Pages

Total Visitors

Friday, May 11, 2012

ಗಾಳ..

ಎಫ್ ಬಿ ತೆರೆಯುತ್ತಿದ್ದಂತೆ ಬದಿಯಲಿ ಬಂದ ಫ್ರೆಂಡ್  ರಿಕ್ವೆಷ್ಟ್ ಗಳನ್ನು ನೋಡಿದ. ಅಲ್ಲಿ ಕಾಣಿಸಿದ ಸುಂದರಿಯೊಬ್ಬಳ  ಭಾವಚಿತ್ರ ನೋಡಿ ದಂಗಾದ ಲಲಿತ್..
ಹೆಸರು ನಿವೇದಿತಾ.. ಕಾಲೇಜು ಕನ್ಯೆ.. ತುಂಟ ನಗುವಿನ ಆ ಮುಖ ತನ್ನ ಗಾಳಕ್ಕೆ ಬೀಳಬಹುದೇ... !! ಅರೆಕ್ಷಣ ಚಿಂತಿಸಿ ,ಕೂಡಲೆ ಕನ್ ಫರ್ಮ್ ಮಾಡಿದ.

ಜೊತೆಗೆ 'ಬಿ ಮೈ ಫ್ರೆಂಡ್ ಫಾರ್  ಎವರ್' ಎಂದು ಮೆಸೇಜ್ ಕಳುಹಿಸಿದ. 

ಕೂಡಲೇ ಆ ಕಡೆಯಿಂದ  'ಇಟ್ ಈಸ್ ಮೈ ಪ್ಲೆಶರ್' ಎಂಬ ಪ್ರತ್ಯುತ್ತರ. 

ಕುಳಿತಲ್ಲೇ ನಸುನಗೆ ಬೀರಿದ. ಲಲಿತ್ ಅಗರ್ವಾಲ್ ಹೆಸರು ಯುವ ಪೀಳಿಗೆಗೆ ಪರಿಚಿತವೇ. ಆಗೊಮ್ಮೆ ಈಗೊಮ್ಮೆ ಪತ್ರಿಕೆಗಳಲ್ಲೂ ರಾರಾಜಿಸುತ್ತಿದ್ದ ತನ್ನ ಮುಖ. ಅಪ್ಪನ ಉದ್ಯಮದ ಕೋಟಿಗಟ್ಟಲೆ ಹಣದ ಏಕೈಕ ವಾರಸುದಾರ, ಯುವತಿಯರ ನಿದ್ದೆ ಕದಿಯುವಂತಿರುವ ಸುಂದರ ಮೊಗ.. ಇಷ್ಟು ಸಾಲದೇ ನನ್ನನ್ನು ಗುರುತಿಸಲು.. ಹೆಮ್ಮೆಯಿಂದ  ಬೀಗಿತ್ತು ಮನ.

ಲಲಿತ್ ಶೋಕಿಗೆ ಬಲಿ ಬೀಳದ ಹುಡುಗಿಯರೇ ಇಲ್ಲ ಎಂಬ ಮಾತು ಅವನ ಗೆಳೆಯರ ವಲಯದಲ್ಲಿ ಪ್ರಸಿದ್ಧ.ಹೊಸ ಹೊಸ ಚೆಲುವೆಯರ ಕೈ ಹಿಡಿದೋ. ಸೊಂಟ ಬಳಸಿಯೋ ವೀಕೆಂಡ್ ಕಳೆಯುವುದು ಅವನ ಖಯಾಲಿ. ಗೆಳೆಯರೆಲ್ಲ ಇವನ ಅದೃಷ್ಟಕ್ಕೆ  ಕರುಬುವಂತಿತ್ತು ಆ ವೈಭವ. 

