Pages

Total Visitors

Wednesday, August 24, 2011

ಕರೆದರೆ ಬರಬಾರದೇ..





ಪ್ರೀತಿಯ .. ಹುಂ... ಹೀಗೆಂದು  ಹೇಳಬಹುದೇ ಇನ್ನು ನಿನ್ನನ್ನು.. ಎಷ್ಟು ಕಾಲವಾಯಿತು ಹೇಳು ನನ್ನೊಡನೆ ಮಾತನಾಡದೆ.. ನಿನಗಾಗಿ ಕಾದು ಹಂಬಲಿಸುವ ಜೀವವೊಂದಿಲ್ಲಿದೆ ಎಂಬ ನೆನಪಾದರೂ ನಿನಗಿದೆಯೇ?

ಇದ್ದಿದ್ದರೆ ಹೀಗಾ  ನಿನ್ನ ವರ್ತನೆ..? ಮೊನ್ನೆ ಮನೆಯೊಳಗೆ  ಕಾಲಿಟ್ಟವನೇ ಮನೆಯ  ಹಿರಿಯರ ಕಾಲು ಹಿಡಿದು ನಮಸ್ಕರಿಸಿ ಅವರೊಡನೆ ನಾಲ್ಕಾರು ದಿನ ಕಳೆದೆ, ನನ್ನ ಕಡೆಗೆ ಕಣ್ಣೆತ್ತಿಯೂ ನೋಡದೆ..





ಅಪಮಾನ, ಬೇಸರಗಳಿಂದ ನಿನ್ನೆದುರೇ ಕೊಡೆ ಇಲ್ಲದೆ ತೋಟಕ್ಕೆ ಹೋಗಿ ಒದ್ದೆಯಾಗಿ ಬಂದೆ. ನೀನಾದರು ನೋಡಿಯೂ ನೋಡದಂತೆ ನಾಟಕ ಮಾಡಿದೆ ಅಲ್ವಾ..




ನಿನಗದೆಲ್ಲಿಯ ಕನಿಕರ ಹೇಳು. ನಾನೇನು ಸದಾ ಕಾಲ ನೀನು ನನ್ನೊಡನೆ ಇರು ಎಂದು ಬೇಡಿದ್ದೇನೆಯೇ? ಈ ಮಳೆಗಾಲದ ತಣ್ಣಗಿನ ದಿನಗಳಲ್ಲಿ ನಿನ್ನ ಬಿಸಿ ತೆಕ್ಕೆಯಲ್ಲಿ ಕರಗಿ ಹೋಗುವ ನನ್ನ ಬಯಕೆಯಲ್ಲೇನಿದೆ ತಪ್ಪು.. ನಾನಿಲ್ಲಿ ನಿನ್ನ ಪ್ರೀತಿಯ ಆಲಿಂಗನಕ್ಕೆ ಕಾಯುತ್ತಾ ಕುಳಿತಿದ್ದರೆ ನೀನಾಗಲೇ ಹೊಸಿಲಿಳಿದು ಹೊರಗೆ ಕಾಲಿಟ್ಟಿದ್ದೆ. ನಿನ್ನ ಮೇಲಿನ ಸಿಟ್ಟಿನಲ್ಲಿ ಷವರ್ ಬಿಟ್ಟು ತಣ್ಣಗಿನ ನೀರಿಗೆ ತಲೆ ಒಡ್ಡಿ ಸಮಯದ ಪರಿವೆಯಿಲ್ಲದೆ ಕುಳಿತಿದ್ದೆ.

ಮರುದಿನ ಬೆಳಗ್ಗೆ ಯಾಕೋ ಮೊಗವೆಲ್ಲ ಕೆಂಪಾಗಿ ತಲೆ ಭಾರ ಅನ್ನಿಸುತ್ತಿತ್ತು.ಬಿಸಿ ಉಸಿರು ಸುಡುತ್ತಿತ್ತು. ಕಣ್ಣು ಬಿಟ್ಟು ನೋಡಿದರೆ ನೀನಿದ್ದೆ ನನ್ನೊಳಗೆ. ನೀನಾಗಿ ನನ್ನನಾವರಿಸುವಂತೆ ಮಾಡಿದ ನನ್ನ ಹಠಕ್ಕೆ  ಹೆಮ್ಮೆ ಎನಿಸಿತ್ತು. ಮೈ ತುಂಬಾ ಹೊದಿಕೆ ಹೊದ್ದು  ನಿನ್ನ ಸ್ಪರ್ಷಕ್ಕೆ ಕಂಪಿಸುತ್ತಿರುವ ಮೈಯನ್ನು ಸಾಂತ್ವನಗೊಳಿಸಿದೆ.

 ಮನೆಯಲ್ಲಿ ಯಾರೋ ಮಾತನಾಡುವುದು ಕೇಳಿಸುತ್ತಿತ್ತು.


ಮೊನ್ನೆ ನಮಗೆಲ್ಲ ಬಂದಿತ್ತು ಜ್ವರ .. ಈಗ ಇವಳ ಸರದಿ...

5 comments:

  1. ಜ್ವರ ಬರಲಿ ಎಂದು ಯಾರಾದ್ರೂ ಬಯಸುತ್ತಾರಾ?... ಶಾಲೆಗೆ ಹೋಗುವ ಮಕ್ಕಳನ್ನು ಬಿಟ್ಟು...!!!

    ReplyDelete
  2. enree idu makkalata..nevenoo malkond bidteera...nimmannu doctor hatra karkond malegaladalli aleyo kelsa papa nimmaneyoru madbekalva..

    ReplyDelete
  3. Hoi! idenidenidenidu?
    Jwara barbardappa...neenu jwara hidsikondre matte namagyru mahatiyalli chenda chendada lekhanagala udugore koduvudu!?
    So I am totally opposed to your idea of romance with the fever! hahahaha
    I like the variety in your writings Anitha...keep it up.:):):)

    ReplyDelete
  4. ಮರುದಿನ ಬೆಳಗ್ಗೆ ಯಾಕೋ ಮೊಗವೆಲ್ಲ ಕೆಂಪಾಗಿ ತಲೆ ಭಾರ ಅನ್ನಿಸುತ್ತಿತ್ತು.ಬಿಸಿ ಉಸಿರು ಸುಡುತ್ತಿತ್ತು. ಕಣ್ಣು ಬಿಟ್ಟು ನೋಡಿದರೆ ನೀನಿದ್ದೆ ನನ್ನೊಳಗೆ. ನೀನಾಗಿ ನನ್ನನಾವರಿಸುವಂತೆ ಮಾಡಿದ ನನ್ನ ಹಠಕ್ಕೆ ಹೆಮ್ಮೆ ಎನಿಸಿತ್ತು. ಮೈ ತುಂಬಾ ಹೊದಿಕೆ ಹೊದ್ದು ನಿನ್ನ ಸ್ಪರ್ಷಕ್ಕೆ ಕಂಪಿಸುತ್ತಿರುವ ಮೈಯನ್ನು ಸಾಂತ್ವನಗೊಳಿಸಿದೆ.
    ಪ್ರೇಮ ಜ್ವರದ ವರ್ಣನೆ ಚನ್ನಾಗಿದೆ.

    ReplyDelete