸಿದರೆ ಪುಸ್ತಕದ ಹಾಳೆ 
 ಸುಲಭದಲಿ  ಮರೆತು ಬಿಡುತ್ತೇವೆ 
 ನಿನ್ನೆ ಇದ್ದಂತಿರದು ನಮ್ಮ ನಾಳೆ 

ನಡೆವ ಹೆಜ್ಜೆಗಳಿಗೆ ಕಡಿವಾಣ 
ನೋಡುವ ನೋಟದ ಕಟ್ಟು
ಇರಬೇಕಾದ ರೀತಿ ಇದು ಹೀಗೆಯೇ 
 ನೀತಿಪಾಠದ ಜೊತೆಗೆ ಹಾಕಿ ಚೌಕಟ್ಟು 
ಹಾರಬಯಸುವ ರೆಕ್ಕೆ ಗೋಡೆಯ ಮೇಲೇರಿದೆ 
ಬಲವಾದ ಮೊಳೆಯ ನಡುವಲ್ಲಿ ನೆಟ್ಟು 

 ತುಳಿದ ಹಾದಿಬದಿ  ತಂಪು ಇರಲಿ ಎಂಬಾಸೆಗೆ 
  ಹಸಿರ ಕೊಂಬೆಗಳ ಊರಿ 
ನಡೆದು ಬಿಡು ನನ್ನೊಡನೆ 
ಸುಲಭವಾಗಬಹುದು  ನಡೆವ ದಾರಿ 
ಸುಳ್ಳು ಸೋಗುಗಳ ನಿತ್ಯ ನಾಟಕದಲಿ 
ಸೋಲುತಿದೆ ಒಳ ಮನಸು ಬಾರಿ ಬಾರಿ

5 comments:

  1. ನಿಮ್ಮದೇ ಚೌಕಟ್ಟಿನ ಕವಿತೆ ನಮ್ಮ ಮನದ ಚೌಕಟ್ಟಿಗೆ ಬಂದಿದೆ.ಒಂದು ಒಳನೋಟ , ಅದರ ವಸ್ತುವಿನ ಮಾಟ, ಅದರ ಪರೋಧಿಯೊಳಗೆ ಪದಗಳ ಕಿತ್ತಾಟ ತುಂಬಾ ಚೆಂದ ಬಂದಿದೆ ಗೌರವಾನ್ವಿತರೆ.ಪದಗಳು ಹಾಗೆಯೇ ಗಟ್ಟಿಯಾಗಲಿ, ಮನಸ್ಸಿನೊಳಗೆ ಕಲ್ಲು ಬಂಡೆಯನ್ನು ಮೆದುವಾಗಿಸಲಿ.

    ReplyDelete
  2. ಕವನ ಚೆನ್ನಾಗಿದೆ ಅನಿತಕ್ಕ .

    ReplyDelete
  3. ಎಲೆಗಳ ಅಂತರ್ಗತ ಬದುಕ ಗೀತೆಗಳು.
    ಒಳ್ಳೆ ಅಭಿರುಚಿಯ ಕವಿಯತ್ರಿ ನೀವು.

    ReplyDelete
  4. anitha thumba chennagide kane ...

    ReplyDelete