ತಡ ಮಾಡದೇ ಅವಳ ಪ್ರೊಫೈಲನ್ನು ಪರೀಕ್ಷಿಸಿದ. ಅವಳ  ಸುಂದರ ಫೊಟೊಗಳಿದ್ದ ಆಲ್ಬಮ್ಮನ್ನೇ ನೋಡುತ್ತಾ ಕುಳಿತ. ಅಪ್ರತಿಮ ಸುಂದರಿಯಾದರೂ, ಅವಳ ಉಡುಪುಗಳು ಅವಳನ್ನು  ಮಧ್ಯಮ ವರ್ಗದಲ್ಲೇ ಗುರುತಿಸುವಂತಿತ್ತು. ಸುಲಭದಲ್ಲೇ ತನ್ನ ಗಾಳಕ್ಕೆ ಸಿಗುವ ಮೀನಿದು ಎಂದುಕೊಂಡ.

ಎಫ್. ಬಿ ಯ ಪರಿಚಯ ಬೆಳೆಯಲು ತಡವಾಗಲಿಲ್ಲ. ಇವನ ಮಾತುಗಳಿಗೆಲ್ಲ ಅವಳ ಸೂಕ್ತ ಪ್ರತಿಕ್ರಿಯೆ, ಅವಳ ಫೋನ್ ನಂಬರ್ ಬೇಗನೇ ಪಡೆಯುವಲ್ಲಿ ಯಶಸ್ವಿಯಾಗಿಸಿತು. ಈಗೆಲ್ಲ ಫೋನ್ ಮೂಲಕವೇ ಸಂಭಾಷಣೆ. ಸ್ನೇಹದ ಮಾತುಗಳು ಪ್ರೀತಿಯ ಕಡೆಗೆ ತಿರುಗಲು ಹೆಚ್ಚು ಸಮಯ ಹಿಡಿಯಲಿಲ್ಲ. 

ತನ್ನ ಬಲೆಯನ್ನು ಇನ್ನಷ್ಟು ಅಗಲವಾಗಿ ಬೀಸಲು ಬಯಸಿದ ಲಲಿತ್. ಬೇಕೆಂದೇ ಒಂದೆರಡು ದಿನ ತನ್ನ ಮೊಬೈಲನ್ನು ಆಫ್ ಮಾಡಿಟ್ಟ.  ಆ ಎರಡು  ದಿನಗಳಲ್ಲಿ ಎಫ್ ಬಿ ಯಲ್ಲಿ ಅವಳ ಕಾತರದ ಮೆಸೇಜುಗಳು ತುಂಬಿ ತುಳುಕುತ್ತಿದ್ದವು. 

ಈ ಬಿಸಿ ಆರುವ ಮೊದಲೇ ಅವಳನ್ನು ತನ್ನ ದಾರಿಗೆಳೆಯಲು ನಿರ್ಧರಿಸಿ ಅವಳಿಗೆ ಫೋನ್ ಮಾಡಿದ. 
ಡಿಯರ್ . ನಿನ್ನ ಮರೀಬೇಕಂತಾನೆ   ಎರಡು ದಿನ ನಿನ್ನ ಸಂಪರ್ಕದಿಂದ ದೂರ ಇದ್ದೆ. ಆದರೆ ನೀನಿಲ್ಲದೆ ನಂಗೆ ಬದುಕು ಸಾಧ್ಯವಿಲ್ಲ ಅನ್ನಿಸಿಬಿಟ್ಟಿದೆ. ನಂಗೆ ನಿನ್ನ ನೋಡ್ಬೇಕು.. ಈ ಸಂಡೆ ನಂಗೆ ಸಿಗ್ತೀಯಾ.. ಪ್ಲೀಸ್.. ಇದು ನನ್ನ ಸಾವು ಬದುಕಿನ ಪ್ರಶ್ನೆ.. ನೀನು ಬಾರದೆ ಇದ್ದರೆ ಈ ಜೀವ ಉಳಿಯಲ್ಲ.. ಯೋಚಿಸು ಅಂದ.

