Pages

Total Visitors

Saturday, June 30, 2012

* ವಿಪರ್ಯಾಸ


ಒಂದು ಹೊಸ ಚಂದ್ರನ 
ಉದಯವಾಯಿತು 
ನಡುವೆ ಮೋಡದ ಆಣೆಕಟ್ಟು .........

ರಾಶಿ ರಾಶಿ ನಕ್ಷತ್ರಗಳ ಮಡಿಲಿಗೆ 
ತುಂಬಿಸಿತ್ತು
ಕತ್ತಲೆಯ ಪಕ್ಕಕ್ಕಿಟ್ಟು ...........

ಸಂತಸಕ್ಕೆ ರೆಕ್ಕೆ 
ಮೂಡಿಸಿತು 
ಹಾರಲು ಆಗಸವ ಕಿತ್ತಿಟ್ಟು ..........

ಬಾಳ ಕಡಲು ಗಾಳಿಯನ್ನೆಲ್ಲ
ದೂರಸರಿಸಿತ್ತು 
ನನ್ನ ಹಾಯಿ ದೋಣಿಯಲ್ಲಿಟ್ಟು ........

ಬದುಕು ದುಃಖವನ್ನೆಲ್ಲ 
ಕೊಂಡೊಯ್ದಿತು 
ನನಗೊಂದು ಅಳುವ ಹೃದಯವನಿತ್ತು ....


11 comments:

  1. ಎಲ್ಲಾ ವಿಪರ್ಯಾಸಗಳ ನಡುವೆ ಬದುಕು ಅಲ್ವಾ ಅನಿತಕ್ಕ . ಒಂದು ಬಿಟ್ಟು ಇನ್ನೋಂದುಕೊಂಡಂತೆ .

    ReplyDelete
  2. ಓಹೋ ಅದ್ಭುತ ರಾಗ

    ಹೊಸ ಚಂದ್ರನ ಉದಯವಾಯಿತು

    ನಡುವೆ ಮೋಡಗಳ ಆಣೆಕಟ್ಟು

    ಸುಂದರ ಅತಿ ಸುಂದರ ಒಳ ನೋವಿನ ಆಗರ ಒಮ್ಮೆಲೇ ಹೃದಯ ಸ್ಪಂಧನ ನಿಮ್ಮ ಹಾಡಿಗೆ ನಿಮ್ಮ ರಾಗಕ್ಕೆ ಇದನ್ನು ಕೇಳ ಅವಕಾಶ ಕೊಟ್ಟದಕ್ಕೆ ಹೃದಯದ ಧನ್ಯವಾದ ಇನ್ನು ಬರಲಿ ಇ ತರಹದ ಪ್ರಯತ್ನ ಹಾಗು ಮತಷ್ಟು ಇದ್ದಾರೆ ದಯವಿಟ್ಟು ಕೇಳಿಸಿ ಮನಸ್ಸಿಗೆ ಹಿತವೆನಿಸಿತು

    ReplyDelete
  3. ಈ ನಿನ್ನ ಕವಿತೆ , ನಯನ ಮನೋಹರ ಚಿತ್ರಗಳನ್ನೊಡಗೂಡಿ, ಗಂದರ್ವ ಸದೃಶ ಆಲಾಪನೆಯ ಪಲ್ಲಕ್ಕಿಯನ್ನೇರಿ ಬಂದು ಅಮಿತಾನಂದವನ್ನು ನೀಡಿತು ಎನ್ನಲು ಹರ್ಷಿಸುತ್ತೇನೆ :))))

    ReplyDelete
  4. ಅನಿತ ಭಾವಕೆ
    ಅಮಿತ ರಾಗ
    ಭಾವರಾಗಕೆ
    ಈಗ ಬಂದಿದೆ ಸುಯೋಗ..

    ಅನಿತಳ ಸಾಲು
    ವಿಪರ್ಯಾಸದ ಗೀಳು
    ಮನ ತಣಿಸಿದ
    ಮಧುರ ಹನಿ
    ಈ ಅಮಿತಳ ಧನಿ

    ಅನಿಮಿತ ಬೆರೆತು
    ಜೀವ ತುಂಬಿಸಿ
    ಗಾನ ಕೇಳಿತು
    ಯಾವ ಕರ್ಮವೂ ಇಲ್ಲ
    ಕೋಗಿಲೆಯ ಹಿಂಪೊಂದು
    ನನ್ನ ಮನ ತುಂಬಿದೆ...

    ತುಂಬಾ ಚೆನ್ನಾಗಿದೆ ಅ(ಮಿ)ನಿತಾ ಸಾಹಿತ್ಯ ಮತ್ತು ಸಂಗೀತ ಬೆರತ ಸುಯೋಗ ನಮಗೀಗ

    ReplyDelete
    Replies
    1. ಬಾಳ ಕಡಲು ಗಾಳಿಯನ್ನೆಲ್ಲ ದೂರ ಸರಿಸೆ .ಸಾಲುಗಳು . ನಿಮ್ಮ ವೀಡಿಯೋ ಜೊತೆಗಿನ ಕವನದಲ್ಲಿಲ್ಲ ..
      ನಿಮ್ಮ ಸುಂದರ ಕವನಕ್ಕೆ ಧ್ವನಿಯಾದ ಅಮಿತಾ ,ಅರ್ಥಪೂರ್ಣ ಚಿತ್ರಗಳಿಂದ ಸೌಂದರ್ಯ ಹೆಚ್ಚಿಸಿದ ರಾಮ್ ನರೇಶ್ ಮಂಚಿ ಎಲ್ಲರೂ ಅಭಿನಂದನಾರ್ಹರು .
      ಅಮಿತಾ ಅವರ ಸ್ವರ ಮಾದುರ್ಯ ನನ್ನ ಮನಸ್ಸಿನ ಅಂತರ ಗಂಗೆ ಯಾಗಿದೆ ..

      Delete
  5. ಸೋದರಿ ಅನಿತಾ, ಹಿತವಾಯಿತು!! ಸುಂದರ, ಮಧುರ!! ಸಮಯವಾದಾಗ ಇತರ ಬರಹಗಳನ್ನು ನೋಡುವೆ.

    ReplyDelete
  6. ಹೌದು ಮನಸ್ಸು ವಿಹ್ವಲ ಗಂಗೆ. ಮೊದಲಿಂದ ಸೌಂದರ್ಯ ತುಂಬಿದ ಸಾಲುಗಳ ಹೊತ್ತುತಂತು ಕಡೆಗೆ ನೀವು ಹಿಂಡಬಾರದಿತ್ತು ಹೃದಯ.

    ReplyDelete
  7. ಸಾಹಿತ್ಯ...
    ಚಿತ್ರ... ಚಿತ್ರಣ...

    ಹಾಡಿದ ಕಂಠ ಎಲ್ಲವೂ ಸೊಗಸು....

    ReplyDelete
  8. ಚೆನ್ನಾಗಿದೆ, ಸುಂದರವಾಗಿದೆ ಸೊಗಸಾಗಿದೆ ಎಂದು ಏನಲ್ಲ ಹೇಳಿದರೂ ಪದಗಳು ಸಾಲಾದುತ್ತದೆ, ಈ ಕವಿತೆಯ ವರ್ಣಿಸಲು.

    ReplyDelete