Pages

Total Visitors

Tuesday, September 27, 2011

ಕಲ್ಲರಳುವ ಕಾಲ




ಕಡಲಲೆಯು ಮತ್ತೆ ಮತ್ತೆ

ಸೋಕಿ ಪುಳಕಿತಗೊಂಡು  ಪಿಸುಗುಟ್ಟಿದರೂ
ಮಾರ್ನುಡಿಯದ ಒರಟ....

ಹುಚ್ಚೆದ್ದ ಶರಧಿ 

ತನ್ನ ತೋಳೊಳಗೆ  ಬಂಧಿಸಿ ಆವರಿಸಿದರೂ  

ಜಾರಿಸಿ  ಸರಿಸಿ ಬೀರುವ ಒಣ ನೋಟ ....

ಅಲೆ ಒಂದಿಷ್ಟು ದೂರ ಸರಿದರೆ  ಸಾಕು

ಕಾವೇರಿದ ಬೆಳಕಿಗೆ ಮೈಯೊಡ್ಡಿ 

ಹಗುರಾಗುವ ನಿರ್ಧಯ ....

ಎಂದೆಲ್ಲ ಜರಿದರೂ 

ಕಲ್ಲು ಹೃದಯ 

ಕಾಯುತ್ತಲೇ ಇರುತ್ತದೆ.....

ಹನಿ ಹನಿ ಪ್ರೀತಿಯ ಸಿಂಚನಕ್ಕೆ ಒದ್ದೆಯಾಗಲು 

ಕನಸಲ್ಲೂ ಕನವರಿಸಿ 

ಮನದಲ್ಲೇ  ನುಡಿಯುತ್ತದೆ ಕಡಲಲೆಗೆ 

ಬಂದು ಬಿಡು ನನ್ನೊಡನೆ ಎಂದೂ ಮರಳದಂತೆ....





4 comments:

  1. ಕಡಲಲೆಯು ಮತ್ತೆ ಮತ್ತೆ
    ಸೋಕಿ ಪುಳಕಿತಗೊಂಡು ಪಿಸುಗುಟ್ಟಿದರೂ
    ಮಾರ್ನುಡಿಯದ ಒರಟ....
    ಹುಚ್ಚೆದ್ದ ಶರಧಿ
    ತನ್ನ ತೋಳೊಳಗೆ ಬಂಧಿಸಿ ಆವರಿಸಿದರೂ
    ಜಾರಿಸಿ ಸರಿಸಿ ಬೀರುವ ಒಣ ನೋಟ ....!
    : ಎಷ್ಟು ಚೆನ್ನಾಗಿದೆ ಅಲ್ವೇ ಈ ಸಾಲುಗಳು. ಅನಿತಕ್ಕ ಒಂದು ಕವಿತೆಯ ಹಾಡು... ನಮ್ಮೆಲ್ಲರ ಎದೆಯ ಗೂಡು

    ReplyDelete
  2. ನದಿ ಮೃದುಗಾಮಿನಿ. ಕಡಲು ಭೋರ್ಗೆರೆವ ಅಖಂದ ಶಕ್ತಿ ಕೇಂದ್ರ. ಒರಟುತನ ಅದರ ಅಭಿವ್ಯಕ್ತಿ.

    ಕವನದಲ್ಲಿ ಕಡಲ ಒರಟುತನವನ್ನೂ ಒಪ್ಪಿಕೊಂಡು ಅದನ್ನು ಪ್ರೀತಿಸುವ ತಾಳ್ಮೆ ಕಾಣುತ್ತದೆ.

    ಒಳ್ಳೆಯ ಕವಿಯರ್ತಿ ನೀವು.

    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    Face book Profile : Badarinath Palavalli

    ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

    ReplyDelete
  3. ಭೊರ್ಗರೆಯುವ ಸಮುದ್ರ, ಕಲ್ಲು ಬಂಡೆ ಇವುಗಳೆಲ್ಲ ಜೀವ ತಳೆದು ಧನ್ಯವಾಗುತ್ತಿವೆ ನಿನ್ನ ಕವನದಲ್ಲಿ! ಕಲ್ಲು ಕಥೆ ಹೇಳುವುದೆಂದರೆ ಇದೇ ಏನು ಅನಿತಾ? ಮಹತಿ ಸುಂದರವಾಗಿ ಮೂಡಿ ಬರುತ್ತಿದೆ. ಧನ್ಯವಾದಗಳು.

    ReplyDelete