ಅತ್ತ ಕಡೆಯಿಂದ  ಕ್ಷಣ ಮೌನದ ನಂತರ ಅವಳ ನಾಚಿಕೆ ಬೆರೆತ ಸ್ವರ ಕೇಳಿಸಿತು. ಭೇಟಿಯಾಗ್ಬೇಕಾ..?? ನಂಗ್ಯಾಕೋ ಭಯ ಆಗುತ್ತೆ. ನಮ್ಮ ಮನೆಯವರಿಗೆ ಗೊತ್ತಾದರೆ ನನ್ನ ಮನೆ ಒಳಗೆ ಸೇರಿಸಲ್ಲ.. ಏನ್ಮಾಡ್ಲಿ..'

ಈ ಮಿಡಲ್ ಕ್ಲಾಸ್ ಹಣೇಬರಹಾನೇ ಇಷ್ಟು.. ಥತ್.. ಅಂದುಕೊಂಡ ಮನದಲ್ಲಿ.. ಆದರೆ ಮಾತುಗಳಿಗೆ ಜೇನಿನ ಸವಿ  ತುಂಬಿ ' ನಾನಿಲ್ವಾ.. ಅಷ್ಟ್ಯಾಕೆ ಭಯ.. ಈ ಸಂಡೆ ಬೆಳಗ್ಗಿನಿಂದ ಸಂಜೆಯವರೆಗೆ ಒಟ್ಟಿಗೆ ಕಳೆಯೋಣಾ.. ಮತ್ತೆ ನಾನೇ ನಿಮ್ಮ ಮನೆಗೆ ಬಂದು ನಿನ್ನ ಅಪ್ಪ ಅಮ್ಮನ ಹತ್ರ ನಿಮ್ಮ ಮಗಳನ್ನು ಜೀವನಪೂರ್ತಿ ನಂಗೇ ಕೊಟ್ಬಿಡಿ ಅಂತ ಕೇಳ್ತೀನಿ.. ಸರೀನಾ.. ಈಗ್ಲಾದ್ರು ಒಪ್ಕೋ.. 
ಆ ಕಡೆಯಿಂದ  ಅರೆ ಮನಸ್ಸಿನ 'ಹುಂ' ಎಂಬ ಉತ್ತರ ಸಿಕ್ಕಿತು. 
ಲಲಿತ್ ಕುಶಿಯಿಂದ  'ಐ ಲವ್ ಯೂ ಡಿಯರ್.. ಥ್ಯಾಂಕ್ಯೂ.. ಥ್ಯಾಂಕ್ಯೂ' ಎಂದು ಕಿರುಚಿದ. 
ತನ್ನ ಗೆಳೆಯರೆಲ್ಲರಿಗೂ ಇವಳ ಎಫ್ ಬಿ ಯ ಪ್ರೊಪೈಲನ್ನು ತೋರಿಸಿ ಈ ಸಂಡೆ ಇವಳ ಜೊತೆ ಎಂದು ಬೀಗಿದ. ಆವಾಗಾವಾಗ ಫೋನ್ ಮಾಡಿ ಡಿಸ್ಟರ್ಬ್ ಮಾಡದಂತೆ ನಾಳೆ ನನ್ನ ಮೊಬೈಲ್ ಇಡೀ ದಿನ ಆಫ್ .. ಅವ್ಳು ಮತ್ತು ನಾನು ಇಬ್ಬರೇ.. ಹೆಮ್ಮೆಯಿಂದೆಂಬಂತೆ ನುಡಿದ. 

ಒಳ್ಳೇ ಚಾನ್ಸ್ ಹೊಡೆದೆ ಬಿಡು ನೀನು.. ಲಕ್ಕಿ ಫೆಲೋ.. ಎಂಜಾಯ್ ಮಾಡು.. ಎಂದು ಬೆನ್ನು ತಟ್ಟಿ ಕೀಟಲೆಯ ನಗೆ ನಕ್ಕರು ಗೆಳೆಯರು. 

