ಹಸಿರೊಡಲಿನ ಬಸಿರೇ
ಇಳೆಯ ದೇಹದುಸಿರೇ
ನೆಲದೊಲುಮೆಯ ಚೇತನವೇ
ಅರಳಿ ನಿಂತ ಸುಮವೇ
ತಂಗಾಳಿಯ ಜೋಕಾಲಿಯ
ಹಾರಾಡುವ ಬಾನಾಡಿಯ
ಕ್ಷಣ ತಡೆದು ನಿಲ್ಲಿಸಿ
ನೆರಳ ಕೊಟ್ಟು ಲಾಲಿಸಿ
ನೆರಳ ಕೊಟ್ಟು ಲಾಲಿಸಿ
ಭೂರಮೆಯ ವಿಸ್ಮಯವೋ
ನೆಲ ಜಲದ ಪ್ರಣಯವೋ
ಕೊಂಬೆ ಕೊಂಬೆಯಲ್ಲು ಕೆಂಪು
ಪಸರಿಸಿದ ಹೂವ ಕಂಪು
ಪ್ರಕೃತಿಯ ಗಡಿಯಾರವ
ತಿರುಗಿಸುವವರ್ಯಾರವ್ವ
ಪರ್ವ ಮಾಸ ವರ್ಷಕಾಲ
ನಿಲ್ಲದೆ ನಡೆವುದೀ ಜಾಲ
ಹೊತ್ತ ತನ್ನದೆಲ್ಲವ
ಪರರಿಗಿತ್ತು ಸಲಹುವ
ತಾಯೇ ನಿನ್ನ ಮಮತೆಗೆ
ಕೊಡಲೇನಿದೆ ಬದಲಿಗೆ ..
ಒಳ್ಳೆಯ ಬರಹಗಾರ್ತಿಯ ಮೂಸೆಯಿಂದ ಆಪ್ತ ಶೈಲಿಯ ಭಾವಗೀತೆ.
ReplyDeletehey..very very nice :)
ReplyDeleteಆಹಾ..!! ಹಸಿರ ಸಿರಿ ತುಂಬಿ ತುಳುಕುತ್ತಿದೆ ನಿಮ್ಮ ಸಾಲುಗಳಲ್ಲಿ.. ಚೆಂದದ ಕವನ ಅದಕ್ಕೆ ತಕ್ಕ ಪೋಟೋ
ReplyDeleteಚೆನ್ನಾಗಿದೆ ಕವನ...ರಾಗ ಕೊಟ್ಟರೆ ಹಾಡುವಂಥದ್ದು
ReplyDeleteಸಾಲಿನಲ್ಲೂ ವನಮಾತೆಯ ಮಮತೆಯೇ ತ್ಯಾಗವೇ... ಬದಲಿಗೆ ತಿರುಗಿಸಿ ಕೊಡೋಕೆ ನಮ್ಮಲ್ಲೇನು ಹೆಚ್ಚಾಗಿ ಇಲ್ಲದಿರುವುದು ವಿಪರ್ಯಾಸ....
ReplyDeleteಸೂಪರ್ ಅನಿ :)