Pages

Total Visitors

Saturday, August 20, 2011

ಪಯಣ

ಸಂಜೆ ರಂಗೇರಿದಂತೆ

ಕೆನ್ನೆಯಲ್ಲೂ ಪ್ರತಿಫಲಿಸಿ 

ನೆನಪುಗಳ ದಾರದಿ ಬಿಗಿದು 
ಮಾಲೆಯಾಗಿ ಮುಡಿಸಿ

ಎಂದೋ ಹೇಳಿದ್ದ ಸವಿ ಮಾತುಗಳ 

ಕಾಲ್ಗೆಜ್ಜೆಯಾಗಿ ಜಲ್ಲೆನಿಸಿ

ಮೈಗೆ ತಾಕಿದ್ದ ಬಿಸಿ ಸ್ಪರ್ಶ 

ಬಳೆಗಳಾಗಿ ಕಲಕಲಿಸಿ

ಕೊಟ್ಟಿದ್ದ ಮುತ್ತುಗಳೆಲ್ಲಾ

ಕೊರಳ ಪದಕವಾಗಿಸಿ

ಕಣ್ಣಿಗೆ ಕಣ್ಣು ಸೇರಿದಾಗಿನ 

ಮಿಂಚ ಬೆಳಕಾಗಿಸಿ

ಹೊರಟಿತು ನನ್ನ ಮನ

ಮತ್ತೆ ನಿನ್ನೆಡೆಗೆ ಪಯಣಿಸಿ.. 

7 comments:

  1. idakke full whistle hodedu pratikriye! Tumba chennagide Anitha! :):)

    ReplyDelete
  2. ಸೊಗಸಾಗಿದೆ ಕವನ.

    ReplyDelete
  3. tumba tumba tumba chennagide...!!!:-)

    ReplyDelete
  4. shubha , sukha , santhasada payaNa :-) hpy n sfe jrny:-)shubha , sukha , santhasada payaNa :-) hpy n sfe jrny:-)

    ReplyDelete
  5. ಚೆನ್ನಾಗಿದೆ... ಓದಿಸಿಕೊಳ್ಳುವ ತಾಕತ್ತು ನಿಮ್ಮ ಬರಹಗಳಿಗೆ ಇದೆ....

    ReplyDelete
  6. ಒಂದು ಘಳಿಗೆಯ ಮಹತ್ವದ ಭಾವಗಳು ಹಾಗೆ ಪದಗಳಲ್ಲಿ ಪಯಣಿಸಿದ ನಿಮ್ಮ ನೆನಪಿನ ದೋಣಿ ಗುರಿ ಖುಷಿಯಾಯಿತು.ಕೊರಳಿಗೆ ಪದಕವಾದ ಮುತ್ತುಗಳಿಗೆ ಇನ್ನಷ್ಟು ಮೌಲ್ಯದ ವಜ್ರ,ಪಚ್ಚೆ- ಹವಳಗಳ ಅಲಂಕಾರ ವಿಜೃಂಭಿಸಲಿ. ಅಭಿನಂದನೆಗಳು.

    ReplyDelete