ಸೋಮವಾರ ಎಲ್ಲ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಇವನ ಚಿತ್ರಗಳು ಪ್ರಕಟ ಗೊಳ್ಳುತ್ತಿದ್ದವು. ಕೆಳಗೆ ನಗರದ ಶೀಮಂತ ಉದ್ಯಮಿಯ ಪುತ್ರ ಲಲಿತ್ ಅಗರ್ವಾಲ್ ಅಪಹರಣ. ನಕ್ಸಲೈಟ್ ಗಳ ಕೈವಾಡ. ಒತ್ತೆ ಹಣಕ್ಕಾಗಿ ಬೇಡಿಕೆ. 

ಬೆರಗಾದ ಲಲಿತ್ ನ ಗೆಳೆಯರು ಎಫ್ ಬಿ ಓಪನ್ ಮಾಡಿ ನಿವೇದಿತಾಳನ್ನು ಹುಡುಕಿದರು. ಆ ಹೆಸರಿನ ಅಕೌಂಟ್ ಡಿಲೀಟ್ ಆಗಿತ್ತು.. !! 

29 comments:

 1. vastavakke hidida kannadi

  ReplyDelete
 2. ಅನೀರಿಕ್ಷಿತ ತಿರುವು.....! ಊಹೆ ಮಾಡ್ಲಿಕ್ಕೂ ಆಗ್ಲಿಲ್ಲ ಕಣ್ರೀ....

  ReplyDelete
 3. ವಸಂತ್ ಕುಮಾರ್May 11, 2012 at 4:07 PM

  ಕುತೂಹಲಕಾರಿ ಪ್ರೇಮಕಥೆಗೊಂದು ರೋಚಕ ತಿರುವು...

  ReplyDelete
 4. ಹೌದು ನಾನು ಅವನು ಫ್ರಾಡ್ ಅಂದ್ಕೊಂಡೆ..ನೀವು ಅವಳನ್ನೇ ಫ್ರಾಡ್ ಮಾಡಿಬಿಟ್ರಿ....ಸಕ್ಕತ್ತಾಗಿದೆ..

  ReplyDelete
 5. ಏನ್ ಮೇಡಂ ಫುಲ್ ಸಸ್ಪೆನ್ಸ್ ಕಥೆ :)
  ಚೆನ್ನಾಗಿದೆ. ನಿಜವಾಗ್ಲೂ ಊಹೆ ಮಾಡಕ್ಕೆ ಆಗ್ಲಿಲ್ಲ
  ಸ್ವರ್ಣಾ

  ReplyDelete
 6. ಅಕ್ಕಾ ನಿಮ್ಮ ಎಂದಿನ ಕಥೆಗಳಂತೆ ಇದು ಕೂಡಾ ಸೂಪರ್ . ಏನೋ ಆಗುತ್ತೇ ಅನ್ಕೊಂಡೆ , ಅದು ಇನ್ನೇನೊ ಆಯ್ತು :-)):-)):-)):-))

  ReplyDelete
 7. Kathe superb agide.... olle twist ide katheyanna munduvaresi ...pls

  ReplyDelete
 8. ಆನ್`ಲೈನ್ ಲವ್ ಜೀವನಕ್ಕೆ ಅಪಾಯಕಾರಿ .. ಹಾಗು ನಮ್ಮ ಸ್ನೇಹಿತರು , ನಮ್ಮ ಗ್ರೂಪ್ , ನಮ್ಮ ಪ್ರೊಫೈಲ್ ಅಂತೆಲ್ಲಾ ಎಷ್ಟೋ ಖುಷಿಯಾಗಿ ಮಾತಾಡ್ತೇವೆ.. ಅದಾರೆ ಇದೆಲ್ಲಾ ಕ್ಷಣ ಮಾತ್ರದಲ್ಲೇ ನಾಶವಾಗುವ ವೈಜ್ಞಾನಿನ ವ್ಯವಸ್ಥೆ ಈ ಅಂತರ್ಜಾಲ ತಂತ್ರಜ್ಞಾನದಲ್ಲಿದೆ ಅನ್ನುವುದನ್ನು ಒಂದು ನಿಮಿಷ ಆಲೋಚಿಸಿದಾಗ .. ಈ ಸಾಮಾಜಿಕ ತಾಣಗಳ ಬಗ್ಗೆ ನಂಬಿಕೆಯ ವಾತಾವರಣ ನಿರ್ಮಾಣ ಆಗೋದು ತುಂಬಾ ತುಂಬಾ ಕಷ್ಟ .. ಹಾಗು ಈಮೇಲ್ ಉಪಯೋಗ ಒಂದು ಮಾತ್ರ ಎಷ್ಟೇ ಅನಿವಾರ್ಯ ಅನ್ನಿಸಿದರೂ ಸಹ .. ಅದರಲ್ಲೂ ಕಳ್ಳತನ ಮಾಡುವ ಖದೀಮರು ಈಗ ಅನೇಕ ಸಂಖ್ಯೆಯಲ್ಲಿ ಸುತ್ತಾಡುತ್ತಿದ್ದಾರೆ .. ಒಟ್ಟಾರೆ ಈ ಯಾಂತ್ರಿಕ ಯುಗದಲ್ಲಿ ಅಂತರ್ಜಾಲ ಬಳಕೆಯಲ್ಲಿ ಮಹಾನ್ ಅನುಭವ ಪಡೆದು ನಂತರ ಇದರ ಸಂಪೂರ್ಣ ಉಪಯೋಗಕ್ಕಾಗಿ ಚಿಂತಿಸಬೇಕು .. ಒಟ್ಟಾರೆ ಈ ಆನ್`ಲೈನ್ ಫ್ರೆಂಡ್`ಶಿಪ್ & ಲವ್ .. ಎರಡೂ ಸಹ ಒಂದು ರೀತಿಯಲ್ಲಿ ಹಾನಿಕಾರಕ ಆಗುವ ಅನೇಕ ಸಾಧ್ಯತೆಗಳಿವೆ.. ಅದಕ್ಕೆ ಪದೇ ಪದೇ ನಾ ಬರೆಯೋದು , ಹೇಳೋದು
  "ಈ ಬಾಳೊಂದು ಚದುರಂಗದಾಟ ಇದ್ದಂತೆ .. ಇಲ್ಲಿ ಪ್ರತೀ ಹೆಜ್ಜೆ ಹೆಜ್ಜೆಗಳಿಗೂ ಮಾಡಬೇಕು ಹತ್ತಾರು ಸಾಧ್ಯತೆಗಳ ಚಿಂತೆ" .. :) :)

  ReplyDelete
 9. ಅನಿತಾ,

  ತುಂಬಾ ಕುತೂಹಲಕಾರಿಯಾಗಿದೆ ಕಥೆ... ಚೆನ್ನಾಗಿದೆ.. ಇಷ್ಟವಾಯಿತು.. ಯಾವುದಾದ್ರೂ ಪತ್ರಿಕೆಗೆ ಕಳಿಸ್ಬೇಕಿತ್ತು! :)

  ReplyDelete
 10. Anitha..Super kathe...tumba ishta aythu :))

  ReplyDelete
 11. ಸುಲಲಿತ ಬರಹ ಮೇಡಂ,

  ವಾಸ್ತವಕ್ಕೆ ಹಿಡಿದ ಕನ್ನಡಿ ಇದು.

  ಕಠೆಯಲ್ಲಿ ಅನಿರೀಕ್ಷಿತ ತಿರುವು ಕೊಡುವುದು ನಿಮ್ಮ ಸ್ಪೆಷಾಲಿಟಿ.

  ಒಟ್ಟಾರೆ ಸೂಪರ್ರೂ....

  ReplyDelete
 12. ಕುತೂಹಲಕಾರಿ ಕಥೆ. ಚೆನ್ನಾಗಿದೆ. ಇಷ್ಟವಾಯಿತು

  ReplyDelete
 13. Olle interesting katheri.. Arambha nanna nirreksheyanthe ithu.. Climax Unimaginable.. superb

  ReplyDelete
 14. ಕಥೆ ತುಂಬಾ ಚೆನ್ನಾಗಿದೆ ಅನಿತಾ... ಪತ್ರಿಕೆಗಳಿಗೆ ಕಳಿಸಿ...

  ReplyDelete
 15. ಒಹ್! ಇದು ಕತೆ...ತುಂಬಾ ಚೆನ್ನಾಗಿದೆ...ಅಂತ್ಯವನ್ನು ನಿಜಕ್ಕೂ ಅನಿರೀಕ್ಷಿತ ತಿರುವು....

  ReplyDelete
 16. ಕೊನೆಗೆ ಹುಡು ಗಿ ಪ್ರೊಫೈಲ್ ಗಿಂತ ಕುರೂಪಿ ಅಂದ್ಕೊಂಡೆ... ನೀವು ಕ್ಲೈ ಮ್ಯಾಕ್ಸ್ ನ ಒಂದು ಸಾಧ್ಯತೆಯನ್ನು ಕುತುಹಲಭರಿತವಾಗಿ ಹೆಣೆದಿದ್ದಿರಿ
  ***ಜೀವನ್

  ReplyDelete
 17. anireekshita tiruvina kathe thumba chennagide

  ReplyDelete
 18. Nail biting climax.....super....aisaa bhi ho saktaa hai...be cautious young guys

  ReplyDelete
 19. ವಾವ್ ಭಯಂಕರ ಇದೆ. ನನಗೂ ಎಪ್ ಬಿ ಲಿ ಕೆಲವೊಮ್ಮೆ ಫೇಕ್ ರಿಕ್ವೆಸ್ಟುಗಳು ಬರ್ತಾ ಇರುತ್ತೆ. ಆನಂದಿ, ... ಶರ್ಮ, .. ಭಟ್ ಅಂತೆಲ್ಲ. ಹುಡುಗ್ರಿಗೆ ಆದ್ರೆ ಹುಡುಗಿಯರು, ಹುಡುಗಿಯರಿಗಾದ್ರೆ ಹುಡುಗ್ರುದ್ದು ಈ ತರದ ಫೆಕ್ ಬರೋದು ಜಾಸ್ತೀನೆ ಆಗ್ಬುಟ್ಟಿದೆ ಈಗ. ಅದೆಲ್ಲಾ ನೆನ್ಪಾಯ್ತು ನಿಮ್ಮ ಬರಹ ಓದಿ.

  ಹುಡುಗಿಗೆ ಗಾಳ ಹಾಕಕ್ಕೆ ಕಾಯ್ತಿರೋ ಅವನಿಗೇ ಏನೋ ಗಾಳ ಇಟ್ಟಿರ್ತಿರಾ ಅಂತ ಊಹೆ ಮಾಡಿದ್ದೆ. ಆದ್ರೆ ಈ ತರ ಅಂತ ಅಂದ್ಕೊಂಡಿರಲಿಲ್ಲ.. ಚೆನ್ನಾಗಿದೆ ಅನೀತಕ್ಕ. ತಡವಾದ ಪ್ರತಿಕ್ರಿಯೆಗೆ ಕ್ಷಮೆಯಿರಲಿ :-)

  ReplyDelete
 20. ಸುಪ್ತ ಮನಸ್ಸಿನೊಳಗೊನ್ದು ಸುತ್ತು :May 11,2012.
  ಕಥೆಯೋ....!!!! ನೈಜ್ಯ ಘಟನೆಯೋ....!!! - ಮೊಸಹೋಗುವ ಹುಡುಗರಿಗಿಂತ ಮೋಸ ಹೋಗುವ ಹುಡುಗಿಯರೇ ಹೆಚ್ಚು ಇಂತಹ ತಾಣಗಳಲ್ಲಿ... ಕುತೂಹಲದಿಂದ ಕಡೆಯವರೆಗೂ ಓದಿಸಿಕೊಂಡು ಹೋಗುವ ನಿಮ್ಮ ಲೇಖನದಲ್ಲಿ ಕಡೆಯಲ್ಲಿ ತಿರುವ ಅನಿರೀಕ್ಷಿತ... ಯಾರು ನಿರೀಕ್ಷಿಸದ ಕಹಿ ಸತ್ಯವನ್ನು ಲೇಖನದಲ್ಲಿ ತಂದಿದ್ದೀರಾ... ನನಗೆ ಪ್ರತಿಕ್ರಿಯೆ ನೀಡುವುದಕ್ಕೆ ಕಷ್ಟವಾಗಿತ್ತು.... ಇದು ನೈಜ್ಯವೋ ಅಥವಾ ನಿಮ್ಮ ಮನದಲ್ಲಿ ಮೋಡಿದ ಲೇಖನವೋ ಎಂದು....!!!????

  ReplyDelete
 21. Raj Kumar:

  :) VERY NICE

  ReplyDelete
 22. ಊಹೆ ಮಾಡದ ತಿರುವು... ಸುಂದರ.

  ReplyDelete
 23. ವಿಷಯವನ್ನೆತ್ತಿಕೊಳ್ಳುವಲ್ಲಿ ಸ್ವಂತಿಕೆಯೂ, ವಿವರಣೆಯಲ್ಲಿ ನೀವು ತೋರಿಸುವ ಚಾತುರ್ಯವೂ, ನಿಮ್ಮನ್ನು ಇತರ ಕಥೆಗಾರರಿಂದ ಭಿನ್ನ ಎನಿಸುತ್ತವೆ. ನಿಮ್ಮ ಕಥೆಗಳಲ್ಲಿ ಬರುವ ಅನಿರೀಕ್ಷಿತ ತಿರುವುಗಳು ವಿಸ್ಮಯಪ್ರದವಾಗಿರುತ್ತವೆ. ಆಲ್ಫ್ರೆಡ್ ಹಿಚ್ಕಾಕ್ ಬದುಕಿದ್ದಿದ್ದರೆ ನಿಮ್ಮ ಕಥೆಗಳನ್ನು ತನ್ನ ಸಿನಿಮಾಗಳಿಗೆ ವಸ್ತುವನ್ನಾಗಿ ಖಂಡಿತ ಆರಿಸಿಕೊಳ್ಳುತ್ತಿದ್ದ. ನಾನು ನಿಮ್ಮ ಕಥೆಗಳ ಪ್ರಾಮಾಣಿಕ ಅಭಿಮಾನಿ. ಹೆಚ್ಚು ಹೆಚ್ಚು ಕಥೆಗಳನ್ನು ಬರೆದು ನಮ್ಮೆಲ್ಲರನ್ನೂ ರಂಜಿಸ ಬೇಕಾಗಿ ಕೋರಿಕೆ.

  ಶುಭ ಹಾರೈಕೆಗಳೊಂದಿಗೆ..
  ಗುಣಶೇಖರ್,ಬೆಂಗಳೂರು.

  ReplyDelete
 24. ಶಾಕ್ ಲಗಾ :-) ಸೂಪರ್ ನಿರೂಪಣೆ, ಸೂಪರ್ ಕ್ಲೈಮಾಕ್ಸ್.. ಒಂದು ಫಿಲ್ಮ್ ತೆಗವಲಕ್ಕು :-)

  ReplyDelete
 25. ಕ್ಷೈಮ್ಯಾಕ್ಸ್ ಅನಿರೀಕ್ಷಿತ

  ReplyDelete